ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಉಡುಪಿ(Udupi) : ಶಿರಸಿ ಮೂಲದ ಉಪನ್ಯಾಸಕರೊಬ್ಬರ(Sirsi Native Lecture) ಮೃತದೇಹ ಮನೆ ಆವರಣದ ಬಾವಿಯಲ್ಲಿ ಶನಿವಾರ ಪತ್ತೆಯಾಗಿದೆ.
ಉಪನ್ಯಾಸಕ ಗಣಪತಿ ಭಟ್ (55) ಮೃತ ದುರ್ದೈವಿ. ಶಿರಸಿ ಮೂಲದ ಗಣಪತಿ ಭಟ್, ಅವಿವಾಹಿತರಾಗಿದ್ದರು(Unmarried). ನಗರದ ಸಂಸ್ಕೃತ ಕಾಲೇಜಿನಲ್ಲಿ(Sanskrit College) ಕಾರ್ಯನಿರ್ವಹಿಸುತ್ತಿದ್ದ ಅವರು ಎಂ.ಜಿ.ಎಂ ಕಾಲೇಜಿನ(MGM College) ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಗಣಪತಿ ಭಟ್ ನಾಪತ್ತೆಯಾದ ಬಗ್ಗೆ ಉಡುಪಿ ನಗರ ಪೋಲಿಸ್ ಠಾಣೆಯಲ್ಲಿ(Udupi Police Station) ಪ್ರಕರಣ ದಾಖಲಾಗಿತ್ತು. ಅವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿ ಶಾಮಕ ದಳದ(Fire Brigade) ನೆರವಿನಿಂದ ಶವವನ್ನು ಮೇಲಕೆತ್ತಲಾಗಿದೆ. ಉಪನ್ಯಾಸಕರ ಸಾವಿನ ಬಗ್ಗೆ ತನಿಖೆ ನಡೆಸಲಾಗಿದೆ.
ಇದನ್ನು ಓದಿ : ಹೊಟೇಲ್‌ಗೆ ನುಗ್ಗಿ ರೌಡಿಶೀಟರ್ ಭೀಕರ ಹತ್ಯೆ. ಅಂತೂ ಮುಗಿಸಿಯೇ ಬಿಟ್ರು ಕಿರಾತಕರು.
