ಮುರ್ಡೇಶ್ವರ(Murdeshwar) : ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ(D K Shivakumar) ತಮ್ಮ ಧರ್ಮಪತ್ನಿ ಅವರೊಂದಿಗೆ ಶುಕ್ರವಾರ ಬೆಳಿಗ್ಗೆ ನೇತ್ರಾಣಿ ದ್ವೀಪಕ್ಕೆ ನೌಕಾ ವಿಹಾರ ನಡೆಸಿದರು.

ಬೆಳಿಗ್ಗೆ ಮುರ್ಡೇಶ್ವರ ಕಡಲತೀರದಿಂದ(Murdeshwar beach) ಬೋಟ್ ಮೂಲಕ ಸಮುದ್ರದಲ್ಲಿ ತೆರಳಿದರು. ಪತ್ನಿ ಉಷಾ ಅವರ ಆಸೆಯಂತೆ ನೇತ್ರಾಣಿ ದ್ವೀಪ(Netrani Island) ಪ್ರದೇಶದಲ್ಲಿ ವಿಹರಿಸಿದರು. ಅಲ್ಲದೇ ಸ್ಕ್ಯೂಬಾ ಡೈವಿಂಗ್(Scuba Diving) ನಡೆಸುವ ಮೂಲಕ ಹೊಸ ಅನುಭವ ಪಡೆದರು.

ಉತ್ತರಕನ್ನಡ ಜಿಲ್ಲೆ(Uttarakannada District) ಸೇರಿದಂತೆ ಕರಾವಳಿಯ ಕಡಲತೀರಗಳು ಪ್ರವಾಸೋದ್ಯಮಕ್ಕೆ(Tourism) ಹೆಸರಾಗಿದೆ. ಗೋವಾಕ್ಕಿಂತ(Goa) ಅತ್ಯುತ್ತಮವಾದ ತಾಣಗಳು ಇಲ್ಲಿವೆ. ಹೀಗಾಗಿ ಬಹಳ ದಿನದ ಆಸೆಯಂತೆ ಇಂದು ಭೇಟಿ ನೀಡಿದ್ದೇನೆಂದು ಶಿವಕುಮಾರ್ ತಿಳಿಸಿದರು.

ಡಿಸಿಎಂ ಅವರಿಗೆ ಮೀನುಗಾರಿಕಾ ಸಚಿವರಾದ ಮಾಂಕಾಳ್ ವೈದ್ಯ(Mankal Vaidya), ಶಾಸಕ ಭೀಮಣ್ಣ ನಾಯ್ಕ(Bheemanna Naik) ಅವರು ಸಾಥ್ ನೀಡಿದರು.
ಮುರ್ಡೇಶ್ವರದಿಂದ ವಾಪಾಸ್ ತೆರಳುವಾಗ ಮಾಧ್ಯಮದವರೊಂದಿಗೆ ಮಾತನಾಡಿದ ಡಿ ಕೆ ಶಿ, ಮುಂದಿನ ದಿನಗಳಲ್ಲಿ ಕರಾವಳಿಯ ಪ್ರವಾಸೋದ್ಯಮ(Coastal Tourism) ಅಭಿವೃದ್ಧಿಪಡಿಸುವ ಅಗತ್ಯ ಕ್ರಮಗಳನ್ನ ಕೈಗೊಳ್ಳುವುದಾಗಿ ಹೇಳಿದರು.

ಇದನ್ನು ಓದಿ : ಮದುವೆ ಉಡುಗೋರೆ ನೀಡುವಾಗ ಹೃದಯಘಾತ

ಮೀನುಗಾರರ ಸಂಕಷ್ಟ ಪರಿಹಾರ ನಿಧಿ 10ಲಕ್ಷಕ್ಕೆ ಏರಿಕೆ