ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ಗೋಪಾಲಕೃಷ್ಣ ನಾಯಕ ಅವರ ಮೇಲೆ ಇತ್ತೀಚಿಗೆ ನಡೆದ ಹಲ್ಲೆ ಪ್ರಕರಣದಲ್ಲಿ(Assault Case) ನಮ್ಮ ಕುಟುಂಬದ ಹೆಸರನ್ನು ಅನವಶ್ಯಕವಾಗಿ ಎಳೆದು ತರುತ್ತಿದ್ದು ಇದು ದುರುದ್ದೇಶದಿಂದ ಕೂಡಿದೆ. ಅಲ್ಲದೆ ವೈಯಕ್ತಿಕವಾಗಿ ತೇಜೋವಧೆ ಮಾಡುವ ಹುನ್ನಾರ ನಡೆಸಲಾಗಿದೆ ಎಂದು ಉದ್ಯಮಿ ಮಯೂರ ಆರ್ ನಾಯಕ ಕುಟುಂಬ ತಿಳಿಸಿದೆ.
ಈ ಬಗ್ಗೆ ಪ್ರಕಟಣೆಯನ್ನ ನೀಡಿದ ನಾಯಕ ಕುಟುಂಬದವರು, ಹಲ್ಲೆ ಪ್ರಕರಣದ ಈ ಅವಕಾಶವನ್ನು ಬಳಸಿಕೊಂಡು ಗೋಪಾಲಕೃಷ್ಣ ನಾಯಕ ಅನವಶ್ಯಕವಾಗಿ ದಿ. ಆರ್ ಎನ್ ನಾಯಕ(R N Nayak) ಹಾಗೂ ಮಯೂರ ನಾಯಕ(Mayur Nayak) ಹೆಸರನ್ನು ಪ್ರಸ್ತಾಪಿಸಿರುವುದು ಈ ಮೂಲಕ ತಮ್ಮ ದ್ವೇಷಕ್ಕೆ, ದುರುದ್ದೇಶಕ್ಕೆ ಒಂದು ದಿಕ್ಕು ಗೊತ್ತುಮಾಡುವ, ಸ್ವಪ್ರಚಾರ ಪಡೆದುಕೊಳ್ಳುವ, ಇಲ್ಲವೇ ತಾವು ನಿಶ್ಚಿತವಾಗಿ ಆರೋಪಿಸಬೇಕಾದ ವ್ಯಕ್ತಿಯ ಗೊತ್ತು ಗುರಿಯಿಲ್ಲದೆಯೋ, ತಿಳಿದೂ ಅವರನ್ನು ರೀಚ್ ಮಾಡಲಾಗದೆಂಬ ಕಾರಣಕ್ಕೋ ಪ್ರಕರಣದ ದಿಕ್ಕು ತಪ್ಪಿಸಿಯಾದರೂ ಲಾಭ ಪಡೆದುಕೊಳ್ಳಬೇಕು ಎಂಬ ಉದ್ದೇಶಕ್ಕೆ ಈ ಮಾರ್ಗ ಅನುಸರಿಸುತ್ತಿರುವಂತೆ ಕಾಣುತ್ತಿದೆ ಎಂದಿದ್ದಾರೆ.
ಈ ಪ್ರಕರಣಕ್ಕೆ ಯಾವುದೇ ರೀತಿಯ ಸಂಬಂಧ ಇಲ್ಲದೆ ಇದ್ದರೂ ಕೂಡ ಹಿರಿಯ ಪೊಲೀಸ್ ಅಧಿಕಾರಿಗಳ ಮೂಲಕ ಒತ್ತಡ ಹಾಕಿಸಿ ಕೇಸನ್ನು ಮಯೂರ ನಾಯಕ ಮೇಲೆ ಎಳೆಯುವ ಹುನ್ನಾರ ನಡೆಸುವ ಅನುಮಾನವೂ ಕಾಡಿದೆ. ಸಹಕಾರಿ ಚುನಾವಣೆಯಲ್ಲಿ ಹಲವರೊಂದಿಗೆ ಗೋಪಾಲಕೃಷ್ಣ ನಾಯಕ(Gopalkrishna Nayak) ವಾಗ್ವಾದ ನಡೆಸಿದ ಕುರಿತು ಮಾಧ್ಯಮಗಳಲ್ಲಿಯೂ ವರದಿಯಾಗಿದೆ. ಆದರೆ ಕೇವಲ ಮಯೂರ ನಾಯಕ ಹೆಸರನ್ನು ಮಾತ್ರ ಬಳಕೆ ಮಾಡಿರುವುದು ಅಲ್ಲದೇ ಕೆಲವು ಮಾಧ್ಯಮಗಳ ವರದಿಗಳಲ್ಲಿ ತಪ್ಪು ಕಲ್ಪನೆ ಮೂಡುವಂತೆ ಆ ಮೂಲಕ ಸಾರ್ವಜನಿಕ ಅಭಿಪ್ರಾಯವನ್ನು ಬೇರೆಡೆಗೆ ಸೆಳೆಯುವ ಕುತಂತ್ರವೂ ಇದರ ಹಿಂದಿದೆ. ಹಾಗಾಗಿ ಆರ್ ಎನ್ ನಾಯಕ ಕುಟುಂಬದ(R N Nayak Family) ಆತ್ಮೀಯ ಬಾಂಧವರು ಈ ವದಂತಿ ಇಲ್ಲವೇ ಕಪೋಕಲ್ಪಿತ ಊಹಾಪೋಹಗಳಿಗೆ ಕಿವಿಗೊಡಬಾರದು. ಹಲ್ಲೆ ಪ್ರಕರಣದ ತನಿಖೆ ನ್ಯಾಯೋಚಿತವಾಗಿ ನಡೆಯುವುದೆಂಬ ಭರವಸೆ ನಮಗೂ ಇದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ : ಏಪ್ರಿಲ್, ಮೇ ತಿಂಗಳಲ್ಲಿ ಸರ್ಕಾರಿ ಕಚೇರಿ ಸಮಯ ಬದಲಾವಣೆ.
ಏಪ್ರಿಲ್ 5ರಿಂದ 9ರವರೆಗೆ ಮುಂಡಳ್ಳಿಯಲ್ಲಿ ಅಮ್ಮನವರ ಅಷ್ಟಬಂಧ ಬ್ರಹ್ಮಕಲಶೋತ್ಸವ
ದುಬೈಗೆ ಹಾರಿದ ಸ್ನೇಹಿತನ ಮೊಬೈಲ್ ಪಡೆದ ಆಸಾಮಿ. ಹಣ ಕೇಳಿದರೇ ಬೆದರಿಕೆ. ಭಟ್ಕಳದಲ್ಲಿ ದೂರು.

