ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) :  ರಾಷ್ಟ್ರೀಯ ಹೆದ್ದಾರಿ 66ರ ತೆಂಗಿನಗುಂಡಿ ಕ್ರಾಸ್ ಬಳಿ ಕಾರ್ಯಾಚರಣೆ ನಡೆಸಿದ ಭಟ್ಕಳ ಪೊಲೀಸರು ಆರೋಪಿಯೋರ್ವನನ್ನ ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ

ಬಂಧಿತನಾದ ಆರೋಪಿ ಸಯ್ಯದ್ ಮುಕ್ತಿಯಾರ್  ಬಂಧಿತ ಆರೋಪಿ. ಹೊನ್ನಾವರ ತಾಲೂಕಿನ ಕಾಸರಕೋಡ ನಿವಾಸಿಯಾಗಿದ್ದಾನೆ.  ಮತ್ತೋರ್ವ ಮುಖ್ಯ ಆರೋಪಿ ಸಯ್ಯದ್ ಗುಲ್ದಾರ್ (22) ಪರಾರಿಯಾದವನು.

ಮಂಗಳವಾರ ಸಂಜೆ ಕಾರಿನಲ್ಲಿ ಭಟ್ಕಳ ಕಡೆ ಸಾಗಿಸಲಾಗುತಿತ್ತು. ಖಚಿತ ಮಾಹಿತಿ ಮೇರೆಗೆ  ಭಟ್ಕಳ ಶಹರ ಠಾಣೆ ಪಿಎಸ್ಐ  ನವೀನ್ ಎಸ್. ನಾಯ್ಕ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ವೇಳೆ ಸುಮಾರು1.750 ಗ್ರಾಂನ  50 ಸಾ. ರೂ ಮೌಲ್ಯದ ನಿಷೇಧಿತ ಗಾಂಜಾ,  ಕಾರು, ಸ್ಮಾಲ್ ಡಿಜಿಟಲ್ ತೂಕ ಯಂತ್ರ ಸೇರಿ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ NDPS ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದವನಿಗಾಗಿ ಶೋಧ ನಡೆಸಲಾಗಿದೆ. ಪಿಎಸ್ಐ ತಿಮ್ಮಪ್ಪ ಎಸ್ ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ : ಬಂಗಾರದ ದರ ಪಾತಾಳಕ್ಕೆ ಇಳಿಯುವ ಸಾಧ್ಯತೆ.

ಮೀನು ಹಿಡಿಯಲು ತೆರಳಿದ್ದ ಓರ್ವನ ಮೃದೇಹ ಪತ್ತೆ. ಇನ್ನೋರ್ವನಿಗಾಗಿ ಮುಂದುವರಿದ ಶೋಧ.