ಕುಮಟಾ(KUMTA) : ಶಿರೂರು ಗುಡ್ಡ ಕುಸಿತ (SHIRURU LANDSLIDE) ಪ್ರಕರಣದಲ್ಲಿ ಕಣ್ಮರೆಯಾಗಿದ್ದ ಜಗನ್ನಾಥ ನಾಯ್ಕ ಅವರ ಇನ್ನೋರ್ವ ಪುತ್ರಿಗೆ ಉದ್ಯೋಗ ದೊರೆತಿದೆ.
ಕುಮಟಾದ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಅವರ ಪ್ರಯತ್ನದಿಂದಾಗಿ ಕೈಗಾದಲ್ಲಿ (KAIGA) ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ(H D KUMARASWAMI) ಉದ್ಯೋಗ ಕೊಡಿಸಿದ್ದಾರೆ.
ಜಗನ್ನಾಥ ಪುತ್ರಿ ಕೃತಿಕಾ ನಾಯ್ಕಗೆ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಬಿ.ಎಚ್.ಇ.ಎಲ್ (BHEL) ಕಂಪನಿ ಅಡಿಯಲ್ಲಿ ಉದ್ಯೋಗ ನೀಡುವುದಾಗಿ ಸ್ವತಃ ಕುಮಾರಸ್ವಾಮಿ ಅವರೇ ಮಾತನಾಡಿ ಖಚಿತಪಡಿಸಿದ್ದಾರೆ .
ಶಿರೂರು ದುರಂತದಲ್ಲಿ ಜಗನ್ನಾಥ ನಾಯ್ಕ ಕಣ್ಮರೆಯಾಗಿ ಎರಡು ತಿಂಗಳು ಸಮೀಪಿಸುತ್ತಿದೆ. ಆದರೆ ಇವರೆಗೂ ಅವರ ಸುಳಿವು ಪತ್ತೆಯಾಗಿಲ್ಲ. ಈ ಹಿಂದೆ ಶಿರೂರಿಗೆ ಆಗಮಿಸಿದ್ದ ಕುಮಾರಸ್ವಾಮಿ ಕುಟುಂಬಕ್ಕೆ ಆಧಾರ ಒದಗಿಸುವುದಾಗಿ ತಿಳಿಸಿದ್ದರು.
ಕೆಲ ದಿನಗಳ ಹಿಂದೆ ಜಗನ್ನಾಥ ಅವರ ಓರ್ವ ಪುತ್ರಿ ಪಲ್ಲವಿ ನಾಯ್ಕ ಗೆ ಕಳೆದ ವಾರ ಪ್ರವಾಸೋದ್ಯಮ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಉದ್ಯೋಗ ನೀಡಲಾಗಿತ್ತು. ಇದೀಗ ಡಿಪ್ಲೋಮ ಕಂಪ್ಯೂಟರ್ ಸೈನ್ಸ್ (COMPUTER SCIENCE) ಓದಿರುವ ಕೃತಿಕಾ ನಾಯ್ಕ ಗೆ ಉದ್ಯೋಗ ನೀಡಲಾಗಿದೆ. ಕುಮಾರಸ್ವಾಮಿ ಕಾಲ್ ಮಾಡಿದ ಸಂದರ್ಭದಲ್ಲಿ ಕೃತಿಕಾ ತಾಯಿ ಬೇಬಿ ನಾಯ್ಕ ಸಹ ಮಾತನಾಡಿದರು. ಕುಮಾರಸ್ವಾಮಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನು ಓದಿ : ಪ್ರವಾಸೋದ್ಯಮ ಇಲಾಖೆಯಲ್ಲಿ ಜಗನ್ನಾಥ ಮಗಳಿಗೆ ಉದ್ಯೋಗ