ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news)ಭಟ್ಕಳ(Bhatkal) : ಪೋಕ್ಸೋ ಪ್ರಕರಣದಲ್ಲಿ(Pocso Case) ಪಿಎಸ್ಐ ಓರ್ವರನ್ನ ಪೊಲೀಸರು ಬಂಧಿಸಿದ್ದಾರೆ.

ಮಂಕಿ ಪೊಲೀಸ್ ಠಾಣೆಯ(Manki  Police Station) ಪಿಎಸ್‌ಐ ಅಭಿನಂದನ ಎಸ್. ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ(Sexual Harassment) ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಲಭ್ಯ ಮಾಹಿತಿಯ ಪ್ರಕಾರ, ಯಲ್ಲಾಪುರ ಮೂಲದ(Yalapur Native) 16 ವರ್ಷದ ಅಪ್ರಾಪ್ತೆಯೊಂದಿಗೆ ಪಿಎಸ್‌ಐ ಸಂಪರ್ಕ ಹೊಂದಿದ್ದರೆಂಬ ಆರೋಪ ಕೇಳಿಬಂದಿದೆ. ಭಟ್ಕಳದ ಖಾಸಗಿ ಹೋಟೆಲ್ ಒಂದರಲ್ಲಿ ಆಕೆಯೊಂದಿಗೆ ಭೇಟಿಯಾಗಿದ್ದ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಬಾಲಕಿಯ ಕಡೆಯವರಿಂದ ನೀಡಲಾದ ದೂರಿನ ಆಧಾರದ ಮೇಲೆ ಪೋಕ್ಸೋ ಕಾಯ್ದೆಯಡಿ(Pocso Act) ಪ್ರಕರಣ ದಾಖಲಿಸಿಕೊಂಡ ಪೊಲೀಸರು, ನಿನ್ನೆ ರಾತ್ರಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ(Bhatkal Rural Station) ವ್ಯಾಪ್ತಿಯಲ್ಲಿ ಪಿಎಸ್‌ಐ ಅಭಿನಂದನ ಎಸ್. ಅವರನ್ನು ಬಂಧಿಸಲಾಗಿದೆ.

ಕೆಲವು ತಿಂಗಳ ಹಿಂದಷ್ಟೇ ಮಂಕಿ ಪೊಲೀಸ್ ಠಾಣೆಗೆ(Manki Police Station) ವರ್ಗಾವಣೆಯಾಗಿದ್ದ ಅಭಿನಂದನ ಎಸ್., ಈ ಹಿಂದೆ ಭಟ್ಕಳದ ಮೂರಿನಕಟ್ಟೆ ಪ್ರಕರಣದ ವೇಳೆ ಕರ್ತವ್ಯ ನಿರ್ವಹಿಸಿದ್ದರು. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಕಾನೂನು ಪ್ರಕ್ರಿಯೆ ಮುಂದುವರಿದಿದೆ.