ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ನೂತನಮುಖ್ಯಮಂತ್ರಿಡಿ ಕೆ ಶಿವಕುಮಾರ(D K Shivkumar) ಅವರ ಸಚಿವ ಸಂಪುಟದಲ್ಲಿವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ(Ivan Dsouza) ಅವರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ನೀಡುವಂತೆ ಕ್ಯಾಥೊಲಿಕ್ ಅಸೋಸಿಯೇಶನ್(Catholic Association) ಅಧ್ಯಕ್ಷ ಜಾರ್ಜ್ ಫರ್ನಾಂಡೀಸ್ ಆಗ್ರಹಿಸಿದರು.
ಮಂಗಳವಾರ ಕಾರವಾರ ನಗರದ ಪತ್ರಿಕಾ ಭವನದಲ್ಲಿ(Patrikabhavan) ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಐವಾನ್ ಡಿಸೋಜಾ(Ivan Dsouza) ಅವರು ತಮ್ಮರಾಜಕೀಯ ಜೀವನವನ್ನು ಕಾಂಗ್ರೆಸ್ ಪಕ್ಷದ(Congress Party) ಸಿದ್ಧಾಂತಗಳು, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಹಾಗೂ ಶೋಷಿತ ಸಮುದಾಯಗಳ ಹಕ್ಕುಗಳ ರಕ್ಷಣೆಗೆ ಸಮರ್ಪಿಸಿಕೊಂಡಿದ್ದಾರೆ. ಕಾನೂನು ತಜ್ಞರಾಗಿರುವ ಐವಾನ್ ಡಿಸೋಜಾ ಅವರು ಹಲವು ದಶಕಗಳ ರಾಜಕೀಯ ಅನುಭವ ಹೊಂದಿದ್ದು, ಜನಸಾಮಾನ್ಯರ ಸಮಸ್ಯೆಗಳ ಕುರಿತು ಸದಾ ಧೈರ್ಯವಾಗಿ ಧ್ವನಿ ಎತ್ತಿದ್ದಾರೆ. ಶಿಕ್ಷಣ(Education), ಆರೋಗ್ಯ(Health), ನಿರುದ್ಯೋಗ(Unemployment) ನಿವಾರಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಶಾಸಕರ ಅನುದಾನವನ್ನು ಸಮರ್ಪಕವಾಗಿ ಬಳಸಿದ್ದು ದಲಿತರು, ಹಿಂದುಳಿದ ವರ್ಗಗಳು(Backward) ಹಾಗೂ ಅಲ್ಪಸಂಖ್ಯಾತ(Minority) ಸಮುದಾಯಗಳ ಪರವಾಗಿ ನಿರಂತರ ಹೋರಾಟ ನಡೆಸಿದ್ದಾರೆ ಎಂದು ಅವರು ಹೇಳಿದರು.
ಕಾರವಾರ-ಅಂಕೋಲಾ ಕ್ರಿಶ್ಚಿಯನ್ ಫೋರಂ(Karwar-Ankola Christian Forum) ಅಧ್ಯಕ್ಷ ಲಿಯೋ ಲೂಯಿಸ್ ಮಾತನಾಡಿ, ಐವಾನ್ ಡಿಸೋಜಾ ಅವರು ಸಂವಿಧಾನಾತ್ಮಕ ಮೌಲ್ಯಗಳ ರಕ್ಷಣೆ, ಭ್ರಷ್ಟಾಚಾರದ ವಿರುದ್ಧ ಹೋರಾಟ ಹಾಗೂ ಜನಸಾಮಾನ್ಯರ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸುವ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ. ಐವಾನ್ ಡಿಸೋಜಾ ಅವರಂತಹ ಅನುಭವ ಸಂಪನ್ನ ಹಾಗೂ ಹೋರಾಟಗಾರ ನಾಯಕರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಕೆಪಿಸಿಸಿ(KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiha) ಹಾಗೂ ಪಕ್ಷದ ಕಾಂಗ್ರೆಸ್ ನಾಯಕತ್ವಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಲಿಯೋ ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಸ್ಯಾಮಸನ್ ಡಿಸೋಜಾ, ಸ್ಟೀಫನ್ ರೊಡ್ರಿಗಸ್ ಮೊದಲಾದವರಿದ್ದರು.
ಇದನ್ನು ಓದಿ : ಓವರ್ ಲೋಡ್ ಲಾರಿಗಳ ವಿರುದ್ಧ ಆರ್ಟಿಒ ಕಾರ್ಯಾಚರಣೆ, 17 ಲಾರಿಗಳ ವಶ
