Landslide: ಕುಮಟಾ,: ಕುಮಟಾ-ಶಿರಸಿ ಹೆದ್ದಾರಿಯಲ್ಲಿ ಮತ್ತೆ ಗುಡ್ಡ ಕುಸಿದಿದೆ. ತಡರಾತ್ರಿ ಗುಡ್ಡ ಕುಸಿದಿದ್ದರಿಂದ ಸಂಚಾರ ಸಂಪೂರ್ಣ ಬಂದ್ ಆಗಿದೆ.

ರಾಷ್ಟ್ರೀಯ ಹೆದ್ದಾರಿ 766Eಯ ರಾಗಿಹೊಸಳ್ಳಿ ಬಳಿ ಈ ಘಟನೆ ನಡೆದಿದ್ದು ಮಳೆ ಹೆಚ್ಚಾಗಿದ್ದರಿಂದ ಅತಂಕ ಇಮ್ಮಡಿಗೊಳಿಸಿದೆ. ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಗಿದ್ದು,  ಶಿರಸಿ-ಕುಮಟಾ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿದೆ. ರಸ್ತೆಯಲ್ಲಿ ಬಿದ್ದ ಮಣ್ಣು ತೆರವುಗೊಳಿಸಿದ ಮೇಲೆ ಸಂಚಾರ ಮುಂದುವರಿಯುವ ಲಕ್ಷಣವಿದೆ.

ಹೊನ್ನಾವರ-ಸಾಗರ -ಶಿವಮೊಗ್ಗ ರಸ್ತೆ ಮಾರ್ಗ ವರ್ನಕೇರಿ ಬಳಿ ಪುನಹ ಭೂ ಕುಸಿತವಾಗಿ ಸಂಚಾರಕ್ಕೆ ತೊಡಕಾಗಿದೆ.