ಕಾರವಾರ KARWAR : ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಪ್ರತಿಷ್ಟಾಪನೆಗೊಂಡ ಟುಪಲೆವ್ 142 ಎಂ (TUPALEVO 142 M) ಯುದ್ಧ ವಿಮಾನವನ್ನ ಇಂದು ಉದ್ಘಾಟಿಸಲಾಯಿತು. ಆದರೆ ಪ್ರವಾಸಿಗರ ವೀಕ್ಷಣೆಗೆ ನೀಡದೆ ಬಾಗಿಲು ಮುಚ್ಚಲಾಯಿತು.

ತಮಿಳುನಾಡಿನ ಅರಕ್ಕೋಡಮ್ ನಲ್ಲಿ ಇರುವ ರಜಾಲಿಯಲ್ಲಿದ್ದ ಈ ವಿಮಾನ (AIRCRAFT) ವನ್ನ ಎಂಟು ತಿಂಗಳ ಹಿಂದೆ  ಕಾರವಾರಕ್ಕೆ ತರಲಾಗಿತ್ತು. 53.6 ಮೀಟರ್ ಉದ್ದ ಹಾಗೂ 35 ಮೀಟರ್ ಅಗಲವಿರುವ ಯುದ್ಧ ವಿಮಾನವನ್ನ ಸಂಗ್ರಹಾಲಯವಾಗಿ ಮಾಡಲಾಗಿದೆ.

ಸುಮಾರು ಐದು ಕೋಟಿ ರೂ. ಹಣವನ್ನು ತರುವುದಕ್ಕಾಗಿ ವೆಚ್ಚ ಮಾಡಲಾಗಿದೆ. ಕಳೆದ ಎಂಟು ತಿಂಗಳಿಂದ ವಿಮಾನವನ್ನ ಮ್ಯೂಸಿಯಂ ಆಗಿ ಪರಿವರ್ತಿಸುವ ಕೆಲಸ ನಡೆದು ಇಂದು ಕಾರವಾರ ಶಾಸಕ(MLA) ಸತೀಶ್ ಸೈಲ್, ಜಿಲ್ಲಾಧಿಕಾರಿ (DC) ಗಂಗುಬಾಯಿ ಮಾನಕರ್ ಉದ್ಘಾಟಿಸಿದರು.

ಕಳೆದ ಕೆಲ ತಿಂಗಳಿಂದ  ವೀಕ್ಷಣೆಗಾಗಿ ಕಾಯುತ್ತಿದ್ದ ಕಾರವಾರ ನಾಗರಿಕರು, ಪ್ರವಾಸಿಗರು ಕುತೂಹಲದಿಂದಿದ್ದರು. ಈಗಾಗಲೇ ನೂರಾರೂ ಮಂದಿ ತಮ್ಮ ಮೊಬೈಲ್ ನಂಬರ್ (ಮೊಬೈಲ್ Number) ಕೊಟ್ಟು ವಿಮಾನ ವೀಕ್ಷಣೆ ಶುರುವಾದಾಗ ತಿಳಿಸಿ ಎಂದಿದ್ದರು. ಆದರೀಗ ವಿಮಾನ ಸಂಗ್ರಹಾಲಯ ಉದ್ಘಾಟಿಸಿ ಬಾಗಿಲು ಬಂದ್ ಮಾಡಿರುವುದು ಆಸಮಧಾನಕ್ಕೆ ಕಾರಣವಾಗಿದೆ.

ಅಧಿಕಾರಿಗಳು ಹೇಳುವ ಪ್ರಕಾರ ಯುದ್ಧ ವಿಮಾನದ ಒಳಭಾಗದ ಕೆಲಸ ಬಾಕಿ ಇದೆಯಂತೆ. ಹೀಗಾಗಿ ಪೂರ್ಣಗೊಂಡ ಬಳಿಕ ವೀಕ್ಷಣೆಗೆ ಅವಕಾಶ ನೀಡುತ್ತೇವೆಂದು ಹೇಳುತ್ತಾರೆ. ಹಾಗಾದ್ರೆ ಕೆಲಸವಾಗುವ ಮುನ್ನ ಉದ್ಘಾಟಿಸಿದ್ದು ಯಾಕೆ ಎಂದು ಪ್ರವಾಸಿಗರು ಪ್ರಶ್ನಿಸುತ್ತಿದ್ದಾರೆ.