ಬೆಂಗಳೂರು: ಹಿರಿಯ ರಾಜಕಾರಣಿ ಆರ್ ವಿ ದೇಶಪಾಂಡೆ ಅವರ ಪುತ್ರ ಪ್ರಸಾದ್ ಆರ್ ದೇಶಪಾಂಡೆ ಡೀಲರ್‌ಶಿಪ್ ಹೊಂದಿರುವ ಹೊಸ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ನಾಲ್ಕು ಚಕ್ರಗಳನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ.
ಬೆಂಗಳೂರು-ತುಮಕೂರು ಮುಖ್ಯರಸ್ತೆಯ ದಾಸನಾಪುರ ಬಳಿಯಿರುವ ಮಾಜಿ ಸಚಿವ ಹಾಗೂ ಹಳಿಯಾಳ ಕಾಂಗ್ರೆಸ್ ಶಾಸಕ ಆರ್. ವಿ. ದೇಶಪಾಂಡೆ ಅವರ ಫಾರ್ಮ್‌ಹೌಸ್‌ನಲ್ಲಿ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ.
ನಾಲ್ಕು ಚಕ್ರದ ರಿಮ್‌ಗಳ ಕೆಳಗೆ ಇಟ್ಟಿಗೆಗಳನ್ನು ಇಟ್ಟು ಚಕ್ರಗಳನ್ನು ಕದ್ದಿದ್ದಾರೆ. 24 ಗಂಟೆ ಭದ್ರತೆಯ ನಡುವೆಯೂ ಕಳ್ಳತನ ನಡೆದಿರುವುದು ಸಂಶಯಕ್ಕೆ ಕಾರಣವಾಗಿದೆ.
ಪ್ರಸಾದ್ ಆರ್ ದೇಶಪಾಂಡೆ ಕಾರ್ ಡೀಲರ್‌ಶಿಪ್ ಹೊಂದಿದ್ದು, ನಗರದ ಮೂರು ವಿವಿಧ ಸ್ಥಳಗಳಲ್ಲಿ ಶೋರೂಂಗಳನ್ನು ಹೊಂದಿದ್ದಾರೆ. ಕಂಪನಿಯ ಬಿಡದಿ ಘಟಕದಿಂದ ತರುವ ನಾಲ್ಕು ಚಕ್ರದ ವಾಹನಗಳಿಗೆ ಫಾರ್ಮ್‌ಹೌಸ್ ಅನ್ನು ಸ್ಟಾಕ್‌ಯಾರ್ಡ್‌ನಂತೆ ಬಳಸಲಾಗುತ್ತದೆ.
ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಸಾದ್ ಆರ್ ದೇಶಪಾಂಡೆ ಕಾರು, ಆಟೋಮೊಬೈಲ್ ಡೀಲರ್ ಆಗಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮತ್ತು ಹೆಬ್ಬಾಳದಲ್ಲಿ ಅವರ ಶೋರೂಂ ಇದೆ. ಫಾರ್ಮ್‌ಹೌಸ್‌ನಲ್ಲಿ ಸೆಕ್ಯುರಿಟಿ ಗಾರ್ಡ್‌ಗಳು ಇದ್ದಾಗಲೂ ಕಳ್ಳತನ ನಡೆದಿದೆ.
ಕಳ್ಳತನವಾದ ಚಕ್ರಗಳ ಬೆಲೆ ಸುಮಾರು ಒಂದು ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಎರಡು ವರ್ಷಗಳ ಹಿಂದೆ ದುಷ್ಕರ್ಮಿಗಳು ಎರಡು ಚಕ್ರದ ವಾಹನಗಳ ಟೈರ್‌ಗಳನ್ನು ಕದ್ದೊಯ್ದಿದ್ದರು. ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.