ಯಲ್ಲಾಪುರ(Yallapura):   ಅರೆಬೈಲ್ ರಾಷ್ಟ್ರೀಯ ಹೆದ್ದಾರಿ(Arebail National Highway) 63ರಲ್ಲಿ ಸಂಚರಿಸುತ್ತಿದ್ದ ಲಾರಿಗೆ ಬೆಂಕಿ ಹೊತ್ತಿಕೊಂಡ ಘಟನೆ ಇಂದು ನಸುಕಿನ ಜಾವ ನಡೆದಿದೆ.

ಹುಬ್ಬಳ್ಳಿ – ಅಂಕೋಲಾ(Hubbli-Ankola ) ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಲಾರಿಯು ಬಾಗಲಕೋಟೆಯಿಂದ ಕೇರಳ(Bagalakote-Keral) ಕಡೆ ಸಂಚರಿಸುತ್ತಿತ್ತು. ಬೆಂಕಿ ಕಾಣಿಸಿಕೊಂಡ ತಕ್ಷಣ ಲಾರಿಯಿಂದ  ಚಾಲಕ ಹಾಗೂ ಕ್ಲೀನ‌ರ್ ಕೆಳಕ್ಕೆ ಇಳಿದು ಜೀವ ರಕ್ಷಿಸಿಕೊಂಡಿದ್ದಾರೆ.

ವಿಷಯ ತಿಳಿದ ತಕ್ಷಣ ಯಲ್ಲಾಪುರ ಪೊಲೀಸರು(Yallapura police) ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಬೆಂಕಿ ಆರಿಸುವ ಪ್ರಯತ್ನ ಮಾಡಿದರು. ಅಗ್ನಿ ಅನಾಹುತ ಶಾರ್ಟ್ ನಿಂದ ಉಂಟಾಗಿರಬಹುದೆಂದು ಶಂಕಿಸಲಾಗಿದೆ.

ಯಲ್ಲಾಪುರ ಪಿಎಸ್ಐ ಸಿದ್ದಪ್ಪ ಗುಡಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಹೆಚ್ಚಿನ ಅನಾಹುತ ಆಗದಂತೆ ಮುನ್ನಚ್ಚರಿಕೆ ವಹಿಸಿದರು. ಘಟನೆಯಿಂದ ಲಾರಿಯಲ್ಲಿದ್ದ ಬಹುತೇಕ ಸಕ್ಕರೆ ಅಗ್ನಿಗೆ ನಾಶವಾಗಿದೆ.

ಇದನ್ನು ಓದಿ : ಮೈ, ಕೈ ಕಾಲುಗಳಲ್ಲಿ ಮದ್ಯ ಸಾಗಾಟ. ಇಬ್ಬರ ಬಂಧನ

ಇನ್ನೂ ಪತ್ತೆಯಾಗದ ಗಂಗಾವಳಿ ನದಿಯಲ್ಲಿ ಸಿಕ್ಕ ಎಲುಬಿನ ರಹಸ್ಯ.