ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಯಲ್ಲಾಪುರ(Yallapur) : ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ ಅಂಕೋಲಾ(Hubli-Ankola) ಮಾರ್ಗದಲ್ಲಿ ತೆರಳುತ್ತಿದ್ದ ಸಿಮೆಂಟ್ ತುಂಬಿದ ಲಾರಿಯೊಂದು ಯಲ್ಲಾಪುರದಲ್ಲಿ(Yallapur) ಪಲ್ಟಿಯಾದ ಘಟನೆ ರವಿವಾರ ನಡೆದಿದೆ.

ಬಳ್ಳಾರಿಯಿಂದ ಎಸಿಸಿ ಸಿಮೆಂಟ್(ACC Cement) ಚೀಲಗಳನ್ನು ಹೊತ್ತ ಲಾರಿ ಕೇರಳಕ್ಕೆ(Ballary to Keral) ಕಡೆ ತೆರಳುತಿತ್ತು. ಪರಿಣಾಮವಾಗಿ ಹೆದ್ದಾರಿ ಮೇಲೆ ಸಿಮೆಂಟ್ ಚೀಲಗಳು ಬಿದ್ದು ಹೋಗಿವೆ. ಘಟನೆಯಿಂದಾಗಿ ಕೆಲ ತಾಸುಗಳ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಸ್ಥಳಕ್ಕೆ ಆಗಮಿಸಿದ ಯಲ್ಲಾಪುರ ಪೊಲೀಸರು(Yallapur Police) ಸ್ಥಳಕ್ಕೆ ಒಂದು ಬದಿಯಿಂದ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಹೆದ್ದಾರಿಯಲ್ಲಿ ಲಾರಿಯ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದುದರಿಂದ ಪಲ್ಟಿಯಾಗಿದೆ. ಬಳಿಕ ಕ್ರೇನ್ ಮೂಲಕ ಲಾರಿಯನ್ನು ಮೇಲೆತ್ತಲಾಗಿದೆ. ಅಪಘಾತದಲ್ಲಿ ಲಾರಿ ಚಾಲಕನ ಕೈಗೆ ಪೆಟ್ಟಾಗಿದೆ. ಪಿಸೈ ಸಿದ್ದಪ್ಪ ಗುಡಿ ತಂಡದ ಪೊಲೀಸರು ಸ್ಥಳದಲ್ಲಿದ್ದು ವಾಹನ ಸಂಚಾರ ಸುಗಮಗೊಳಿಸಿದರು. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ(Yallapur Police Station) ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ರಾಜ್ಯ ಪ್ರಸಿದ್ಧ ಶಿರಸಿ ಮಾರಿಕಾಂಬಾ ಜಾತ್ರೆ ದಿನಾಂಕ ಘೋಷಣೆ
