ಅಂಕೋಲಾ(Ankola): ಬಾಸಗೋಡ (Basgodu)ಗ್ರಾಮದ ಯುವ ಕಬಡ್ಡಿ ಆಟಗಾರ ಸುದರ್ಶನ ವಿನಾಯಕ ಆಗೇರ ಅವರು ಅನಿರೀಕ್ಷಿತವಾಗಿ ನಿಧನರಾಗಿದ್ದಾರೆ.
ಅವರ್ಸಾ(Aversa) ಗ್ರಾಮದಲ್ಲಿ ಶ್ರೀ ಮಾರಿಕಾಂಬಾ ಯುವಕ ಸಂಘದಿಂದ (Katyayini youth club) ಆಗೇರ ಸಮಾಜದ(Ager Commmunity) ಜಿಲ್ಲಾ ಮಟ್ಟದ ಕಬ್ಬಡ್ಡಿ ಪಂದ್ಯಾವಳಿ ನಡೆಸಲಾಗಿತ್ತು. ರವಿವಾರ ಬೆಳಿಗ್ಗೆ ಕೊಗ್ರೆಯ ಶ್ರೀ ಮಹಾಸತಿ ತಂಡದ (Kogre sri Mahasati Team) ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಸುದರ್ಶನ್ ಪ್ರತಿನಿಧಿಸಿದ ತಂಡ ವಿಜೇತರಾಗಿತ್ತು.
ಬಾಸಗೋಡ(Basgodu) ಮತ್ತು ಅವರ್ಸಾ (Aversa)ತಂಡಗಳ ನಡುವೆ ಪೈನಲ್ ಪಂದ್ಯ ನಡೆಯುವುದಿತ್ತು. ಇದಕ್ಕೂ ಪೂರ್ವದಲ್ಲಿ ನೀಡಿದ್ದ ವಿಶ್ರಾಂತಿ ಸಮಯದಲ್ಲಿ ಕುರ್ಚಿಯ ಮೇಲೆ ಕುಳಿತಿದ್ದ ಸುದರ್ಶನ ಅವರು ಹಠಾತ್ ಕುಸಿದು ಬಿದ್ದಿದ್ದರು. ಸಹ ಆಟಗಾರರು ಮತ್ತು ಸ್ಥಳೀಯರು ತಕ್ಷಣ ಅವರನ್ನು ವೈದ್ಯರ ಬಳಿ ಕರೆದೊಯ್ದಿದ್ದಾರೆ.
ವೈದ್ಯರು ಲೋ ಬಿಪಿ ಎಂದು ತಿಳಿಸಿ ಅಂಕೋಲಾ ಸರಕಾರಿ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದರು. ಮಾರ್ಗ ಮಧ್ಯೆ ಸುದರ್ಶನ ಅವರು ನಿಧನರಾಗಿದ್ದಾರೆ ಎನ್ನಲಾಗಿದೆ. ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ವರದಿ ಬರಬೇಕಾಗಿದೆ.
ಯುವ ಆಟಗಾರನ ನಿಧನಕ್ಕೆ ಅಂಕೋಲಾ ತಾಲೂಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಗಜು ನಾಯ್ಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಯುವ ಕಬಡ್ಡಿ ಆಟಗಾರ ಪ್ರೀತಂ ಶೆಟ್ಟಿ ಅವರು ಹೃದಯಾಘಾತದಿಂದ ನಿಧನರಾದ ಸುದ್ದಿ ಮಾಸುವ ಮುನ್ನವೆ ಈ ದುರ್ಘಟನೆ ಸಂಭವಿಸಿದ್ದು, ಕ್ರೀಡಾಲೋಕದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಸುದರ್ಶನ ಅವರ ಅಕಾಲಿಕ ನಿಧನಕ್ಕೆ ಕ್ರೀಡಾ ಪ್ರಿಯರು, ಸ್ನೇಹಿತರು ಮತ್ತು ಬಂಧುಮಿತ್ರರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಭಟ್ಕಳದಲ್ಲಿ ಹೆಜ್ಜೇನು ದಾಳಿ. ಐವರು ಆಸ್ಪತ್ರೆಗೆ.
ರಸ್ತೆ ಅಪಘಾತದಲ್ಲಿ ಕೋವಿಡ್ ವಾರಿಯರ್ ದುರ್ಮರಣ