ಹೊನ್ನಾವರ(Honnavar) : ತಾಲೂಕಿನ ಮಂಕಿ ಗ್ರಾಮದ ಉದ್ಯಮಿ ಎಕದಂತ ಎಂಟರ್ ಪ್ರೈಸಸ್ ಮಾಲಿಕ ಗಣಪತಿ ನಾಯ್ಕ ರಸ್ತೆ ಅಪಘಾತದಲ್ಲಿ ಮೃತರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66 ರ ಹೊನ್ನಾವರದಿಂದ ಮಂಕಿ (Honnavara to Manki) ಕಡೆ ತಮ್ಮ ಬೈಕ್ ಮೇಲೆ ತೆರಳುವಾಗ ಬೈಕ್ ಸ್ಕಿಡ್ಡಾಗಿ ಬಿದ್ದಿದ್ದರು. ತೀವ್ರ ಗಾಯಗೊಂಡ ಅವರನ್ನ ಉಡುಪಿಯ(Udup) ಖಾಸಗಿ ಆಸ್ಪತ್ರೆಗೆ ಒಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.
ಒಂದು ವೇಳೆ ನಮ್ಮ ಜಿಲ್ಲೆಯಲ್ಲಿ ಮಲ್ಟಿ ಸ್ಪೇಷಾಲಿಟಿ ಹಾಸ್ಪಿಟಲ್ ಇದ್ದಿದ್ರೆ ಅವರನ್ನ ಬದುಕಿಸಬಹುದಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಅಪಾರ ಜನರ ಸ್ನೇಹ ಗಳಿಸಿದ್ದ ಗಣಪತಿ ಅವರ ಸಾವಿನಿಂದಾಗಿ ಪತ್ನಿ, ಇಬ್ಬರು ಮಕ್ಕಳು ಹಾಗೂ ಬಂಧು ಬಾಂಧವರನ್ನ ಅಗಲಿದ್ದಾರೆ. ಅಕಾಲಿಕ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತವಾಗಿದೆ.
ಇದನ್ನು ಓದಿ : ಮುರ್ಡೇಶ್ವರ ಘಟನೆ. ಭಟ್ಕಳ ಮೂಲದ ಹೈಕೋರ್ಟ್ ಹಿರಿಯ ನ್ಯಾಯವಾದಿಯಿಂದ ದೂರು.