ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಚಿಕ್ಕಮಗಳೂರು (Chikkamagaluru) : ಮೊನ್ನೆಯಷ್ಟೇ ಶರಣಾಗತಿ(Surrender) ಆಗಿರುವ ನಕ್ಸಲರು(Nakshal) ಕಾಡಿನೊಳಗೆ ವಿವಾಹವಾಗಿರುವ(Marriage) ಸಂಗತಿ ಬೆಳಕಿಗೆ ಬಂದಿದೆ.

ಬಿ ಜೆ ಕೃಷ್ಣಮೂರ್ತಿ ,ಸಾವಿತ್ರಿ,  ಸುರೇಶ್, ವನಜಾಕ್ಷಿ,  ಜಯಣ್ಣ, ಸುಂದರಿ ಮದುವೆಯಾಗಿರುವ ಜೋಡಿಗಳಾಗಿದ್ದಾರೆ. ನಕ್ಸಲಿಸಂ ಕರಿ ನೆರಳಲ್ಲೂ ಪ್ರೇಮಕಥೆಗಳು ಅರಳಿದೆ.  ಕ್ರಾಂತಿ ಗೀತೆ ಹಾಡಿನ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಕ್ಸಲ್ ಜೀವನದ(Nakshal Life) ನಡುವೆ  ಪ್ರೇಮಾಂಕುರವಾಗಿ ಮದುವೆಯಾಗಿದ್ದಾರೆ.

ನಕ್ಸಲ ಚಟುವಟಿಕೆಯಲ್ಲಿ ಇರುವಾಗಲೇ ಕೈಯಲ್ಲಿ  ಬಂದೂಕು, ಬೆಟ್ಟ ಗುಡ್ಡಗಾಡು, ಕಾಡ ದಾರಿಯಲ್ಲೇ ಜೀವನ ನಡೆಸುತ್ತಿರುವಾಗಲೇ ಪ್ರೇಮಾಂಕುರವಾಗಿದೆ(Love). ಇವರ ಮದುವೆಗೆ ಯಾವುದೇ ಲಗ್ನ ಪತ್ರಿಕೆ ಇಲ್ಲ, ತಾಳಿ ಕಟ್ಟುವಂತಿಲ್ಲ, ನೆಂಟರು ಸಂಬಂಧಿಕರು ಯಾರಿಗೂ ಆಹ್ವಾನವಿಲ್ಲ. ನಕ್ಸಲ್ ಚಟುವಟಿಕೆಯಲ್ಲಿ ಇದ್ದ ಯುವಕ ಯುವತಿ ಇಚ್ಚಿಸಿದರೆ ಮಾತ್ರ ದಾಂಪತ್ಯ ಜೀವನಕ್ಕೆ ಶುಭ ಮುಹೂರ್ತ ಶುಭ ಗಳಿಗೆಯಾಗಿತ್ತು. ಮಧು, ವರರನ್ನು ಒಂದೆಡೆ ಕೂರಿಸಿ ಕ್ರಾಂತಿಗೀತೆ ಹಾಡಿ ಮದುವೆ ಕಾರ್ಯ ಸಂಪನ್ನ ಮಾಡಲಾಗಿತ್ತು.

ಇತ್ತೀಚಿಗೆ ಶರಣಾಗತಿಯಾದ ನಕ್ಸಲರು ಪೊಲೀಸ್ ತನಿಖೆ ನಡೆಸುವ ಸಂದರ್ಭದಲ್ಲಿ  ಪ್ರೀತಿ, ಮದುವೆ ಕಥೆಗಳು ಅನಾವರಣಗೊಂಡಿದೆ. ಶರಣಾದ ನಕ್ಸಲರಿಂದ‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಶ್ಚಿಮ ಘಟ್ಟಗಳ(Western Ghat) ಸಾಲಿನ ಕಾಡಿನಲ್ಲಿ ಎರಡು ದಶಕದ ಲವ್ ಕಹನಿ ಈಗ ಹೊರ ಬಿದ್ದಿದೆ.

ಚಿಕ್ಕಮಗಳೂರು(Chikamanglore) ಜಿಲ್ಲೆಯ ಮಲೆನಾಡನ್ನು(Malenadu) ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ಶಿವಮೊಗ್ಗ(Shivamogga), ಉಡುಪಿ(Udupi) ಹಾಗೂ ದಕ್ಷಿಣ ಕನ್ನಡ (Dakshinakannada) ಜಿಲ್ಲೆಗಳಲ್ಲಿ ಸಕ್ರಿಯರಾಗಿದ್ದ ನಕ್ಸಲೀಯರಲ್ಲಿ ಹಲವು ಮಂದಿ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ. ಕೆಲವರು ಅನಾರೋಗ್ಯದಿಂದ ಸಮಾಜದ ಮುಖ್ಯ ವಾಹಿನಿಗೆ ಬಂದಿದ್ದರು. ನಕ್ಸಲ್ ನಾಯಕ ವಿಕ್ರಂ ಗೌಡ ಈಗಾಗಲೇ ಎನ್ಕೌಂಟರ್ ನಲ್ಲಿ ಹತನಾದ ಬಳಿಕ ಆರು ಮಂದಿ ಸಿಎಂ ಮುಂದೆ ಶರಣಾಗಿದ್ದಾರೆ.

ಇದನ್ನು ಓದಿ : ಉದ್ಯಮಿ ಕಿಡ್ನಾಪ್. ಹಲ್ಲೆ ಮಾಡಿ ಬೇರೊಂದು ಕಡೆ ಬಿಟ್ಟು ಓಡಿದ ಕಿಡ್ನಾಪರ್ಸ್.

ಹಿಂದುಸ್ತಾನವು ಎಂದು ಮರೆಯದ ಬಹುಭಾಷೆಯ ಖ್ಯಾತ ಗಾಯಕ ನಿಧನ.

ನಿಯಮ ಮೀರಿದ ಬೈಕ್ ಸವಾರನಿಗೆ ಬಿತ್ತು ಬರೋಬ್ಬರಿ ದಂಡ.

ಅರಬ್ಬೀ ಸಮುದ್ರದಲ್ಲಿ ಪಲ್ಟಿಯಾದ ದೋಣಿ. ಆಪತ್ಬಾಂಧವನಂತೆ ಬಂದ ಮಂಗಳೂರು ಮೀನುಗಾರರು