ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ತಾಲೂಕಿನ ಅಮದಳ್ಳಿಯಲ್ಲಿ ಸೋಮವಾರ ತಡರಾತ್ರಿ ಎಲ್ಪಿಜಿ ಗ್ಯಾಸ್(LPG Gas) ತುಂಬಿದ ಆಟೋರಿಕ್ಷಾ(Auto Rikshaw) ಸ್ಪೋಟಗೊಂಡಿದೆ. ಪರಿಣಾಮ ಆಟೋ ಸೇರಿ ಎರಡು ಕಾರುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾದ(Cars Burnt) ಘಟನೆ ನಡೆದಿದೆ.

ಘಟನೆಯಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಸಿಫ್ರೆನ್ ಥಾಮಸ್ ಫರ್ನಾಂಡೀಸ್ ಅವರಿಗೆ ಸೇರಿದ ಬಜಾಜ್ ಮ್ಯಾಕ್ಸಿಮೋ ಆಟೋರಿಕ್ಷಾ ಹಾಗೂ ಅದರ ಪಕ್ಕದಲ್ಲೇ ನಿಲ್ಲಿಸಿದ್ದ ಎರಡು ಸ್ವಿಫ್ಟ್ ಡಿಸೈರ್ ಕಾರುಗಳು(Swift Desire Cars) ಬೆಂಕಿಗೆ ಆಹುತಿಯಾದವು. ಆಟೋಗೆ ಅಳವಡಿಸಿದ್ದ ಎಲ್ಪಿಜಿ ಗ್ಯಾಸ್ ಕಿಟ್‌ನಿಂದಲೇ ಸ್ಪೋಟ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಸ್ಪೋಟಗೊಂಡ ಕ್ಷಣದಲ್ಲೇ ಆಟೋ ಸೇರಿದಂತೆ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳು ತೀವ್ರ ಬೆಂಕಿಗೆ ತುತ್ತಾಗಿ ಸಂಪೂರ್ಣವಾಗಿ ಭಸ್ಮವಾಗಿವೆ. ವಾಹನಗಳನ್ನು ಮನೆಯ ಕಂಪೌಂಡ್ ಹೊರಭಾಗದಲ್ಲಿ ನಿಲ್ಲಿಸಿದ್ದರಿಂದ ಯಾವುದೇ ಮಾನವ ಹಾನಿ ಸಂಭವಿಸದೆ ಭಾರೀ ಅನಾಹುತ ತಪ್ಪಿದೆ.

ಘಟನಾ  ಸ್ಥಳಕ್ಕೆ  ಅಗ್ನಿಶಾಮಕ ಸಿಬ್ಬಂದಿಗಳು ಧಾವಿಸಿ  ಬೆಂಕಿ ನಂದಿಸಿದ್ದಾರೆ.  ಈ ಕುರಿತು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ(Karwar Rural Station) ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಇದನ್ನು ಓದಿ : ನಡು ರಸ್ತೆಯಲ್ಲಿ ಪ್ರತ್ಯಕ್ಷವಾದ ಒಂಟಿಸಲಗ. ಅರ್ಧಗಂಟೆ ಸಂಚಾರ ಸ್ಥಗಿತ

ಜಿಲ್ಲಾ ಕಾರಾಗೃಹದಲ್ಲಿ ದಿಡೀರ್ ತಪಾಸಣೆ. ಕೈದಿಗಳ ಬಳಿ ಮತ್ತೆ ಮೊಬೈಲ್ ಪತ್ತೆ.

ಮುರ್ಡೇಶ್ವರದಲ್ಲಿ ಜುಗಾರಿ ಅಡ್ಡೆ ಮೇಲೆ ದಾಳಿ: ಇಬ್ಬರ ಬಂಧನ, ನಗದು ಹಾಗೂ ಬೈಕ್‌ಗಳ ವಶಕ್ಕೆ