ಕಾರವಾರ (KARWAR): ಉತ್ತರ ಕನ್ನಡ ಜಿಲ್ಲೆಯಲ್ಲಿ ನಕಲಿ ಜಾತಿ ಪ್ರಮಾಣ ಪತ್ರ(Fake Certificate) ಪಡೆಯುವುದನ್ನ ನಿಲ್ಲಿಸಬೇಕೆಂದು ಆಗ್ರಹಿಸಿ ನಗರದಲ್ಲಿ ಉತ್ತರ ಕನ್ನಡ ಜಿಲ್ಲಾ ಅನುಸೂಚಿತ ಜಾತಿ/ಬುಡಕಟ್ಟುಗಳ ಸಾಂವಿಧಾನಿಕ ಹಕ್ಕುಗಳ ರಕ್ಷಣಾ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಗುರುವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ(Ambedkar Circle) ಸೇರಿದ ದಲಿತ ಸಂಘಟನೆ(Dalita Sanghatane) ಕಾರ್ಯಕರ್ತರು, ಮುಖಂಡರು ಮೆರವಣಿಗೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ಕರ್ನಾಟಕದ ಹಿಂದುಳಿದ ವರ್ಗ ಪ್ರವರ್ಗ-1ರ ಯಾದಿಯ ರಿ(ಎಇ)ನಲ್ಲಿ ಬರುವ ಮೀನುಗಾರ ‘ಮೊಗೇರ’ (ಮೊಗವೀರ)(Moger(Mogaveera)) ಜಾತಿಯವರು ಕರ್ನಾಟಕ ಅನುಸೂಚಿತ ಜಾತಿ ಪಟ್ಟಿಯ ಕ್ರಮ ಸಂ.79ರಲ್ಲಿನ ‘ಮೊಗೇರ’ ಜಾತಿಯವರೆಂದು ಬಿಂಬಿಸಿ ಸಕ್ಷಮ ಪ್ರಾಧಿಕಾರದಿಂದ ಸಾವಿರಾರು ಸಂಖ್ಯೆಯಲ್ಲಿ ಅನುಸೂಚಿತ ಜಾತಿ ಪ್ರಮಾಣ ಪತ್ರವನ್ನು ಪಡೆದು ಭಾರತ ಸಂವಿಧಾನದ ಪರಿಚ್ಛೇದ 341ರಂತೆ ಜಿಲ್ಲೆಯ ನೈಜ, ಶತಶತಮಾನಗಳಿಂದ ದೌರ್ಜನ್ಯಕ್ಕೊಳಗಾದ ಅನುಸೂಚಿತ ಜಾತಿಯವರಿಗೆ ದೊರಕಬೇಕಾದ ಶೈಕ್ಷಣಿಕ ಸೀಟುಗಳು, ಉದ್ಯೋಗ, ರಾಜಕೀಯ ಮೀಸಲಾತಿ ಸೀಟುಗಳನ್ನು ಅನುಭವಿಸುತ್ತಿದ್ದು ನಿರಂತರವಾಗಿ ಜಿಲ್ಲೆಯ ನೈಜ ಪರಿಶಿಷ್ಟರ ಮೇಲೆ ಅನ್ಯಾಯ ಮಾಡುತ್ತಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು.

ಉತ್ತರ ಕನ್ನಡ ಜಿಲ್ಲೆಯ ಹಿರಿಯ ದಲಿತ ನಾಯಕರ ಅನೇಕ ಹೋರಾಟ ಮತ್ತು ಪ್ರತಿಭಟನೆಯ ಫಲವಾಗಿ ಕಳೆದ 18 ವರ್ಷಗಳಿಂದ ಹಿಂದುಳಿದ ವರ್ಗದ ಮೀನುಗಾರ ‘ಮೊಗೇರ’ (ಮೊಗವೀರ) ಜಾತಿಯವರಿಗೆ ಕರ್ನಾಟಕ ಅನುಸೂಚಿತ ಜಾತಿ ಪಟ್ಟಿಯ ಕ್ರಮ ಸಂ.78ರಲ್ಲಿನ ‘ಮೊಗೇರ’ ಅನುಸೂಚಿತ ಜಾತಿ ಪ್ರಮಾಣ ಪತ್ರ ಕೊಡುವುದನ್ನು ನಿಲ್ಲಿಸಿರುವುದು ಜಿಲ್ಲೆಯ ನೈಜ ಪರಿಶಿಷ್ಟರಲ್ಲಿ (Real Scheduled Caste) ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತ್ತು. ಆದರೆ ಕಳೆದ ಐದಾರು ತಿಂಗಳಿನಿಂದ ಈ ಮೀನುಗಾರ(Fishermen) ‘ಮೊಗೇರ’ ಜಾತಿ ಪ್ರಮಾಣ ಪತ್ರದ ಕುರಿತಂತೆ ವಿವಿಧ ರಾಜಕೀಯ ಪ್ರೇರಿತ ಶಕ್ತಿಗಳು ಕುತಂತ್ರ ನಡೆಸುತ್ತಿರುವ ಕುರಿತು ತಿಳಿದು ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆಂದು ಹೇಳಿದ್ದಾರೆ.

ದಲಿತ ದೌರ್ಜನ್ಯ ಪೀಡಿತ ಜಿಲ್ಲೆಯಾಗಿದ್ದು ಸುಳ್ಳು ಜಾತಿ ಪ್ರಮಾಣ ಪತ್ರಗಳ ಹಾವಳಿಯಿಂದ ತತ್ತರಿಸಿ ಹೋಗಿರುವ ಜಿಲ್ಲೆಯಾಗಿದೆ, ಇಲ್ಲಿನ ನೈಜ ಅನುಸೂಚಿತ ಜಾತಿ ಮತ್ತು ಬುಡಕಟ್ಟು ಜನಾಂಗದವರು ಶಿಕ್ಷಣ, ರಾಜಕೀಯ ಮತ್ತು ಆರ್ಥಿಕ ವಲಯದಲ್ಲಿ ಅತ್ಯಂತ ಹಿಂದುಳಿದಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಭಾರತೀಯ ಸಂವಿಧಾನ ಪರಿಚ್ಚೇಧ 341 ಮತ್ತು ಕರ್ನಾಟಕ ಅನುಸೂಚಿತ ಜಾತಿ/ಬುಡಟ್ಟು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) ಅಧಿನಿಯಮ, 1990 ಮತ್ತು ನಿಯಮಗಳು 1992ರ ಕಲಂ ಮತ್ತು ನಿಯಮಗಳನ್ನು ಮೀರಿ ಪರಿಶಿಷ್ಟರಲ್ಲದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವ ಪ್ರಯತ್ನ ಮಾಡಬಾರದೆಂದು  ಮನವಿಯಲ್ಲಿ ತಿಳಿಸಿದ್ದಾರೆ.

ಒಂದು ವೇಳೆ ವಿರೋಧದ ನಡುವೆ ಜಾತಿ ಪ್ರಮಾಣ ಪತ್ರ/ಸಿಂಧುತ್ವ ಪ್ರಮಾಣ ಪತ್ರವನ್ನು ನೀಡುವ ದುಸ್ಸಾಹಸಕ್ಕೆ ಕೈ ಹಾಕಿದಲ್ಲಿ ರಾಜ್ಯ ಮತ್ತು ಜಿಲ್ಲೆಯಾದ್ಯಂತ ಉಗ್ರವಾದ ಪ್ರತಿಭಟನೆಯನ್ನು ಮಾಡುವುದು ಅನಿವಾರ್ಯ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ಪ್ರತಿಭಟನೆಯಲ್ಲಿ ಸಂಘಟನೆ ಮುಖಡರಾದ ತುಳಸಿದಾಸ್ ಪಾವಸ್ಕರ್, ನ್ಯಾಯವಾದಿ ರವೀಂದ್ರ ಮಂಗಳ, ಅಶೋಕ್ ಕುಂಚಾಡಿ, ಕಿರಣ ಶಿರೂರು, ಸುಭಾಸ್ ಕಾನಡೆ, ಏನ್ ಆರ್ ಮುಕ್ರಿ, ಬಿ ಏನ್ ಸೂರ್ಯಪ್ರಕಾಶ್, ಉದಯ ಬಶೆಟ್ಟಿ ಸೇರಿದಂತೆ ಇತರರು ಇದ್ದರು.

ಇದನ್ನು ಓದಿ : ಚಂಡಮಾರುತ ಅಪ್ಪಳಿಸುವ ಸಾಧ್ಯತೆ

ಶಿರಸಿಯಲ್ಲಿ ಬಸ್ ಇಲ್ಲದೆ ರಾತ್ರಿ ಹೆಣ್ಣುಮಕ್ಕಳಿಗೆ ತೊಂದರೆ

ಭಟ್ಕಳದಲ್ಲಿ ಗೋವು ಕಳ್ಳರ ಅಟ್ಟಹಾಸ

ಕಾರವಾರದಲ್ಲಿ ಅಕ್ಟೋಬರ್ 26ರಂದು ಉದ್ಯೋಗ ಮೇಳ