ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಕಡಲನಗರಿ ಕಾರವಾರದಲ್ಲಿ ಏಳು ದಿನಗಳ ಕರಾವಳಿ ಉತ್ಸವಕ್ಕೆ(Karavali Utsava) ಸೋಮವಾರ ರಾತ್ರಿ ಅದ್ದೂರಿಯ ಚಾಲನೆ ದೊರೆತಿದೆ.

ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿರುವ(Rabindranath Tagore Beach) ಮಯೂರವರ್ಮ ವೇದಿಕೆಯಲ್ಲಿ(Mayuravarma Vedike) ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ(Mankal Vaidya) ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.

ಕರ್ನಾಟಕ ಮಾರ್ಕೆಟಿಂಗ್ ಕಮ್ಯೂನಿಕೇಶನ್ ಎಂಡ್ ಅಡ್ವೈಟೆಸಿಂಗ್ ಲಿಮಿಟೆಡ್(KMCA ltd) ಅಧ್ಯಕ್ಷರು, ಕಾರವಾರ ಶಾಸಕರಾದ ಸತೀಶ್ ಸೈಲ್(MLA Satish Sail) ಅಧ್ಯಕ್ಷತೆ  ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ್, ಶಾಂತರಾಮ ಸಿದ್ದಿ ಉಪಸ್ಥಿತರಿದ್ದು ಮಾತನಾಡಿದರು.

ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ(DC Lakshmipriya) ಪ್ರಾಸ್ತವಿಕವಾಗಿ ಮಾತನಾಡಿದರು.  ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಸ್ವಾಗತಿಸಿದರು. ವಂದಿಸಿದರು.

ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ರಾಜ್ಯ ಹಾಗೂ ಸ್ಥಳೀಯ ಕಲಾವಿದರಿಂದ  ನಡೆದ ಜಾನಪದ ಮತ್ತು ಸುಗಮ ಸಂಗೀತ ಕಾರ್ಯಕ್ರಮಗಳು  ನಡೆದವು.   ಶ್ರೀನಿವಾಸ  ಮೊಳಕಾಲ್ಮುರ್ ಅವರಿಂದ ಕೊಂಬು ಕಹಳೆ ಪ್ರದರ್ಶನ, ನಾಗೇಶ ತಂಡದಿಂದ ಕೋಳಿ ಕುಣಿತ, ಗೋರವ ಕಲೆ ಪ್ರದರ್ಶನ  ಹುಬ್ಬಳ್ಳಿಯ ಶಂಕ್ರಪ್ಪ ಅವರ ತಂಡದಿಂದ ಜಗ್ಗಲಿಗೆ ಮೇಳ ಪ್ರದರ್ಶನ, ಚಿತ್ರದುರ್ಗದ ಮಹಾಂತೇಶ ತಂಡದಿಂದ ಮುಖವಾಡ ಕುಣಿತ,  ರಾಯಚೂರಿನ ಮಹಾಲಕ್ಷ್ಮಿ ತಂಡದವರಿಂದ ಸುಗಮ‌ ಸಂಗೀತ, ಶಿರಸಿಯ ಸೀಮಾ ಭಾಗ್ವತ್  ತಂಡದಿಂದ ಭರತ ನಾಟ್ಯ ಪ್ರದರ್ಶನ ಕಾರ್ಯಕ್ರಮ‌ ನೆರೆದಿದ್ದ ಸಾರ್ವಜನಿಕರನ್ನು ರಂಜಿಸಿದವು.

ಇದನ್ನು ಓದಿ : ಎಮ್ಮೆಗಳ‌ ಮೇಲೆ ಹುಲಿ ದಾಳಿ. ಕಂಗಾಲಾದ ರೈತ ಕುಟುಂಬ.

ಹೆದ್ದಾರಿಯಲ್ಲಿ ಪಲ್ಟಿಯಾದ ಸಿಮೆಂಟ್ ತುಂಬಿದ ಲಾರಿ.

ರಾಜ್ಯ ಪ್ರಸಿದ್ಧ ಶಿರಸಿ ಮಾರಿಕಾಂಬಾ ಜಾತ್ರೆ ದಿನಾಂಕ ಘೋಷಣೆ

ಏಳು ದಿನಗಳ ಕರಾವಳಿ ಉತ್ಸವದ  ಕಾರ್ಯಕ್ರಮಗಳ ವಿಶೇಷ.