ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಪಶ್ಚಿಮಬಂಗಾಳ(Paschimabangala) : ಮಾಜಿ ಗೆಳತಿಯೋರ್ವಳೊಂದಿಗೆ ಲವ್ ಬ್ರೇಕ್ ಅಪ್ (Love breakup) ಆದ ಹುಡುಗನೋರ್ವ ಬರೋಬ್ಬರಿ 300 ಕ್ಯಾಶ್ ಆನ್ ಡೆಲಿವರಿ(Cash on delivari) ಆರ್ಡರ್ ಮಾಡಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ತನ್ನ ಮಾಜಿ ಗೆಳತಿಯ ವಿರುದ್ಧ ಸೇಡು ತೀರಿಸಿಕೊಳ್ಳೋಕ್ಕೋಸ್ಕರ ಲವರ್ ಕಿರುಕುಳ ಕೊಟ್ಟಿದ್ದಾನೆ. ಬ್ಯಾಂಕ್ವೊಂದರಲ್ಲಿ ಕೆಲಸ ಮಾಡುತ್ತಿದ್ದಾಕೆ. ಆಕೆಗೆ ನಾಲ್ಕು ತಿಂಗಳಲ್ಲಿ ಬರೋಬ್ಬರಿ 300 ಆರ್ಡರ್ ಬಂದಿದೆ. ಹೀಗಾಗಿ ಕಿರುಕುಳ ತಡೆಯಲಾರದೆ ದೂರು ದಾಖಲಿಸಿದ್ದಾರೆ. ಕಳೆದ ತಿಂಗಳು ಮಾರ್ಚ್ನಲ್ಲಿ ಈ ಕುರಿತು ಎಫ್ಐಆರ್ ದಾಖಲಿಸಲಾಗಿದೆ. ಹೀಗಾಗಿ ಆತನನ್ನು ಬಂಧಿಸಿದ್ದಾರೆ.
ದೂರು ದಾಖಲಾದ ಸಂದರ್ಭದಲ್ಲಿ ಪೊಲೀಸರು ಆ ಹುಡುಗಿಯ ಸಹೋದ್ಯೋಗಿಗಳು ಈ ರೀತಿ ಮಾಡಿರಬಹುದು ಎಂದು ಊಹಿಸಿದ್ದರು. ಆಮೇಲೆ ಆ ಹುಡುಗಿಯ ಮಾಜಿ ಪ್ರಿಯತಮ ಸುಮನ್ ಸಿಕ್ಸರ್ ಈ ರೀತಿ ಮಾಡಿರೋದು ಎಂದು ಗೊತ್ತಾಗಿದೆ.
ಸಿಕ್ಸರ್ ಹಾಗೂ ಆಕೆ ಹಲವು ವರ್ಷಗಳಿಂದ ಪರಿಚಿತರು, ಪ್ರೀತಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಈ ಜೋಡಿ ಬ್ರೇಕಪ್ ಮಾಡಿಕೊಂಡಿತ್ತು. ಹೀಗಾಗಿ ಆ ಹುಡುಗ ಹುಡುಗಿಗೆ ಕಿರುಕುಳ ನೀಡುತ್ತಿದ್ದನೆನ್ನಲಾಗಿದೆ ನಾನು ಪಾರ್ಸೆಲ್ ಬುಕ್ ಮಾಡುತ್ತಿದ್ದೆ, ಅಪರಿಚಿತ ಸಂಖ್ಯೆಗಳಿಂದ ಮೆಸೇಜ್, ಫೋನ್ ಮಾಡ್ತಿದ್ದೆ ಎಂದು ಆ ಹುಡುಗ ಒಪ್ಪಿಕೊಂಡಿದ್ದಾನೆ. ಆ ಮಹಿಳೆಗೆ ಆನ್ಲೈನ್ ಶಾಪಿಂಗ್ ಅಂದ್ರೆ ತುಂಬ ಇಷ್ಟ ಇತ್ತು, ಪದೇ ಪದೇ ಗಿಫ್ಟ್ ಕೊಡಿಸು ಅಂತ ಬೇಡಿಕೆ ಇಡುತ್ತಿದ್ದಳು, ಅದನ್ನು ಕೊಡಲಾಗುತ್ತಿರಲಿಲ್ಲ ಅಂತ ಈ ಹುಡುಗ ಈ ರೀತಿ ಸೇಡು ತೀರಿಸಿಕೊಂಡಿದ್ದಾನೆ. ನನಗೆ ಅಗತ್ಯವಿರುವ ವಸ್ತುಗಳನ್ನು ಕೊಡಿಸೋಕೆ ಆಗೋದಿಲ್ಲ ಎಂದು ಆ ಮಹಿಳೆ ನನ್ನನ್ನು ಬಿಟ್ಟು ಹೋಗಿದ್ದಾಳೆ ಎಂಬ ಭಾವನೆ ಆ ಹುಡುಗನಿಗೆ ಇತ್ತು. ಹೀಗಾಗಿ ಅವನು ದೊಡ್ಡ ಪ್ರಮಾಣದಲ್ಲಿ ಪಾರ್ಸೆಲ್ ಕಳಿಸಿದ್ದಾನೆ ಎಂದು ಬಿಧಾನ್ನಗರ ಕಮಿಷನರೇಟ್ ಅಧಿಕಾರಿಗಳು ಹೇಳಿದ್ದಾರೆ.
ಪಾರ್ಸೆಲ್ಗಳಲ್ಲಿ ಎಲ್ಲವೂ ಕ್ಯಾಶ್ ಆನ್ ಡೆಲಿವರಿ ಆಗಿದ್ದವು. ಟ್ಯಾಬ್ಲೆಟ್ಗಳು, ಮೊಬೈಲ್ ಫೋನ್(Mobile Phone), ಉಡುಪುಗಳು(Dresses), ಸಣ್ಣ ಉಡುಗೊರೆ ವಸ್ತುಗಳು ಕೂಡ ಅಲ್ಲಿತ್ತು. ಫೆಬ್ರವರಿ ಪೂರ್ತಿ, ಪ್ರತಿದಿನ ಪ್ರೇಮಿಗಳ ದಿನದ (Velainten Day) ಉಡುಗೊರೆ ಇತ್ತು. ನನಗೆ ನೆಗೆಟಿವ್ ರೇಟಿಂಗ್ ನೀಡಿದ ವಿತರಣಾ ಏಜೆಂಟ್ಗಳ ಜೊತೆಯಲ್ಲಿ ನನಗೆ ಆಗಾಗ ಜಗಳವಾಗುತ್ತಿತ್ತು. ನಾನು ಇ-ಕಾಮರ್ಸ್ ವೇದಿಕೆಯಲ್ಲಿ ಈ ವಿಷಯವನ್ನು ಕೈಗೆತ್ತಿಕೊಂಡಾಗ, ಅವರು ನನ್ನ ಖಾತೆಯನ್ನು ನಿರ್ಬಂಧಿಸಿದರು ಎಂದು ಮಹಿಳೆ ಹೇಳಿದ್ದಾಳೆ. ಇದೀಗ ಸಿಕ್ಸರ್ ಅವರನ್ನು ಸಾಲ್ಟ್ ಲೇಕ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಜಾಮೀನು ಲಭಿಸಿದೆ..
ಇದನ್ನು ಓದಿ : ಅನ್ಯ ಜಾತಿಯ ಹುಡುಗನೊಂದಿಗೆ ಓಡಿ ಹೋದ ಯುವತಿ. ತಂದೆ ಮಾಡಿದ್ದು ಅಪರಾಧ.
ಇನ್ಮುಂದೆ ಈ ಏರಿಯಾದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ಮಾಡುವಾಂಗಿಲ್ಲ.
ಹೆಬ್ಬಾರ್ ಕ್ಷೇತ್ರದಲ್ಲಿ ಬಿಜೆಪಿ ಅಬ್ಬರ. ಯಲ್ಲಾಪುರದಲ್ಲಿ ಜನಾಕ್ರೋಶ ಯಾತ್ರೆ.