ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) :  ಕಳೆದ ಹಲವು ತಿಂಗಳಿಂದ ಅಂಕೋಲಾದ ಕೇಣಿಯಲ್ಲಿ  ವಾಣಿಜ್ಯ ಬಂದರು(Keni Commercial Port) ನಿರ್ಮಾಣಕ್ಕೆ  ಕಸರತ್ತು ನಡೆಯುತ್ತಲೇ ಇದೆ. ಇಂದು ಇಲ್ಲಿನ ಸ್ಮಾರಕ ಭವನದಲ್ಲಿ ನಡೆದ ಸಭೆಗೆ ಸಂಬಂಧಪಟ್ಟ ಕಂಪನಿ ಹಣ ಕೊಟ್ಟು ಜನರನ್ನ ಕರೆಸಿದ್ದಾರೆಂಬ ಆರೋಪ ಕೇಳಿಬಂದಿದೆ.

ಜನರ ವಿರೋಧದ ನಡುವೆಯೂ ಹಣದ ಆಮಿಷ ನೀಡಿ ಜನರ ಬೆಂಬಲ ಪಡೆಯಲು  ಕಂಪೆನಿ ಮುಂದಾಗಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಒಟ್ಟು 5611ಕೋಟಿ ರೂ. ವೆಚ್ಚದಲ್ಲಿ ಅಂಕೋಲಾ ಕೇಣಿಯಲ್ಲಿ ವಾಣಿಜ್ಯ ಬಂದರು(Commercial Port) ಯೋಜನೆಗಾಗಿ ವೆಚ್ಚ ಮಾಡಲಾಗುತ್ತಿದೆ. ಯೋಜನೆ ವಿರೋಧಿಸಿ ಈಗಾಗಲೇ ಪ್ರತಿಭಟನೆಗಳು ನಡೆದುಹೋಗಿವೆ. ಯೋಜನೆಯಿಂದಾಗುವ ತೊಂದರೆಗಳ ಬಗ್ಗೆ ತಿಳಿಸಲಾಗಿದೆ.

ಈ ನಡುವೆ ಸಾರ್ವಜನಿಕ ಅಹವಾಲು ಸಭೆಗೆ(Public Hearing Meeting) ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಭಾಗವಹಿಸಿದ್ದರು. ಆದರೆ ಹಣ ಕೊಟ್ಟು ಕುಮಟಾ, ಗೋಕರ್ಣ ಭಾಗದಿಂದ ಕೆಲವರನ್ನು ಕರೆಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಕಾರವಾರ(Karwar) ಮತ್ತು ಅಂಕೋಲಾ(Ankola) ಭಾಗದಿಂದ ಮೀನು ಮಾರ್ಕೆಟ್ ಬಂದ್ ಮಾಡಿ ಮಹಿಳೆಯರು ಅಹವಾಲು ಸಭೆಯಲ್ಲಿ ಭಾಗವಹಿಸಿದ್ದರು.

ಯೋಜನೆಯಿಂದ ಅಂಕೋಲಾದ ಕೇಣಿ(Ankola Keni) ಮಾತ್ರವಲ್ಲ ಬೊಗ್ರಿಬೈಲ್‌ ಭಾಗದ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಯೋಜನೆ ಬಂದರೆ ನಾವು ಬೀದಿಗೆ ಬೀಳಲಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ. ಯೋಜನೆ ವಿರೋಧಿಸಿ ಸಾವಿರಾರು ಜನರು ಮನವಿ ನೀಡಿದ್ದಾರೆ.

ಇದನ್ನು ಓದಿ : ಅಂಕೋಲಾದಲ್ಲಿ ಸಾರ್ವಜನಿಕ ಅಹವಾಲು ಸಭೆ. ಈ ಮಾರ್ಗದಲ್ಲಿ ವಾಹನಗಳ ಫಾರ್ಕಿಂಗ್ ನಿಷೇಧ.