ವಿಜಯಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಸದ ರಮೇಶ ಜಿಗಜಿಣಗಿ ಅವರು ಕುಟುಂಬ ಸಮೇತ ಮಂಗಳವಾರ ಮತ ಚಲಾಯಿಸಿದರು.
ವಿಜಯಪುರ ನಗರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಭೂತನಾಳ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ 14 ರಲ್ಲಿ ಮತ ಚಲಾಯಿಸಿದರು.
ಸಂಸದ ರಮೇಶ ಜಿಗಜಿಣಗಿ ಹಾಗೂ ಅವರ ಇಬ್ಬರು ಮಕ್ಕಳಾದ ಆನಂದ, ವಿನೋದ, ಸೊಸೆಯಂದಿಯರಾದ ರೇಷ್ಮಾ ಗೀತಾ, ಮೊಮ್ಮಗಳು ಸ್ನೇಹಾ ಮತಚಲಾಯಿಸಿದರು.

ಮೊಮ್ಮಗಳು ಸ್ನೇಹಾ ಇದೆ ಮೊದಲಬಾರಿಗೆ ಮತ ಚಲಾಯಿಸಿದರು.
ಮತ ಚಲಾಯಿಸಿದ ನಂತರ ಮಾಧ್ಯಮದ ಜೊತೆ ಮಾತನಾಡಿದ ರಮೇಶ ಜಿಗಜಿಣಗಿ ಅವರು, ಕೇವಲ ಭೂತನಾಳ ಮಾತ್ರವಲ್ಲದೆ ಜಿಲ್ಲೆಯ ಎಲ್ಲೆಡೆ ಬಿಜೆಪಿ ವಾತಾವಣ ಚೆನ್ನಾಗಿದೆ. ಜಿಲ್ಲೆಯ ವಿವಿಧ ಎಲ್ಲ ಗ್ರಾಮಗಳಿಂದ ಕರೆ ಬರುತ್ತಿದ್ದು ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದರು.