ಭಟ್ಕಳ (Bhatkal) :  ವಿಶ್ವದ ಪ್ರಮುಖ ಧಾರ್ಮಿಕ ಸ್ಥಳ ಮುರ್ಡೇಶ್ವರ ಕಡಲತೀರದಲ್ಲಿ (Murdeshwar Beach) ವಿದ್ಯಾರ್ಥಿನಿಯರ ಸಾವಿನ ಘಟನೆಗೆ ಸಂಬಂಧಿಸಿದಂತೆ  ಭಟ್ಕಳ ಮೂಲದ(Bhatkal Native) ಹೈಕೋರ್ಟ್ ನ್ಯಾಯವಾದಿ(Highcourt lawyer) ನಾಗೇಂದ್ರ ನಾಯ್ಕ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ (Murdeshwar Police Station) ದೂರು (Complaint) ನೀಡಿದ್ದಾರೆ.

ಉತ್ತರಕನ್ನಡ (Uttara Kannada) ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮತ್ತು ಪ್ರವಾಸೋದ್ಯಮ ಇಲಾಖೆ (Tourism Department) ಉಪನಿರ್ದೇಶಕ ಜಯಂತ್ ಎಚ್.ವಿ ವಿರುದ್ಧ ರಜಿಸ್ಟರ್ ಪೋಸ್ಟ್ ಮೂಲಕ ದೂರು ನೀಡಲಾಗಿದೆ.

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಮಾರ್ಗಸೂಚಿಗಳು ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಡಿಸೆಂಬರ್ 11ರಂದು ಮುಳಬಾಗಿಲು ಮೊರಾರ್ಜಿ ದೇಸಾಯಿ(Mulabagilu moorarjee School) ಶಾಲೆಯ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅಕ್ಟೋಬ‌ರ್ ಆರರಂದು ಇದೇ ಬೀಚ್‌ನಲ್ಲಿ 17 ವರ್ಷದ ವಿದ್ಯಾರ್ಥಿಯೋರ್ವ ಮೃತಪಟ್ಟಿದ್ದಾನೆ. ಪ್ರತಿ ವರ್ಷ ಮುರ್ಡೇಶ್ವರ (Murudeshwar) ಬೀಚ್‌ನಲ್ಲಿ ಜಲಕ್ರೀಡೆ (Water sports) ಚಟುವಟಿಕೆಗಳ ಮೂಲಕ 3.38  ಕೋಟಿ ರೂ. ಆದಾಯ ಸರ್ಕಾರಕ್ಕೆ ಬರುತ್ತಿದ್ದರೂ ಮೂಲಭೂತ ಜೀವ ಉಳಿಸುವ ಮತ್ತು ಸುರಕ್ಷತಾ ಸೌಲಭ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ದೂರಿನಲ್ಲಿ ನಮೂದಿಸಲಾಗಿದೆ.

ಜೀವ ಉಳಿಸುವ ಸಾಧನಗಳು, ವಾಚ್‌ಟವರ್‌ಗಳು, ಜೀವರಕ್ಷಕರು ಮತ್ತು ತುರ್ತು ಪ್ರತಿಕ್ರಿಯೆ ಕ್ರಮಗಳು ಬೀಚ್‌ನಿಂದ ಕಾಣೆಯಾಗಿವೆ. ಕರ್ನಾಟಕ (karnataka) ಪ್ರವಾಸೋದ್ಯಮ ನೀತಿ (Tourism policy) ಮತ್ತು (Supreme Court) ಮಾರ್ಗಸೂಚಿಗಳ ಪ್ರಕಾರ ನಿಯಮಾವಳಿಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ. ಕಡಲತೀರದಲ್ಲಿ ಮಾನವ ನಿರ್ಮಿತ ವಿಪತ್ತುಗಳು ಆಡಳಿತಾತ್ಮಕ ನಿರ್ಲಕ್ಷ್ಯದ ಪ್ರಮುಖ ಉದಾಹರಣೆಗಳಾಗಿವೆ. ಪ್ರವಾಸೋದ್ಯಮ(Tourism) ಚಟುವಟಿಕೆಗಳಿಂದ ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ಆದಾಯ ಗಳಿಸುತ್ತಿದ್ದರೂ, ಸುರಕ್ಷತಾ ಕ್ರಮಗಳಿಗೆ ಹಣವನ್ನು ಖರ್ಚು ಮಾಡಲು ವಿಫಲವಾಗಿದೆ ಎಂದು ತಿಳಿಸಿದ್ದಾರೆ.

ಬಿಎನ್ನೆಸ್‌ ಸೆಕ್ಷನ್ 106(ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು), 125 (ಜೀವಕ್ಕೆ ಅಪಾಯವನ್ನುಂಟುಮಾಡುವುದು), ಮತ್ತು ಐಪಿಸಿ ಸೆಕ್ಷನ್ 503  (ಹಾನಿ ಉಂಟುಮಾಡುವ ಉದ್ದೇಶ) ಅಡಿಯಲ್ಲಿ ಲಕ್ಷ್ಮಿಪ್ರಿಯಾ ಮತ್ತು ಜಯಂತ್ ಹೆಚ್.ವಿ ವಿರುದ್ಧ ಪ್ರಕರಣ ದಾಖಲಿಸುವಂತೆ ದೂರಿನಲ್ಲಿ ಕೋರಲಾಗಿದೆ. ತಮ್ಮ ಈ ದೂರನ್ನ ಪರಿಗಣಿಸದಿದ್ದರೆ ಖಾಸಗಿ ದೂರು ದಾಖಲಿಸಲಾಗುವುದು ಎಂದು ಹೈಕೋರ್ಟ್‌ (Highcourt) ಹಿರಿಯ ವಕೀಲ ನಾಗೇಂದ್ರ ನಾಯ್ಕ ‘ಇ ಸಮಾಚಾರ’ಕ್ಕೆ ತಿಳಿಸಿದ್ದಾರೆ.

ಇದನ್ನು ಓದಿ : ಮತ್ತೋರ್ವ ಕಬಡ್ಡಿ ಆಟಗಾರ  ಹಠಾತ್ ನಿಧನ

ಭಟ್ಕಳದಲ್ಲಿ ಹೆಜ್ಜೇನು ದಾಳಿ. ಐವರು ಆಸ್ಪತ್ರೆಗೆ.

ರಸ್ತೆ ಅಪಘಾತದಲ್ಲಿ ಕೋವಿಡ್ ವಾರಿಯರ್  ದುರ್ಮರಣ

ಇ ಸಮಾಚಾರ ನ್ಯೂಸ್ ಇಂಪ್ಯಾಕ್ಟ್. ಬೈತಕೋಲ್ ನಲ್ಲಿ ಬಿದ್ದ ಕಸ ಕ್ಲೀನ್.