ಶಿರಸಿ(SIRSI) :  ಇಲ್ಲಿನ ವಿದ್ಯಾನಗರ (Vidyanagar) ಮತ್ತು ಸಹ್ಯಾದ್ರಿ ಕಾಲೋನಿಯಲ್ಲಿ (Sahyadri Colony) ಮನೆಗೆ ನುಗ್ಗಿ   ದರೋಡೆ ಮಾಡಿದ ಆರೋಪಿಗಳಿಗೆ ಒಂದನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಎರಡು ಪ್ರಕರಣಗಳಲ್ಲಿ ಜೀವಾವಧಿ ಮತ್ತು ಜೈಲು ಶಿಕ್ಷೆ ವಿಧಿಸಿ ಅದೇಶಿಸಿದೆ

  2017 ರಲ್ಲಿ  ಶಿರಸಿ ಹೊಸ ಮಾರುಕಟ್ಟೆ ಪೊಲೀಸ್(Sirsi new Market Station) ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿ ಅಂದಿನ ಸಿಪಿಐ ಗಿರೀಶ್ ಬಿ ಅವರು ನ್ಯಾಯಾಲಯಕ್ಕೆ  ದೋಷಾರೋಪಣ ಪತ್ರ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಮಾನ್ಯ ಒಂದನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಶಿರಸಿ ವಿಚಾರಣೆ ಕೈಗೊಂಡಿತ್ತು. ಸರಕಾರಿ ಅಭಿಯೋಜಕ ರಾಜೇಶ್ ಮಳಗಿಕರ್ ಅವರು ಸಮರ್ಥವಾದ ವಾದ ಮಂಡಿಸಿದ್ದರು. ನ್ಯಾಯಧೀಶರಾದ  ಕಿರಣ ಕಿಣಿ ರವರು ಮಧ್ಯಪ್ರದೇಶದ  ಆರೋಪಿಗಳಾದ ಬಹೂದ್ದೂರ್ ಸಿಂಗ್ ಮತ್ತು ಸೂರಬ್ ಇವರಿಗೆ ಒಂದು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಮತ್ತು ಮತ್ತೊಂದು ಪ್ರಕರಣದಲ್ಲಿ 10 ವರ್ಷಗಳ ಕಾಲ ಜೈಲ ಶಿಕ್ಷೆ ನೀಡಿ ಅದೇಶಿಸಿದ್ದಾರೆ.

 ಈ ಪ್ರಕರಣದಲ್ಲಿ ಆರೋಪಿತರು 2019ರಲ್ಲಿ  ದಾವಣಗೆರೆ(Davanagere) ಜಿಲ್ಲೆಯ ಜೈಲ್ಲಿನಲ್ಲಿದ್ದವರು ಅಲ್ಲಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದರು. ತಲೆಮಾರಿಸಿಕೊಂಡಿದ್ದ ಆರೋಪಿತರನ್ನು ಪತ್ತೆ ಮಾಡುವ ಸಲುವಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಾರಾಯಣ ಎಂ.,  ಹೆಚ್ಚುವರಿ ಅಧೀಕ್ಷಕರಾದ ಸಿ ಟಿ ಜಯಕುಮಾರ್ ಹಾಗೂ ಜಗದೀಶ್ ರವರು ಹಾಗೂ ಶಿರಸಿ ಡಿ ವೈ ಎಸ್ಪಿ ಕೆ ಎಲ್ ಗಣೇಶ್,  ಪಿ., ಸಿಪಿಐ ಶಶಿಕಾಂತ ವರ್ಮಾ ಸಿ. ಪಿ. ಐ. ಅವರ ಮಾರ್ಗದರ್ಶನದಲ್ಲಿ   ಶಿರಸಿ ಮಾರ್ಕೆಟ್ ಠಾಣೆ ಪಿಎಸ್ಆಯ್ ಕು.ರತ್ನಾ ಕುರಿ, ಎ ಎಸ್ ಆಯ್ ಖೀರಪ್ಪ ಘಟಕಾಂಬ್ಳೆ, ಸಿಬ್ಬಂದಿಗಳಾದ ಹನುಮಂತ ಬೋವಿ, ಪ್ರದೀಪ್ ನಾಯಕ, ದರ್ಶನ ಬಳಗಾರ, ಯಲ್ಲಾಪುರ ಠಾಣಾ ಸಿಬ್ಬಂದಿ ಶಫಿ ರವರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿತರು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಮಾತ್ರವಲ್ಲದೆ ಇತರೇ ಹಲವಾರು ಜಿಲ್ಲೆ ರಾಜ್ಯಗಳಲ್ಲಿಯೂ ಸಹ ಬೇಕಾದ ಆರೋಪಿಗಳಾಗಿದ್ದಾರೆ. 

ಇದನ್ನು ಓದಿ : ಬೆಲೆಕೇರಿ ಕೇಸ್, ಶಾಸಕ ಸತೀಶ್ ಸೈಲ್ ಗೆ ಶನಿವಾರ ಶಿಕ್ಷೆ ಪ್ರಕಟ

ಮರಕಂಬಿ ದಲಿತ ದೌರ್ಜನ್ಯ ಪ್ರಕರಣ

ತಲ್ವಾರ್ ಹಿಡಿದು ರೌಡಿಗಳ ಅಟ್ಟಹಾಸ

ವಾಹನ ತಡೆದ ಪೊಲೀಸ್ ಸಿಬ್ಬಂದಿಯನ್ನ ಬೋನೆಟ್ ಮೇಲೆ ಎತ್ತೋಯ್ದ ಚಾಲಕ