ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಅಹಮದಾಬಾದ್ (Ahamadabad): 18 ವರ್ಷಗಳ ಕನಸು ನನಸಾಗಿದೆ. 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಚಾಂಪಿಯನ್ (Champion) ಆಗಿ ಹೊರ ಹೊಮ್ಮಿದೆ
ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್(Panjab Kings) ತಂಡವನ್ನು 6 ರನ್ ಗಳಿಂದ ಸೋಲಿಸುವ ಮೂಲಕ ಆರ್ ಸಿಬಿ ಇತಿಹಾಸ(RCB History) ಸೃಷ್ಟಿಸಿತು. ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 20 ಓವರ್ ಗೆ 190 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 184 ರನ್ ತಲುಪಿದರು. ಆದರೆ ಗೆಲುವು ಸಾಧ್ಯವಾಗಲಿಲ್ಲ.
ಕೃಣಾಲ್ ಪಾಂಡ್ಯ 17 ರನ್ಗೆ 2 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಎನಿಸಿಕೊಂಡರು. ಟೂರ್ನಿಯುದ್ದಕ್ಕೂ ಗಮನಾರ್ಹ ಆಟವಾಡಿದ ಮುಂಬೈ ಇಂಡಿಯನ್ಸ್ನ ಸೂರ್ಯಕುಮಾರ್ ಯಾದವ್ ಅವರು ‘ಮೋಸ್ಟ್ ವ್ಯಾಲ್ಯೂಯೆಬಲ್ ಪ್ಲೇಯರ್’ ಎನಿಸಿಕೊಂಡರು. ಅವರು ಈ ಟೂರ್ನಿಯಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಕನಿಷ್ಠ 25 ರನ್ ಗಳಿಸಿದ್ದಾರೆ ಎಂಬುದು ವಿಶೇಷ.
ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿದ್ದಕ್ಕೆ ಗುಜರಾತ್ ಟೈಟನ್ಸ್ ಆಟಗಾರರಾದ ಸಾಯಿ ಸುದರ್ಶನ್ (759 ರನ್), ಹೆಚ್ಚು ವಿಕೆಟ್ ಪಡೆದದ್ದಕ್ಕೆ ಪ್ರಸಿದ್ಧ ಕೃಷ್ಣ (25 ವಿಕೆಟ್) ಕ್ರಮವಾಗಿ ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಪಡೆದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಡೇವಿಡ್ ಬ್ರೇವಿಸ್ ಅವರು ಲಾಂಗ್ ಆಫ್ನತ್ತ ಬಾರಿಸಿದ ಚೆಂಡನ್ನು ಓಡಿ ಬಂದು ಎಡಕ್ಕೆ ಜಿಗಿದು ಹಿಡಿದು ಅಭಿಮಾನಿಗಳ ಹುಬ್ಬೇರಿಸಿದ್ದ ಸನ್ರೈಸರ್ಸ್ ಹೈದರಾಬಾದ್ನ ಕಮಿಂದು ಮೆಂಡಿಸ್ಗೆ ‘ಕ್ಯಾಚ್ ಆಫ್ ದಿ ಸೀಸನ್’ ಪ್ರಶಸ್ತಿ ಪಡೆದುಕೊಂಡರು.
IPL ಪ್ರಶಸ್ತಿ ವಿಶೇಷ ಇವರೇ ! : ಚಾಂಪಿಯನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು., ರನ್ನರ್ಸ್ ಅಪ್: ಪಂಜಾಬ್ ಕಿಂಗ್ಸ್. ಪಂದ್ಯಶ್ರೇಷ್ಠ: ಕೃಣಾಲ್ ಪಾಂಡ್ಯ (ರಾಯಲ್ ಚಾಲೆಂಜರ್ಸ್ ಬೆಂಗಳೂರು), ಆರೆಂಜ್ ಕ್ಯಾಪ್: ಸಾಯಿ ಸುದರ್ಶನ್ (ಗುಜರಾತ್ ಟೈಟನ್ಸ್), ಪರ್ಪಲ್ ಕ್ಯಾಪ್ ಪ್ರಸಿದ್ಧ ಕೃಷ್ಣ (ಗುಜರಾತ್ ಟೈಟನ್ಸ್), ಉದಯೋನ್ಮುಖ ಆಟಗಾರ: ಸಾಯಿ ಸುದರ್ಶನ್ (ಗುಜರಾತ್ ಟೈಟನ್ಸ್), ಸೂಪರ್ ಸ್ಟೈಕರ್ ಆಫ್ ದಿ ಸೀಸನ್(ಗುಜರಾತ್ ಟೈಟನ್ಸ್), ಸೂಪರ್ ಸ್ಟೈಕರ್ ಆಫ್ ದಿ ಸೀಸನ್: ವೈಭವ್ ಸೂರ್ಯವಂಶಿ (ರಾಜಸ್ಥಾನ ರಾಯಲ್ಸ್), ಮೋಸ್ಟ್ ವ್ಯಾಲ್ಯೂಯೆಬಲ್ ಪ್ಲೇಯರ್: ಸೂರ್ಯಕುಮಾರ್ ಯಾದವ್ (ಮುಂಬೈ ಇಂಡಿಯನ್ಸ್), ಅತಿ ಹೆಚ್ಚು ಸಿಕ್ಸ್ ನಿಕೋಲಸ್ ಪೂರನ್ (ಲಖನೌ ಸೂಪರ್ ಜೈಂಟ್ಸ್), ಅತಿ ಹೆಚ್ಚು ಬೌಂಡರಿ: ಸಾಯಿ ಸುದರ್ಶನ್ (ಗುಜರಾತ್ ಟೈಟನ್ಸ್), ಹೆಚ್ಚು ಡಾಟ್ ಬಾಲ್: ಮೊಹಮ್ಮದ್ ಸಿರಾಜ್ (ಗುಜರಾತ್ ಟೈಟನ್ಸ್), ಕ್ಯಾಚ್ ಆಫ್ ದಿ ಸೀಸನ್: ಕಮಿಂದು ಮೆಂಡಿಸ್ (ಸನ್ರೈಸರ್ಸ್ ಹೈದರಾಬಾದ್) ಫೇರ್ ಪ್ಲೇ ಅವಾರ್ಡ್: ಚೆನ್ನೈ ಸೂಪರ್ ಕಿಂಗ್ಸ್ ಪಡೆದುಕೊಂಡಿದ್ದಾರೆ.
ವಿಜೇತ ಆರ್ಸಿಬಿ ತಂಡಕ್ಕೆ ಜಗತ್ತಿನ ವಿವಿಧೆಡೆ ಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.