ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಪುದುಚೇರಿ (Puducheri) : ಖಾಸಗಿ ಶಾಲೆಯಲ್ಲಿ ಹನ್ನೊಂದನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗೆ ಚಾಕು ಇರಿದ ಘಟನೆ ನಡೆದಿದೆ. ಇದೇ ವೇಳೆ ಬ್ಯಾಗ್ ತಪಾಸಣೆ ಮಾಡುತ್ತಿದ್ದ ವೇಳೆ ದೇಶೀಯ ನಿರ್ಮಿತ ಬಾಂಬ್‌(Bomb) ಪತ್ತೆಯಾಗಿವೆ.

ಪುದುಚೇರಿಯ(Puducheri) ರೆಡ್ಡಿಯಾರ್‌ಪಾಳ್ಯಂ ಪೊಲೀಸ್‌ ಠಾಣೆ(Police Station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸೋಷಿಯಲ್‌ ಮೀಡಿಯಾದಲ್ಲಿ ತನ್ನನ್ನು ನಿಂದಿಸಿದ್ದಾನೆಂದು ಸಹಪಾಠಿ ಮೇಲೆ ಆಕ್ರೋಶದಿಂದ ಶಾಲೆಗೆ ಚಾಕು ತೆಗೆದುಕೊಂಡು ಹೋಗಿದ್ದ ಅವನ ಜೊತೆ ವಾದ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಚಾಕುವಿನಿಂದ ಇರಿದಿದ್ದಾನೆ. ನಂತರ ತಪಾಸಣೆ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಬಾಂಬ್ ಸಿಕ್ಕಿದೆ.

ಚಾಕುವಿನಿಂದ ಇರಿದಿದ್ದರಿಂದ ಶಿಕ್ಷಕರು ತರಗತಿಗೆ ದೌಡಾಯಿಸಿ ಬಂದು  ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಗಾಯಗೊಂಡ ಬಾಲಕನಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಅವನ ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಶಾಲಾ ಆಡಳಿತ ಮಂಡಳಿಯು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿತು, ಅವರು ಸ್ಫೋಟಕಗಳನ್ನು ವಶಪಡಿಸಿಕೊಂಡು ವಿದ್ಯಾರ್ಥಿಯನ್ನು ವಶಕ್ಕೆ ಪಡೆದರು. ಆತನನ್ನು ಬಾಲ ನ್ಯಾಯ ಮಂಡಳಿಗೆ ಒಳಪಡಿಸಲಾಗಿದೆ.

ಇದನ್ನು ಓದಿ : ಪ್ರಸಿದ್ಧ ಮಾಜಿ ಕ್ರಿಕೆಟಿಗನ ದಾಂಪತ್ಯದಲ್ಲಿ ಬಿರುಕು.

ಹೊನ್ನಾವರ ಗೋ ಕಳ್ಳತನ ಮಾಡುತ್ತಿದ್ದ ಮೂವರಿಗೆ ಹೆಡೆಮುರಿ ಕಟ್ಟಿದ ಪೊಲೀಸರು.

ಸೋಡಿಗದ್ದೆ ಶ್ರೀ ಮಹಾಸತಿ ದೇವಿಗೆ ಜಾತ್ರೆಯ ಸಂಭ್ರಮ

ಸವಣೂರು ಅಗಲಿದ ವ್ಯಾಪಾರಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಕಾರವಾರ ಬೀದಿ ಬದಿ ವ್ಯಾಪಾರಸ್ಥರು.