ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಉತ್ತರಪ್ರದೇಶ (Uttarapradesh) :  ವಿಶ್ವ ವಿಖ್ಯಾತ ಮಹಾಕುಂಭ ಮೇಳ ಪ್ರಯಾಗರಾಜ್‌(Prayagraj)  ಅದ್ದೂರಿಯಿಂದ ನಡೆಯುತ್ತಿದ್ದು,  ಕೋಟ್ಯಂತರ ಜನರು ಆಗಮಿಸುತ್ತಿದ್ದಾರೆ.  ಮಹಾಕುಂಭಕ್ಕೆ ಸಂಬಂಧಿಸಿದ ಹಲವು ವಿಷಯಗಳು ಆಚರಣೆಗಳು ಟ್ರೆಂಡಿಂಗ್ ನಲ್ಲಿವೆ. ಈ ನಡುವೆ ಮಾಲೆಗಳನ್ನು ಮಾರುವ ಹುಡುಗಿ ಮೋನಾಲಿಸಾ (Monalisa) ಬಾರೀ ಸದ್ದು ಮಾಡಿದ್ದಾಳೆ.

ಆಕರ್ಷಕವಾದ  ಕಣ್ಣುಗಳನ್ನು ಹೊಂದಿರುವ 16 ಹರೆಯದ ಹುಡುಗಿ ಮೊನಾಲಿಸಾಳ(Monalisa) ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಆಕೆಯನ್ನು ನೋಡಲು ಮತ್ತು ಆಕೆಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು  ಜನ ಸೇರುತ್ತಿದ್ದಾರೆ. ಈ ನಡುವೆ ಮೊನಾಲಿಸಳ  ಸಂದರ್ಶನಗಳು,  ಮಾತಿನ ತುಣುಕುಗಳು  Instagram ಮತ್ತು X ನಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿದೆ.

ಮಹಾಕುಂಭ ಮೇಳದಲ್ಲಿ(Mahakumbha mela) ಸರ, ಮಣಿ, ರುದ್ರಾಕ್ಷಿ ಮಾಲೆ ಮಾರಾಟ ಮಾಡುತ್ತಿದ್ದ ಕೃಷ್ಣ ಸುಂದರಿ  ಮೊನಾಲಿಸಾ ಭೋಸ್ಲೆ (Monalisa bosle) ರಾತ್ರಿ ಬೆಳಗಾಗುವಷ್ಟರಲ್ಲೇ  ನ್ಯಾಷನಲ್ ಕ್ರಶ್ ಆಗಿ ಹೊರಹೊಮ್ಮಿದ್ದಳು.

ಇದೀಗ ಹೊಸ ಅಧ್ಯಾಯ ಮೊನಾಲಿಸಾ ಆರಂಭಿಸಿದ್ದಾಳೆ. ಈಗ ಆಕೆ ಮಣಿ ಸರ ಮಾರುವವಳಲ್ಲ. ಮಾಡೆಲ್ ಕಮ್ ಕಂಟೆಂಟ್ ಕ್ರಿಯೇಟರ್(Model cum Content Creator) ಮೊನಾಲಿಸಾ ಎಂದು ಕರೆಸಿಕೊಳ್ಳುತ್ತಿದ್ದಾಳೆ.

ಮಹಾಕುಂಭ ಮೇಳದಲ್ಲಿ  ಭದ್ರತೆ ಮತ್ತು ವ್ಯಾಪಾರ ಸಮಸ್ಯೆ ಎದುರಿಸಿದ ಮೊನಾಲಿಸಾ ಇಂದೋರ್‌ಗೆ ಮರಳಿದ್ದಳು. ವಿಶ್ವದ ಗಮನ ಸೆಳೆದಿದ್ದ ಆಕೆಯ ಕಣ್ಣುಗಳು  ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮೊನಾಲಿಸಾ ಈಗ ಸೆಲೆಬ್ರೆಟಿ  ಸಂಪೂರ್ಣ ಬದಲಾಗಿದ್ದಾಳೆ. ಮಾಡೆಲ್ ರೂಪದಲ್ಲಿ ಕಾಣಿಸಿಕೊಂಡಿದ್ದಾಳೆ. ಶಿಪ್ರಾ ಮೇಕ್‌ಓವರ್‌ ಬ್ಯೂಟಿ ಸಲೂನ್‌ನಲ್ಲಿ ಹೇರ್ ಸ್ಟೈಟನಿಂಗ್, ಮೇಕ್ ಅಪ್ ಮಾಡಿಸಿಕೊಂಡಿದ್ದಾಳೆ.

ಮೊನಲಿಸಾ ಸೌಂದರ್ಯ ಇದೀಗ ದುಪ್ಪಟ್ಟಾಗಿದೆ. ಮಾಡೆಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. ಇದೀಗ ಮೊನಾಲಿಸಾ ಭೋಸ್ಲೆ ಹೊಸ ವಿಡಿಯೋ ವೈರಲ್ ಆಗಿದೆ. ಮೊನಾಲಿಸಾ ಭೋಸ್ಲೆ ಅನ್ನೋ ಸೋಶಿಯಲ್ ಮೀಡಿಯಾ ಖಾತೆಗಳು ಆರಂಭಗೊಡಿದೆ. ಈ ಖಾತೆಗಳಲ್ಲಿ ಸುಂದರಿ ಮೊನಾಲಿಸಾ ವಿಡಿಯೋಗಳು ಪೋಸ್ಟ್ ಆಗುತ್ತಿವೆ. ಮುಂದೆ ಆಕೆ ಹೇಗೆ ಟ್ರೆಂಡ್ ಅಗಲಿದ್ದಾಳೆಂಬ ಕುತೂಹಲ ಜಾಸ್ತಿಯಾಗಿದೆ.

ಇದನ್ನು ಓದಿ : ಮುರ್ಡೇಶ್ವರದಲ್ಲಿ ಆಟೋ ಚಾಲಕರ ಧೀಡಿರ್ ಪ್ರತಿಭಟನೆ.

ರಾಜ್ಯದಲ್ಲಿ ಮದ್ಯ ಮತ್ತೆ ದುಬಾರಿ. ಮದ್ಯ ಪ್ರಿಯರಿಗೆ ಶಾಕ್

ಅಂದು ಕರ್ನಾಟಕದಲ್ಲಿಯೇ ಐಎಎಸ್ ಅಧಿಕಾರಿಯಾಗಿ ಸೇವೆ. ಇಂದು ನಾಗಾ ಸಾಧು !

ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ. ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ.

ಹೊನ್ನಾವರ ಸೇತುವೆ ಮೇಲೆ ಭೀಕರ ಅಪಘಾತ. ಯುವತಿ ದುರ್ಮರಣ