ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news)ಮಂಗಳೂರು(Manglore): ನಗರದ ಹೊರವಲಯದ ಎಂಆರ್ಪಿಎಲ್(MRPL) ಪ್ರದೇಶದಲ್ಲಿ ಬಾರೀ ಸ್ಪೋಟ ಸಂಭವಿಸಿದೆ. ಪರಿಣಾಮವಾಗಿ ಸುತ್ತಮುತ್ತಲಿನ ಹಲವು ಪ್ರದೇಶಗಳ ಜನರು ಕಂಗಾಲಾದ ಘಟನೆ ನಡೆದಿದೆ
ಬುಧವಾರ ಮಧ್ಯಾಹ್ನ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ವ್ಯಾಪ್ತಿಯಲ್ಲಿ ಭಾರೀ ಸ್ಫೋಟ ನಡೆದಿದೆ. ಸ್ಪೋಟದ ತೀವೃತೆ ಜೋಕಟ್ಟೆ(Jokatte), ಬಜಪೆ(Bajpe) ಹಾಗೂ ಸುರತ್ಕಲ್(Suratkal) ಸುತ್ತಮುತ್ತಲಿನ ಪ್ರದೇಶಗಳ ನಾಗರಿಕರನ್ನ ಬೆಚ್ಚಿಬೀಳಿಸಿದೆ. ಸ್ಥಳದಿಂದ ಹಲವು ಕಿಲೋಮೀಟರ್ ದೂರದವರೆಗೆ ಕಂಪನದ ಅನುಭವವಾಗಿದೆ. ಅಲ್ಲದೇ ಕೆಲ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ.
ಸ್ಪೋಟದಿಂದಾಗಿ ಜೋಕಟ್ಟೆ ಗ್ರಾಮ ಪಂಚಾಯತ್ ಕಟ್ಟಡ ಸೇರಿದಂತೆ ಸುತ್ತಮುತ್ತಲಿನ ಹಲವು ಮನೆಗಳ ಗೋಡೆಗಳು ಬಿರುಕು ಉಂಟಾಗಿದೆ. ಕೆಲವು ಮನೆಗಳ ಕಿಟಕಿ ಗಾಜುಗಳು ಪುಡಿಪುಡಿಯಾಗಿದೆ. ಒಂದೇ ಸಮನೇ ಭೂಕಂಪನ ರೀತಿಯಲ್ಲಿ ಭಾರೀ ಶಬ್ದಉಂಟಾಗಿದ್ದು, ಜನರು ತಮ್ಮ ತಮ್ಮ ಮನೆಗಳಿಂದ ಹೊರಗೆ ಓಡಿದ್ದಾರೆ. ಸುರತ್ಕಲ್, ಜೋಕಟ್ಟೆ, ಬಜಪೆ, ಸೇರಿದಂತೆ ಎಂಆರ್ಪಿಎಲ್ (MRPL) ಸುತ್ತಮುತ್ತಲಿನ ಕೆಲ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಎಂಆರ್ಪಿಎಲ್ (MRPL) ಘಟಕದೊಳಗೆ ತಾಂತ್ರಿಕ ದೋಷ, ಕೈಗಾರಿಕಾ(Industry) ಪ್ರಕ್ರಿಯೆಯಲ್ಲಿನ ಅಸಹಜತೆ ಅಥವಾ ಇತರ ಕಾರಣಗಳಿಂದ ಘಟನೆ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಫೋಟಕ್ಕೆ ನಿಖರ ಕಾರಣ ಏನು ಎಂಬುದರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಬೇಕಾಗಿದೆ. ಆದರೆ ಇದ್ದಕ್ಕಿಂದ್ದಂತೆ ಬಾರೀ ಸ್ಪೋಟ ಉಂಟಾಗಿ ಜನತೆಯನ್ನ ಬೆಚ್ಚಿಬೀಳಿಸಿದ್ದು ಇನ್ನೂ ಕೂಡ ಆತಂಕದಿಂದ ಹೊರ ಬಂದಿಲ್ಲ.