ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಅಂಕೋಲಾ (Ankola): ಸಿಡಿಲು(Lightning) ಬಡಿದು ಎರಡು ಮನೆಗಳಿಗೆ ಹಾನಿಯಾಗಿ ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿರುವ ಘಟನೆ ಅಂಕೋಲಾ(Ankola) ತಾಲ್ಲೂಕಿನ ಹಾರವಾಡದಲ್ಲಿ(Harwad) ಮಂಗಳವಾರ ಮುಂಜಾನೆ ನಡೆದಿದೆ.
ಹಾರವಾಡ(Harwad) ಗ್ರಾಮದ ಗಾಬಿತವಾಡದಲ್ಲಿ(Gabitawad) ವಿಠ್ಠಲ ಸೀತಾರಾಮ ನಾಯ್ಕ ಮತ್ತು ಗೀತಾ ನಾರಾಯಣ ಖಾರ್ವಿ ಮನೆಗೆ ಸಿಡಿಲು ಬಡಿದು ತೀವ್ರ ಹಾನಿಯಾಗಿದೆ. ಮುಂಜಾನೆ ಮನೆಯಲ್ಲಿ ಕೆಲವರು ಎದ್ದು ಕೆಲಸದಲ್ಲಿ ತೊಡಗಿದ್ದ ವೇಳೆ ಇದ್ದಕ್ಕಿದ್ದಂತೆ ಕಣ್ಣೆದು ಲೈಟ್ ಪಾಸಾದಂತಾಯಿತು. ಬಳಿಕ ಸಂಪೂರ್ಣ ಮನೆ ಹೊಗೆಯಿಂದ ತುಂಬಿಕೊಂಡಿತ್ತು. ಏನಾಯಿತು ಎಂದುಕ್ಕೊಳ್ಳುವಷ್ಟರಲ್ಲಿ ಸಿಡಿಲು ಬಡಿದ ಪರಿಣಾಮ ಮನೆಯ ಮೀಟರ್ ಬೋರ್ಡ್, ಮನೆಯ ಹೆಂಚು, ವಿದ್ಯುದ್ದೀಪಗಳು, ಯಂತ್ರೋಪಕರಣಗಳಿಗೆ ಹಾನಿಯಾಗಿದೆ ಎಂದು ಮನೆಯವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮನೆಯ ಎದುರಿನ ತೆಂಗಿನ ಮರಕ್ಕೂ ಸಿಡಿಲು ಬಡಿದಿದೆ. ಮನೆಯ ಗೋಡೆ ಹಾಗೂ ನೆಲವು ಸಿಡಿಲಿನಿಂದ ಹಾನಿಯಾಗಿದೆ. ಆದರೆ ಅದೃಷ್ಟವಶಾತ್ ಮನೆಯವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಇದನ್ನು ಓದಿ : ಕಾರವಾರದಲ್ಲಿ ವೈಮಾನಿಕ ದಾಳಿ ಎಲ್ಲೆಡೆ ಅಲರ್ಟ್. ಸಾವಿರಾರು ಮಂದಿಯ ರಕ್ಷಣೆ.
ಪಾಕ್ ನಡವಳಿಕೆಯ ಮೇಲೆ ನಮ್ಮ ನಿರ್ಧಾರ. ಅಣ್ವಸ್ತ್ರ ಬೆದರಿಕೆಗೆ ಡೋಂಟ್ ಕೇರ್ : ನರೇಂದ್ರ ಮೋದಿ.