ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಉತ್ತರಪ್ರದೇಶ (Uttarapradesh): ಗಂಡನ ಕೊಲೆ ಮಾಡಿ ಅನುಕಂಪದ ನೌಕರಿ ಮತ್ತು ಸವಲತ್ತುಗಳನ್ನ ಗಿಟ್ಟಿಸುವ ಹುನ್ನಾರದಲ್ಲಿದ್ದ ಹೆಂಡತಿ ಪೊಲೀಸರಿಗೆ ಲಾಕ್ ಆದ ಘಟನೆ  ಉತ್ತರ ಪ್ರದೇಶದಲ್ಲಿ(Uttarpradesh) ನಡೆದಿದೆ.

ದೀಪಕ್ ಕುಮಾರ್ (29) ಕೊಲೆಯಾದ ದುರ್ದೈವಿ. ನಜೀಬಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಹುದ್ದೆಯ(Government job) ಆಸೆಯಲ್ಲಿ ತನ್ನ ಪತಿಯನ್ನು ಕೊಲೆ ಮಾಡಿದ ಪತ್ನಿ  ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು  ಹೇಳಿದ್ದಳು,  ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಕೊಲೆ ಎಂಬುದು ದೃಢಪಟ್ಟಿದೆ.

ಕ್ಯಾರೇಜ್ ಮತ್ತು ವ್ಯಾಗನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ದೀಪಕ್ ಆದರ್ಶ ನಗರದ ಬಾಡಿಗೆ ಮನೆಯಲ್ಲಿ ಪತ್ನಿ ಶಿವಾನಿ ಜೊತೆ ವಾಸಿಸುತ್ತಿದ್ದರು.   ನಾಲ್ಕು ದಿನದ ಹಿಂದೆ ದೀಪಕ್ ಅವರ ಕುಟುಂಬಕ್ಕೆ ಶಿವಾನಿ ದೀಪಕ್‌ಗೆ ಹೃದಯಾಘಾತವಾಗಿದೆ ಎಂದು ಹೇಳಿದ್ದರು. ದೀಪಕ್ ಅವರನ್ನು ಖಾಸಗಿ ಆಸ್ಪತ್ರೆಗೆ ಮತ್ತು ನಂತರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು, ಆದರೆ ವೈದ್ಯರು ಅವರನ್ನು ದಾಖಲಿಸಲು ನಿರಾಕರಿಸಿದರು. ಬಿಜೆರ್‌ನ ಜಿಲ್ಲಾ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿತ್ತು.

ಮೃತ ದೀಪಕ್ ಅವರ ಕುತ್ತಿಗೆಯಲ್ಲಿ ಗಾಯದ ಗುರುತುಗಳನ್ನು ಗಮನಿಸಿದ ಕುಟುಂಬ ಸದಸ್ಯರು ಮರಣೋತ್ತರ ಪರೀಕ್ಷೆಗೆ ಒತ್ತಾಯಿಸಿದಾಗ ಸಂಶಯ ಹುಟ್ಟಿದೆ. ಅವರು ಕತ್ತು ಹಿಸುಕಿ ಸಾವನ್ನಪ್ಪಿರುವುದನ್ನು ದೃಢಪಟ್ಟಿತ್ತು. ದೀಪಕ್‌ ಅವರ ಸಹೋದರ ಪಿಯೂಷ್ ಅಲಿಯಾಸ್ ಮುಕುಲ್ ಸಲ್ಲಿಸಿದ ದೂರಿನ ಆಧಾರದ ಮೇಲೆ, ಪೊಲೀಸರು ಶಿವಾನಿ ಮತ್ತು ಅಪರಿಚಿತ ಸಹಚರನ ವಿರುದ್ಧ ಪ್ರಕರಣ ದಾಖಲಿಸಿದ್ದು ಪತ್ನಿ ಶಿವಾನಿಯನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ.
ಇದನ್ನು ಓದಿ : ಮನೆಯಲ್ಲಿ ಸಿಕ್ತು ಕಂತೆ ಕಂತೆ ನೋಟು. ಅದರ ಮೇಲೆ ರಿವರ್ಸ್ ಬ್ಯಾಂಕ್ ಆಪ್ ಇಂಡಿಯಾ ಬರಹ.

ಪಿಯುಸಿ ಫಲಿತಾಂಶ ಪ್ರಕಟ. ಬಾಲಕಿಯರ ಕಮಾಲ್.