ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಅಂಕೋಲಾ(Ankola) : ತಾಲೂಕಿನ ಕೇಣಿಯಲ್ಲಿ(Keni) ಉದ್ದೇಶಿಸಿರುವ ಬಂದರು ಯೋಜನೆಯನ್ನ (Port Project) ಹೇಗಾದರೂ ಮಾಡಿ ಜಾರಿಗೊಳಿಸಲು ಸಂಬಂಧಪಟ್ಟ ಜೆಎಸ್ ಡಬ್ಲೂ ಕಂಪನಿ(JSW Company) ಹರಸಾಹಸ ಪಡುತ್ತಿದೆ.

ಕೇಣಿ(Keni), ಬಾವಿಕೇರಿ(Bavikeri), ಬೇಲೇಕೇರಿ(Belekeri) ಭಾಗದ ಶಾಲೆಗಳ ವಿದ್ಯಾರ್ಥಿಗಳಿಗೆ ಆಮಿಷ ಒಡ್ಡುತ್ತಿರುವ ಸಂಗತಿ ಬಹಿರಂಗಗೊಂಡಿದೆ. ಕಳೆದ ಮೂರು ದಿನಗಳಿಂದ ಈ ಭಾಗದಲ್ಲಿ ಜೆಎಸ್ ಡಬ್ಲೂ ಫೌಂಡೇಶನ್(JSW Foundation) ಮುದ್ರಣ ಇರುವ ವಾಟರ್ ಬಾಟಲ್, ಛತ್ರಿ, ಸ್ಕೂಲ್ ಬ್ಯಾಗ್ ತುಂಬಿದ  ವಾಹನ ಓಡಾಡುತ್ತಿದೆ. ಈಗಾಗಲೇ ಕಂಪನಿಗೆ ಸಂಬಂಧಿಸಿದವರು ಕೇಣಿ ಶಾಲೆಗೆ(Keni School) ಯಾರ ಗಮನಕ್ಕೂ ಬಾರದೇ ವಸ್ತುಗಳನ್ನ ಖಾಲಿ ಮಾಡಿ ಹೋಗಿದ್ದಾರೆ.

ಸೋಮವಾರ ಬೇಲೆಕೇರಿ ಗ್ರಾಮದ(Belekeri Village) ಶಾಲೆಗಳಿಗೆ ಕಿಟ್ ಗಳನ್ನ ಪೂರೈಸಲು ಬಂದ ವಾಹನಗಳನ್ನ ತಡೆದ ನಾಗರಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವುದೇ ಕಾರಣದಿಂದ ತಮ್ಮೂರ ಶಾಲೆಗೆ ಜೆಎಸ್ ಡಬ್ಲೂ ಕಂಪನಿಯ(JSW Company) ಆಮಿಷ ಬೇಡ ಎಂದು ಹೇಳಿ ತಿರಸ್ಕಾರ ಮಾಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿ ಅಂಕೋಲಾ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಬಳಿಕ ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ವಾಹನ ವಾಪಾಸ್ ಹೊರಟಿದೆ.

ಕೇಣಿಯಲ್ಲಿ ಜೆಎಸ್ ಡಬ್ಲೂ ಕಂಪನಿಯಿಂದ(JSW Company) ವಾಣಿಜ್ಯ ಬಂದರು ನಿರ್ಮಾಣಕ್ಕಾಗಿ ಹುನ್ನಾರು ನಡೆಯುತ್ತಿದೆ. ಸ್ಥಳೀಯರ ವಿರೋಧದ ನಡುವೆಯೂ ಈಗಾಗಲೇ ಜಿಲ್ಲಾಡಳಿತ ನಿಷೇದಾಜ್ಞೆ ಜಾರಿಗೊಳಿಸಿ ಸರ್ವೇಗೆ ಅವಕಾಶ ಮಾಡಿಕೊಟ್ಟಿದೆ. ಇನ್ನೂ ವಿವಿಧ ಹಂತದ ಪ್ರಕ್ರೀಯೆ ನಡೆಯಬೇಕಾಗಿದೆ. ಈ ನಡುವೆ ಸ್ಥಳೀಯ ಸಂಘಟನೆಗಳನ್ನ ಒಡೆಯಲು, ಮುಖಂಡರ ನಡುವೆ ಒಡಕು ಮೂಡಿಸುವ ಪ್ರಯತ್ನವನ್ನು ನಡೆಸಲಾಗಿದೆ ಎಂಬ ಆರೋಪ ಕಳೆದ ಕೆಲ ತಿಂಗಳಿಂದ ಕೇಳಿಬರುತ್ತಿದೆ.

ವಾಣಿಜ್ಯ ಬಂದರು(Commercial Port) ಆದಲ್ಲಿ ಮೀನುಗಾರಿಕೆಗೆ ತೊಂದರೆಯಾಗಲಿದ್ದು ಸ್ಥಳೀಯ ನಿವಾಸಿಗಳು ನೆಲೆ ಕಳೆದುಕೊಳ್ಳುವ ಸಂಭವ ಇದೆ. ಹೀಗಾಗಿ ಯೋಜನೆ ಬೇಡ ಎಂದು ಮೀನುಗಾರರು ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಆದರೆ ಜೆಎಸ್ ಡಬ್ಲೂ ಕಂಪನಿಯ(JSW Company) ತಂತ್ರ ಮುಂದುವರಿದಿದೆ ಎಂದು ಸ್ಥಳೀಯರು ಆಡಿಕೊಳ್ಳುತ್ತಿದ್ದಾರೆ.

ಇದನ್ನು ಓದಿ : ನೌಕಾನೆಲೆ ನಿಮ್ಮಪ್ಪನ ಆಸ್ತಿನಾ ? : ಆರ್ ವಿ ದೇಶಪಾಂಡೆ ಗರಂ.

ಮಹಿಳೆ ಸ್ನಾನದ ವೇಳೆ ಇಣುಕಿದ ಭೂಪ ಪೊಲೀಸ್ ವಶಕ್ಕೆ.