ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ಅಂಗಡಿಗೆ ಹೋಗಿ ಬರುವುದಾಗಿ ತಾಯಿಯಲ್ಲಿ ಹೇಳಿ ಹೋಗಿದ್ದ ಯುವತಿಯೋರ್ವಳು ವಾಪಸ್ಸು ಬರದೇ ನಾಪತ್ತೆಯಾದ ಘಟನೆ ಶಿರಸಿಯಲ್ಲಿ ನಡೆದಿದೆ.
ಯಲ್ಲಾಪುರ ತಾಲೂಕಿನ ಕಿರವತ್ತಿಯ ಜಯಂತಿನಗರದ ರಕ್ಷಿತಾ ಚಂದಾವರ (20) ನಾಪತ್ತೆಯಾದವಳು. ನಿನ್ನೆ ಊರಿನಿಂದ ಶಿರಸಿಗೆ ಬಂದಿದ್ದ ಈಕೆ ಹಳೆ ಬಸ್ ನಿಲ್ದಾಣದ ಬಳಿಯಿರುವ ಅಂಗಡಿಗೆ ಹೋಗಿ ಬರುವುದಾಗಿ ಅವರ ತಾಯಿ ಬಳಿ ಹೇಳಿದ್ದರು. ಅಂಗಡಿಗೆ ಹೋದ ಅವರು ಎಷ್ಟು ಹೊತ್ತು ಕಳೆದರೂ ಮರಳಿ ಬಾರದಾಗ ತಾಯಿ ಅಂಗಡಿ ಕಡೆ ಹೋಗಿ ನೋಡಿದರೆ ಅಲ್ಲಿ ಇರಲಿಲ್ಲ. ಹುಡುಕಾಟ ನಡೆಸಿ ಸಂಬಂಧಿಕರ ಮನೆ, ಪರಿಚಯಸ್ಥರ ಮನೆಗೆ ಫೋನ್ ಮಾಡಿದರೂ ಯಾವುದೇ ಸುಳಿವು ದೊರೆಯಲಿಲ್ಲ.
ಕೊನೆಗೆ ತಾಯಿ ಪೊಲೀಸ್ ಠಾಣೆಗೆ ತೆರಳಿ ಮಗಳು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ರಕ್ಷಿತಾ ಅವರ ಹುಡುಕಾಟ ನಡೆಸುತ್ತಿದ್ದಾರೆ. ರಕ್ಷಿತಾ ಕನ್ನಡ ಹಾಗೂ ಕೊಂಕಣಿ ಮಾತನಾಡುತ್ತಾರೆ ಎಂದು ಪೊಲೀಸರು ತಿಳಿಸಿದ್ದು ಪತ್ತೆಯಾದರೆ ಸಮೀಪದ ಪೊಲೀಸ್ ಠಾಣೆಗೆ ಅಥವಾ ಶಿರಸಿ ನಗರ ಪೊಲೀಸ್ 08384-22633, 9480805264 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸರು ಕೋರಿದ್ದಾರೆ.
ಇದನ್ನು ಓದಿ : ಮೀನು ಮಾರಾಟ ಮಹಿಳೆಯರಿಂದ ಅದ್ದೂರಿ ಮಾಘ ಚೌತಿ ಆಚರಣೆ. ಗಣೇಶನ ಮುಂದೆ ಸಂಭ್ರಮವೋ ಸಂಭ್ರಮ.
ಕೇಂದ್ರ ಸರ್ಕಾರದ ಬಜೆಟ್ ಮಂಡನೆ.ಮಹಿಳೆಯರಿಗೆ ಗಿಫ್ಟ್, ಸೇನಾ ಬಲ ಹೆಚ್ಚಳಕ್ಕೆ ಒತ್ತು.