ಅಂಕೋಲಾ : ಶಿರೂರಿನ ಗುಡ್ಡ ಕುಸಿತ ಘಟನೆಗೆ ಸಂಬಂಧಿಸಿ ಕಾರ್ಯಾಚರಣೆ ಸ್ಥಳದಲ್ಲಿ ಮಹತ್ವದ ಸುಳಿವು ಪತ್ತೆಯಾಗಿದೆ.

ಭೂ ಸೇನೆ, ನೌಸೇನಾ ಸಿಬ್ಬಂದಿಗಳು ವಾಹನವೊಂದು ಇರುವ ಬಗ್ಗೆ ಖಚಿತಪಡಿಸಿದ್ದಾರೆಂದು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ. ಈಗಾಗಲೇ ಬೂಮರ್ ಯಂತ್ರಗಳ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಗುರುವಾರ ಮತ್ತೊಂದು ಬೂಮರ್ ಅಂಕೋಲಕ್ಕೆ ಆಗಮಿಸಿ ನದಿಯಲ್ಲಿ ಜಾಲಾಡಲಿದೆ

ದೆಹಲಿಯ ಏಜನ್ಸಿಯೊಂದು ಆಗಮಿಸಿ ಶೋಧ ಕಾರ್ಯಾಚರಣೆಗೆ ನೆರವಾಗಲಿದ್ದು  ಪರಿಣಿತ ಮುಳುಗು ತಜ್ಞರಿಂದ ಶೋಧ ನಡೆಯಲಿದೆ.
ಗುರುವಾರದ ಕಾರ್ಯಾಚರಣೆಗೆ ಬೇಕಾಗುವ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಸತೀಶ್ ಸೈಲ್ ತಿಳಿಸಿದ್ದಾರೆ.

ತಂತ್ರಜ್ಞಾನದ ಮೂಲಕ  ಲೋಹದ ವಸ್ತುವೊಂದು ಪತ್ತೆಯಾಗಿದ್ದು  ಬಹುತೇಕ ಭಾರತ್ ಬೆಂಜ್ ವಾಹನದಂತೆ ಇದೆ ಎಂದು ಅವರು ತಿಳಿಸಿದ್ದಾರೆ. ನಿರಂತರವಾಗಿ 9 ದಿನಗಳ ಕಾರ್ಯಾಚರಣೆ ಮುಗಿಸಲಾಗಿದೆ.