ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಜೊಯಿಡಾ(joida) : ತಾಲ್ಲೂಕಿನ ಗಣೇಶಗುಡಿಯ ಸೇತುವೆ ಹತ್ತಿರ ರಾತ್ರಿ ವೇಳೆ ಅಪರೂಪದ ಹೈನಾ ಪ್ರಾಣಿ(ಕತ್ತೆ ಕಿರುಬ)(Hyena Animal) ಕಾಣಿಸಿಕೊಂಡು ಸ್ಥಳೀಯರಲ್ಲಿ ಕುತೂಹಲ(Curiosity) ಹುಟ್ಟಿಸಿದೆ.
ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಹಿಂದೆ ಜನರ ಕಣ್ಣಿಗೆ ಹೆಚ್ಚಾಗಿ ಕಾಣಿಸದ ಈ ಪ್ರಾಣಿ(Animal) ಮೊಟ್ಟ ಮೊದಲ ಬಾರಿಗೆ ಸ್ಥಳೀಯರ ಕಣ್ಣಿಗೆ ಬೀಳುತ್ತಿದ್ದಂತೆಯೇ ಅಚ್ಚರಿಗೊಂಡಿದ್ದಾರೆ. ಹೀಗಾಗಿ ತಮ್ಮ ಮೊಬೈಲ್ ನಲ್ಲಿ ಅದರ ದೃಶ್ಯವನ್ನು ಸೆರೆ ಹಿಡಿದಿದ್ದಾರೆ
ದಟ್ಟ ಕಾಡಿನ(Thick Forest) ಪ್ರದೇಶದಲ್ಲಿ ಅತ್ಯಂತ ಅಪರೂಪವಾಗಿರುವ ಈ ಹೈನಾ ಪ್ರಾಣಿ ಕಾಣಿಸಿಕೊಂಡಿರುವುದು ವನ್ಯಜೀವಿ(Wild animals) ಪ್ರೇಮಿಗಳಲ್ಲಿ ಹರ್ಷ ಮತ್ತು ಆಶ್ಚರ್ಯವನ್ನು ಮೂಡಿಸಿದೆ. “ನಮ್ಮ ಕಾಡಿನಲ್ಲಿಯೂ ಇಂತಹ ಅಪರೂಪದ ಜೀವಿಗಳು ಜೀವಿಸುತ್ತಿವೆ ಎಂಬುದು ನಮಗೆ ಹೆಮ್ಮೆಯ ಸಂಗತಿ,” ಎಂದು ಸ್ಥಳೀಯರು ಹೇಳಿದ್ದಾರೆ.
ವಿಭಾಗದ ಅರಣ್ಯ ಅಧಿಕಾರಿಗಳು(Division Forest Officer) ಈ ಘಟನೆಯ ಕುರಿತು ಮಾಹಿತಿ ಪಡೆದುಕೊಂಡಿದ್ದು, ಹೈನಾದ(Hyrna) ಹಾದಿಯನ್ನು ಪತ್ತೆಹಚ್ಚಲು ಹಾಗೂ ಅದರ ಚಲನೆ ಕುರಿತು ಅಧ್ಯಯನ ನಡೆಸುವ ಯೋಜನೆ ಕೈಗೊಂಡಿದ್ದಾರೆ.
ಇದನ್ನು ಓದಿ : ಭಟ್ಕಳ ಗ್ರಾಹಕರಿಗೆ ಮಕ್ಮಲ್ ಟೋಪಿ. ತಿಂಗಳ ಹಿಂದೆ ಎಚ್ಚರಿಸಿದರೂ ಎಚ್ಚೆತ್ತುಕೊಳ್ಳದ ಇಲಾಖೆ.
ಯುಟ್ಯೂಬರ್ ಮುಕಳೆಪ್ಪ ಕೊಟ್ಟ ಕಷಾಯ ಹಿನ್ನಲೆ. ಉಪನೋಂದಣಾಧಿಕಾರಿ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ.
ರಾಷ್ಟ್ರಗೀತೆಗೆ ಅವಮಾನ? — ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಚರ್ಚಾಸ್ಪದ ಹೇಳಿಕೆ.
ಅಕ್ರಮ ಗೋವಾ ಸಾಗಾಟ. ಕಾರವಾರದ ಮೂವರ ಬಂಧನ
ಭಟ್ಕಳಕ್ಕೆ ಬಂತು ಹವಾಲ ಹಣ, ಬಂಗಾರ. ಪತ್ತೆ ಮಾಡಿದ ಪೊಲೀಸರು. ಓರ್ವ ಆರೆಸ್ಟ್.

