ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಮದ್ಯ ಪಾನ ಮುಕ್ತ ಸಮಾಜಕ್ಕಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಹಿಂದೆ ಬಹು ದೊಡ್ಡ ಆಂದೋಲನ ಮಾಡಿದವರು. ಆದರೆ ಅವರಿಗೆ ಅವಮಾನ ಮಾಡುವ ಘಟನೆ ಅಲ್ಲಲ್ಲಿ ನಡೆಯುತ್ತಲೇ ಇದೆ.  ಮದ್ಯ ಕಂಪೆನಿಯೊಂದು  ಗಾಂಧೀಜಿ(Gandhiji) ಅವರ ಭಾವಚಿತ್ರವನ್ನು ಬಿಯರ್‌ ಕ್ಯಾನ್‌ನಲ್ಲಿ ಪ್ರಿಂಟ್‌(Photo Print) ಮಾಡಿಸುವುದರ ಮೂಲಕ ಅವರಿಗೆ ಅವಮಾನ ಮಾಡಿದೆ. ಈ ಸಂಬಂಧದ ವಿಡಿಯೋವೊಂದು ಸಾಮಾಜಿಕ ಜಾಲ ತಾಣದಲ್ಲಿ  ವೈರಲ್‌(Social Media Viral) ಆಗಿ  ಆಕ್ರೋಶಕ್ಕೆ ಕಾರಣವಾಗಿದೆ

ರಷ್ಯಾದ ಕಂಪನಿಯೊಂದು(Russia Company) ಬಿಯರ್ ಕ್ಯಾನ್‌ನಲ್ಲಿ ಮಹಾತ್ಮ ಗಾಂಧಿಯವರ(Mahatma Gandhi) ಚಿತ್ರವನ್ನು ಪ್ರಿಂಟ್‌ ಮಾಡಿಸಿ, ವಿವಾದ ಹುಟ್ಟುಹಾಕಿದೆ. ವರದಿಗಳ ಪ್ರಕಾರ, ರೆವರ್ಟ್ ಬ್ರಾಂಡ್‌ನ ಹೇಜಿ ಐಪಿಎ ಬಿಯರ್ ಕ್ಯಾನ್‌ಗಳಲ್ಲಿ ಗಾಂಧಿಯವರ ಫೋಟೋ ಮತ್ತು ಸಹಿಯನ್ನು ಮುದ್ರಿಸಲಾಗಿದೆ. ಈ ಬಿಯರ್‌ ಕ್ಯಾನ್‌ ಫೋಟೋ ಭಾರೀ ವೈರಲ್‌ ಆಗಿದ್ದು, ಮದ್ಯ ಮುಕ್ತ ಸಮಾಜದ ಕನಸು ಕಂಡ ಗಾಂಧೀಜಿಯವರಿಗೆ ಮಾಡಿದ ಅವಮಾನವಿದು ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಅಮೆರಿಕಾದ ಕಂಪೆನಿಯೊಂದು (America Company) ತಮ್ಮ ಬಿಯರ್‌ ಬಾಟಲ್‌ಗಳ ಮೇಲೆ ಗಾಂಧೀಜಿ ಭಾವಚಿತ್ರವನ್ನು ಮುದ್ರಿಸಿತ್ತು. ಆಗ  ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದ ಬಳಿಕ ಅಮೆರಿಕದ ಕಂಪನಿ ತನ್ನ ಬಿಯರ್ ಉತ್ಪನ್ನಗಳಿಂದ ಗಾಂಧಿಯವರ ಚಿತ್ರವನ್ನು ತೆಗೆದುಹಾಕಿ ಕ್ಷಮೆಯಾಚಿಸಿದ್ದವು.

ಇದೀಗ ವೈರಲ್ ಆದ  ಗಾಂಧೀಜಿ ಭಾವಚಿತ್ರ ಹಾಗೂ ಅವರ ಸಹಿ ಇರುವ ಬಿಯರ್‌ ಕ್ಯಾನ್‌ಗಳ  ದೃಶ್ಯಕ್ಕೆ ಬಾರೀ ಆಕ್ರೋಶ ವ್ಯಕ್ತವಾಗಿದ್ದು  ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಕೇಳಿ ಬಂದಿದೆ.

ಇದನ್ನು ಓದಿ : ಜಲಪಾತದಲ್ಲಿ ಮುಳುಗಿ ಇಬ್ಬರು ಬಾಲಕರು ನಾಪತ್ತೆ.

ಕಾರವಾರದಲ್ಲಿ ಲೋಕಾಯುಕ್ತ ದಾಳಿ.ನಗರ ಯೋಜಕ ಸದಸ್ಯ ಬಲೆಗೆ

ತೆರವುಗೊಳಿಸುವ ವೇಳೆ ಎದ್ದು ನಿಂತ ಕಾಳಿ ಸೇತುವೆಯ ಸ್ಲ್ಯಾಬ್