ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಭಟ್ಕಳ(Bhatkal) : ಸನಾತನ ಹಿಂದೂ  ಧರ್ಮ(Hindu Religious) ಹಾಗೂ ಪುಣ್ಯ ಭೂಮಿಗಾಗಿ ಮಾಡಿದ ಅಪಾರ ತ್ಯಾಗ ಮತ್ತು ಹೋರಾಟದ ಫಲವಾಗಿ  ನಮ್ಮ ಶ್ರೀಮಂತ ಸಂಸ್ಕೃತಿ ಜೀವಂತವಾಗಿದೆ. ಜಗತ್ತಿಗೆ ಗುರುವಾಗಿರುವ ಈ ಶ್ರೇಷ್ಠ ಧರ್ಮವನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಉದ್ದೇಶ  ಹಾಗೂ  ಕರ್ತವ್ಯವಾಗಿರುವ ಹಿನ್ನಲೆಯಲ್ಲಿ ಭಟ್ಕಳ ತಾಲೂಕಿನ ಮುಂಡಳ್ಳಿಯಲ್ಲಿ ಹಿಂದು ಸಮ್ಮೇಳನ(Mundalli Hindu Sammelana) ನಡೆಯಲಿದೆ.

ಬರುವ ಮಾರ್ಚ್  01ರ  ರವಿವಾರದಂದು ಮುಂಡಳ್ಳಿ ಗ್ರಾಮದಲ್ಲಿ(Mundalli Village)  ಕೇಸರಿ ಧ್ವಜ ಹಾರಾಡಲಿದೆ. ಮಧ್ಯಾಹ್ನ ‌3 ಗಂಟೆಗೆ  ಶ್ರೀ ಸತ್ಯನಾರಾಯಣ ದೇವಸ್ಥಾನದಿಂದ(Satyanarayan Temple) ಶೋಭಾಯಾತ್ರೆ ಪ್ರಾರಂಭವಾಗಲಿದ್ದು  ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ(Sri Durgaparameshwari Temple) ಆವರಣದವರೆಗೆ ಸಾಗಲಿದೆ. ಶೋಭಾಯಾತ್ರೆಯಲ್ಲಿ ಮಾತೆಯರು ಸಾಂಪ್ರದಾಯಿಕ ಉಡುಪಿನಲ್ಲಿ ಪೂರ್ಣಕುಂಭದೊಂದಿಗೆ ಭಾಗವಹಿಸಲಿದ್ದಾರೆ.  ಚಂಡೆ, ಭಜನೆ ತಂಡದೊಂದಿಗೆ ಮಕ್ಕಳ ಮಹಾಪುರುಷರ ವೇಷ ಭೂಷಣ ಆಕರ್ಷಣೆಯಾಗಿರಲಿದೆ.

ಬಳಿಕ 5 ಗಂಟೆಗೆ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ಈಗಾಗಲೇ ಹಿಂದೂ ಸಮ್ಮೇಳನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ.  ಗ್ರಾಮದ ಹಿಂದೂ ಮನೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಪೂರ್ಣ ತಯಾರಿಯೊಂದಿಗೆ ಶೋಭಾ ಯಾತ್ರೆಯಲ್ಲಿ ಭಾಗವಹಿಸಬೇಕೆಂದು ಹಿಂದೂ ಸಮ್ಮೇಳನ ಸಮಿತಿ ಮುಂಡಳ್ಳಿ ಮಂಡಲ ವಿನಂತಿಸಿದೆ.

ಇದನ್ನು ಓದಿ ‌: ಅರಣ್ಯದಲ್ಲಿ ಮಹಿಳೆ ಕೊಲೆ. ಮೃತ ದೇಹ ಪತ್ತೆ ಮಾಡಿದ ಮಕ್ಕಳು.*