ಅಂಕೋಲಾ : ಪಟ್ಟಣದ ಹುಲಿದೇವರವಾಡದ ಜನ ರಾತ್ರಿ ಗೆಜ್ಜೆಯ ಶಬ್ದಕ್ಕೆ ಕಂಗಾಲಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಶ್ವಾನಗಳು ಒಂದೇ ಸಮನೇ ಕೂಗುತ್ತಿದ್ದು ಭಯದ ವಾತಾವರಣ ಸೃಷ್ಟಿಯಾಗುತ್ತಿದೆ.

ಇಲ್ಲಿ ಪ್ರೇತಕ್ಕೆ ಮನೆಯವರು ಸರಿಯಾಗಿ ದಿಗ್ಭಂಧನ ಹಾಕಿಲ್ಲ. ಹೀಗಾಗಿ ಊರಿನ ಜನತೆಗೆ ತೊಂದರೆ ಆಗುತ್ತಿದೆ ಎಂದು ಕೆಲವರು ಹೇಳುತ್ತಿದ್ದರೆ, ಜೀವ ಹೋದರೂ ಹೋಗಬಹುದು ಎಂದು ಇನ್ನೂ ಕೆಲವರು ಹೇಳುತ್ತಿದ್ದಾರೆ. ಇದು ಬಾನಾಮತಿ ಕಾಟ. ಹೀಗೆ ಊರ ತುಂಬೆಲ್ಲ ಗಾಳಿ ಸುದ್ದಿಗಳು ಹರಡಲಾರಂಭಿಸಿವೆ.

ಇಲ್ಲಿರುವ ಒಂದು ಕೋಮಿನ ಜನರು ಜ್ಯೋತಿಷಿಯ ಮೊರೆ ಹೋಗಿದ್ದಾರಂತೆ.  ಕವಡೆ ಹಾಕಿದ ಜ್ಯೋತಿಷಿ ಇಲ್ಲಿ ದೊಡ್ಡ ಸಮಸ್ಯೆ ಇದೆ.  ಇಲ್ಲಿ ಬಾನಾಮತಿ ಕಾಟ ಇದೆ. ಆದಷ್ಟು ಬೇಗ ಇದನ್ನು ಸರಿ ಪಡಿಸಿಕೊಳ್ಳುವದು ಉತ್ತಮ ಎಂದು ಹೇಳಿದ್ದಾರಂತೆ.  ಹೀಗಾಗಿ ಊರಲ್ಲಿ ಒಬ್ಬರಿಗೊಬ್ಬರು ತಾಳ ಇಲ್ಲದೆ ಪರಿಹಾರ ಅರ್ಧಕ್ಕೆ ನಿಲ್ಲಿಸಿದ್ದಾರೆ.

ಇಲ್ಲಿನ ಜನರು ಗೆಜ್ಜೆ ಶಬ್ದ ಬರುವ ಮನೆಯ ಬಳಿ ಬಂದು ಗಲಾಟೆ ಮಾಡಿದ್ದಾರೆ. ಆದರೆ ಈ ಮನೆಯವರು ಮಾತ್ರ ಈ ಪ್ರೇತದ ಗೆಜ್ಜೆ ಸದ್ದು ನಮಗೇನು ಕೇಳಿಸುತ್ತಿಲ್ಲ. ನಾವು ಹೋಮ ಹಾಕಿಸಿಕೊಂಡು ನೀರನ್ನು ಉಪಯೋಗಿಸುತ್ತಿದ್ದೇವೆ. ನಿಮಗೆ ಬೇಕಾದರೆ ಸರಿಪಡಿಕೊಳ್ಳಿ ಎಂದು ಹೇಳಿದ್ದಾರೆ.
 
ರಾತ್ರಿ ಹತ್ತುವರೆಯಾದ್ರೆ  ಜನತೆಯ ಎದೆಯ ಬಡಿತ ಹೆಚ್ಚಾಗುತ್ತದೆ. ಇದರ ಉಸಾಬರಿಯೆ ಬೇಡ ಎಂದು ಕೆಲವರು ತಮ್ಮ ನೆಂಟರಿಷ್ಟರೋ, ಪರಿಚರಿಯಸ್ಥರ ಮನೆಗೆ ತೆರಳಿ ರಾತ್ರಿ ಕಳೆಯುವ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲ ಗಜ್ಜೆ ಶಭ್ದದ ಭಯದಿಂದ ಇಬ್ಬರಿಗೆ ಆರಾಮ್ ಇಲ್ಲವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೆಲವರು ದೇವರ ತೊಂದರೆ ಇರಬಹುದು. ಗ್ರಾಮಸ್ಥರೆಲ್ಲ ಸೇರಿ ಒಂದು ನಿರ್ಧಾರಕ್ಕೆ ಬಂದರೆ ಗ್ರಾಮಸ್ಥರಿಗೆ ಪರಿಹಾರ ಸಿಗಬಹುದು ಎಂದು ಅಲ್ಲಲ್ಲಿ ಮಾತಾಡಿಕೊಳ್ಳುತ್ತಿದ್ದಾರೆ. ಇಲ್ಲಿಯ ಜನರು ಎಲ್ಲಿಯವರೆಗೆ ಶಬ್ದ ಕೇಳಿಸಿಕೊಳ್ಳುತ್ತಾರೆ ಕಾದುನೋಡಬೇಕು.