ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಮುರ್ಡೇಶ್ವರ ಪೊಲೀಸ್ ಠಾಣಾ (Murdeshwar Police Station) ವ್ಯಾಪ್ತಿಯ ಕ್ರಿಮಿನಲ್ ಹಿನ್ನಲೆ ಹೊಂದಿದ ಐವರು ರೌಡಿಗಳನ್ನು ವಿವಿಧ ಜಿಲ್ಲೆಗಳಿಗೆ ಗಡಿಪಾರು(Exile) ಮಾಡುವಂತೆ ಆದೇಶ ಮಾಡಲಾಗಿದೆ.
ಭಟ್ಕಳ (Bhatkal) ತಾಲೂಕಿನ ಮುರ್ಡೇಶ್ವರ(Murdeshwar) ಸುತ್ತಮುತ್ತ ಪ್ರದೇಶಗಳಲ್ಲಿ ನಿರಂತರವಾಗಿ ಕ್ರಿಮಿನಲ್ ಚಟುವಟಿಕೆಗಳಲ್ಲಿ(Criminal Activities) ತೊಡಗಿಕೊಂಡ ಕಾರಣಕ್ಕೆ ಭಾಸ್ಕರ ಮಹಾದೇವ ನಾಯ್ಕ, ರಾಜು ಮಹಾದೇವ ನಾಯ್ಕ, ಕೇಶವ ಋತಿಕ ಮಹಾದೇವ ನಾಯ್ಕ, ಗಣೇಶ ಬಾಬು ನಾಯ್ಕ ಹಾಗೂ ಗಣೇಶ ಚಕ್ಲಿ ಜಯಂತ ನಾಯ್ಕ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು. ಇವರ ಮೇಲೆ ರೌಡಿ ಶೀಟ್(Rowdysheet) ತೆರೆಯಲಾಗಿದ್ದು, ಪೊಲೀಸ್ ನಿಗಾದಲ್ಲಿದ್ದರೂ ಚಟುವಟಿಕೆಗಳನ್ನು ಮುಂದುವರಿಸುತ್ತಿರುವುದರಿಂದ ಗಡಿಪಾರು ಕ್ರಮ(Exil Action) ಕೈಗೊಂಡು ಆದೇಶಿಸಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕರ ಶಿಫಾರಸ್ಸಿನ ಮೇರೆಗೆ ತಾಲೂಕು ಉಪವಿಭಾಗಾಧಿಕಾರಿ ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳ ನ್ಯಾಯಾಲಯವು ಕರ್ನಾಟಕ ಪೊಲೀಸ್ ಕಾಯ್ದೆ(Karnataka Police Act) 1963ರ ಕಲಂ 55(ಎ) ಮತ್ತು (ಬಿ) ಅಡಿಯಲ್ಲಿ ಏಪ್ರಿಲ್ 2ರಂದು ಗಡಿಪಾರು ಆದೇಶ(Exile Order) ಹೊರಡಿಸಲಾಗಿತ್ತು. ಆ ಆದೇಶದಂತೆ, ಭಾಸ್ಕರ ಮಹಾದೇವ ನಾಯ್ಕ ಅವರನ್ನು ಬಾಗಲಕೋಟೆ ಜಿಲ್ಲೆಯ ನವನಗರ ಪೊಲೀಸ್ ಠಾಣಾ (Bagalkot District Navanagar Police Station) ವ್ಯಾಪ್ತಿಗೆ, ರಾಜು ಮಹಾದೇವ ನಾಯ್ಕ ಅವರನ್ನು ಬೀದರ ಜಿಲ್ಲೆಯ ನ್ಯೂಟೌನ್ ಠಾಣಾ(Bidar District New town Station)
ವ್ಯಾಪ್ತಿಗೆ, ಕೇಶವ ಋತಿಕ ಮಹಾದೇವ ನಾಯ್ಕ ಅವರನ್ನು ಗದಗ ಜಿಲ್ಲೆಯ ಬೆಟಗೇರಿ ಠಾಣಾ(Gadag District Betageri Station) ವ್ಯಾಪ್ತಿಗೆ, ಗಣೇಶ ಬಾಬು ನಾಯ್ಕ ಅವರನ್ನು ವಿಜಯಪುರ ಜಿಲ್ಲೆಯ ಗಾಂಧಿ ಚೌಕ್ ಠಾಣಾ (Vijayapura District GandhiChowk Station) ವ್ಯಾಪ್ತಿಗೆ ಹಾಗೂ ಗಣೇಶ ಚಕ್ಲಿ ಜಯಂತ ನಾಯ್ಕ ಅವರನ್ನು ಕಲಬುರಗಿ ಜಿಲ್ಲೆಯ ಚೌಕ ಠಾಣಾ (Kalburgi District Chowka Station) ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಮುರ್ಡೇಶ್ವರ ಪೊಲೀಸ್ ಠಾಣಾ(Murdeshwar Police Station) ಸಿಬ್ಬಂದಿಗಳು ಆರೋಪಿಗಳನ್ನು ಸಂಬಂಧಿಸಿದ ಜಿಲ್ಲೆಗಳ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ.
ಇದನ್ನು ಓದಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ಕಾರು. ಚಾಲಕ ದಹನ. ಸುಳಿಮುರ್ಕಿಯಲ್ಲಾದಂತೆ ಕಂಡು ಬರುತ್ತಿರುವ ದೃಶ್ಯ. ಪೊಲೀಸರಿಂದ ತನಿಖೆ.
ಜಿಲ್ಲಾ ಮೀನು ಮಾರಾಟ ಫೆಡರೇಶನ್ ಚುನಾವಣೆ. ರಾಜು ತಾಂಡೇಲ ಅಭಿಮಾನಿ ಬಳಗದ ಬಹುತೇಕ ಸದಸ್ಯರ ಗೆಲುವು. ವಿಜಯೋತ್ಸವ.
