ಭಟ್ಕಳ(BHATKAL):  ಚೌಥನಿಯ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ(KALIKAMBA TEMPLE) ಪ್ರತಿ ವರ್ಷದಂತೆ ಕನ್ಯಾ ಸಂಕ್ರಮಣದ ದಿನ ನಡೆಯುವ ವಿಶ್ವಕರ್ಮ ಪೂಜಾ ಮಹೋತ್ಸವವು  ಅತೀ ವಿಜೃಂಭಣೆಯಿಂದ ನೆರವೇರಿತು.

ವಿಶ್ವಕರ್ಮ ಹೋಮ, ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯವರಿಂದ ಭಜನೆ, ಶ್ರೀ ಕಾಳಿಕಾಂಬಾ ಮಹಿಳಾ ಸಂಘದವರಿಂದ ಲಲಿತ ಸಹಸ್ರನಾಮ, ಪ್ರಸಾದ ವಿತರಣೆ, ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ನೆರವೇರಿತು. ದೇವಸ್ಥಾನದ ಪ್ರಧಾನ ಅರ್ಚಕರಾದ  ವಾಸುದೇವ ಪುರೋಹಿತರ ನೇತೃತ್ವದಲ್ಲಿ ಆಡಳಿತ ಮೊಕ್ತೇಸರರಾದ ಗಜಾನನ ಎನ್ ಆಚಾರ್ಯ ವೆಂಕಟಾಪುರ,  ಗೋವಿಂದ ಎಮ್ ಆಚಾರ್ಯ ಕವೂರು,  ಶಿವರಾಮ ಡಿ ಆಚಾರ್ಯರ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಿತು.

ಶ್ರೀ ಕ್ಷೇತ್ರದ ಭೂದಾನ ಯೋಜನಾ ಸಮಿತಿ, ವಿಶ್ವಕರ್ಮ ಬ್ರಾಹ್ಮಣ ಯುವಕ ಸಂಘ, ಶ್ರೀ ಕಾಳಿಕಾಂಬಾ ಮಹಿಳಾ ಸಂಘ, ಶ್ರೀ ಕಾಳಿಕಾಂಬಾ ಭಜನಾ ಮಂಡಳಿ ಯವರು ಉಪಸ್ಥಿತರಿದ್ದರು. ಸಮಾಜ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾದರು. ವಿಶ್ವಕರ್ಮ ಪೂಜ್ಯೋತ್ಸವದ ಅಂಗವಾಗಿ ತಾಲೂಕಿನ ಗುರು ಸುಧೀಂದ್ರ ಕಾಲೇಜಿನ ಹತ್ತಿರದಿಂದ ಶ್ರೀ ಕಾಳಿಕಾಂಬಾ ದೇವಸ್ಥಾನದ ವರೆಗೆ ಬೃಹತ್ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿತ್ತು

ಇದನ್ನು ಓದಿ : .ಅರಣ್ಯ ನಾಟಗಳ ಸಾಗಾಟ. ಇಬ್ಬರ ಬಂಧನ

ದಾಂಡೇಲಿಯಲ್ಲಿ ಸರಣಿ ಕಳ್ಳತನ.

ಭಟ್ಕಳದಲ್ಲಿ ಪ್ಯಾಲೇಸ್ಟೆನ್ ಧ್ವಜ ತೆರವು

HSRP ನಂಬರ್ ಪ್ಲೇಟ್ ಅಳವಡಿಕೆಗೆ ನವೆಂಬರ್ 20ರವರೆಗೆ ಗಡುವು.