ಜೋಯಿಡಾ : ಬಾಮಣಗಿಯ ಸಮೀಪ ಬೃಹತ್ ಗಾತ್ರದ ಮರ  ಧರೆಗುರುಳಿದ್ದು ದಾಂಡೇಲಿ – ಜೋಯಿಡಾ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾದ ಘಟನೆ ನಡೆದಿದೆ.

ಮರ ಧರೆಗುರುಳುತ್ತಿರುವ ಸಂದರ್ಭದಲ್ಲಿ ರಸ್ತೆಯಲ್ಲಿ  ವಾಹನಗಳು ಇಲ್ಲದೆ ಇರುವುದರಿಂದ ದುರ್ಘಟನೆ ತಪ್ಪಿದೆ.  . ಮರ ಬಿದ್ದ ಹಿನ್ನೆಲೆಯಲ್ಲಿ ರಸ್ತೆ ಸಂಚಾರಕ್ಕೆ ತೊಡಕಾಗಿತ್ತು. ತಕ್ಷಣವೇ ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸೇರಿ ಬಿದ್ದ ಮರವನ್ನು ತೆರವುಗೊಳಿಸಿದ್ದಾರೆ.

ಈ ಮಾರ್ಗದಲ್ಲಿ ಮರಗಿಡಗಳು ಅಲ್ಲಲ್ಲಿ ರಸ್ತೆಗೆ ಒರಗಿ ನಿಂತಿದ್ದು ಮಳೆಗಾಲದಲ್ಲಿ ಅಪಾಯ ಸೂಚಿಸುತ್ತಿದೆ. ಸಂಬಂಧಪಟ್ಟ ಇಲಾಖೆಯವರು ಪರಿಶೀಲಿಸಬೇಕೆಂದು ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಒತ್ತಾಯಿಸಿದ್ದಾರೆ.