ದಾಂಡೇಲಿ(DANDELI) : ತಾಲೂಕಿನ ಅಂಬಿಕಾನಗರದಲ್ಲಿ(AMBIKANAGAR) ಸ್ಥಳೀಯ ಕೆಪಿಸಿಯ ಗ್ಯಾರೇಜ್ ಹತ್ತಿರ ಬಾರೀ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿದೆ.

ಸುಮಾರು 10 ಅಡಿ ಉದ್ದದ ಮೊಸಳೆಯೊಂದು(CROCODILE) ಪ್ರತ್ಯಕ್ಷವಾಗಿದ್ದು,  ಕೆಪಿಸಿ(KPC) ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಕ್ಷಣವೇ ಅರಣ್ಯ ಇಲಾಖೆಗೆ(FOREST DEPARTMENT) ಮಾಹಿತಿಯನ್ನು ನೀಡಿದ್ದರು.

ಅರಣ್ಯ ಇಲಾಖೆಯ ನುರಿತ ರಕ್ಷಣಾ ತಂಡ ಸ್ಥಳಕ್ಕಾಗಮಿಸಿ ಮೊಸಳೆಯನ್ನು ಸುರಕ್ಷಿತವಾಗಿ ಹಿಡಿದು ಸ್ಥಳಾಂತರಗೊಳಿಸಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತಕುಮಾರ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಚೌವ್ಹಾಣ್ ಅವರ ಮಾರ್ಗದರ್ಶನದಲ್ಲಿ ವಲಯಾರಣ್ಯಾಧಿಕಾರಿಗಳಾದ ಎನ್.ಎಲ್.ನದಾಫ್‌ ಮತ್ತು ಮಹಿಮ್ ಜನ್ನು ಅವರ ನೇತೃತ್ವದಲ್ಲಿ ಅಸ್ಲಾಂ, ರಾಜಶೇಖರ, ಲಗ್ಮಪ್ಪಾ, ಹಸನ್ ಹಾಗೂ ದಾಂಡೇಲಿ‌ಯ ಮೊಸಳೆ ರೆಸ್ಕ್ಯೂ ತಂಡ  ಈ ಕಾರ್ಯದಲ್ಲಿ ಭಾಗವಹಿಸಿತ್ತು.

ಇದನ್ನು ಓದಿ : ಗಾಂಜಾ ಕೇಸ್ ಮತ್ತಿಬ್ಬರ ಬಂಧನ

ಆಕಾಶದಿಂದ ದೊಡ್ಡ ವಿಪತ್ತಿದೆ : ಕೋಡಿಮಠ ಶ್ರೀ ಭವಿಷ್ಯ

ಹಾಲು ಕದ್ದ ಪೊಲೀಸ್