ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಉತ್ತರಪ್ರದೇಶ (Uttarapradesh) : ಯುವಕನೋರ್ವನನ್ನ ಮೂವರು ಸಹೋದರಿಯರು ವಿವಾಹವಾಗಿದ್ದಾಗಿ ಹೇಳುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ(Social Media) ಭಾರೀ ವೈರಲ್(Viral) ಆಗುತ್ತಿದೆ. ಇದು ನಿಜವೇ ಅಥವಾ ಕೇವಲ ವೈರಲ್ ಆಗಲು ರೂಪಿಸಿದ ದೃಶ್ಯವೇ ಎಂಬುದು ಚರ್ಚೆ ಕಾರಣವಾಗಿದೆ.

ವೈರಲ್ ಆಗಿರುವ ರೀಲ್ಸ್ ನಂತೆ(Reels) ಕಾಣುತ್ತಿರುವ ವಿಡಿಯೊಗಳಲ್ಲಿ ಕಾಣಿಸಿಕೊಂಡಿರುವ ಮಹಿಳೆಯರು(Womens) ಉತ್ತರಪ್ರದೇಶದ(Uttarparadesh) ಅಮ್ರೋಹಾ ಜಿಲ್ಲೆಯ ಧೋರಿಯಾ ಗ್ರಾಮದ ನಿವಾಸಿಗಳಾದ ಸರೋಜ್, ಸಾವಿತ್ರಿ ಮತ್ತು ಸಂತೋಷ್ ಎಂದು ಗುರುತಿಸಲಾಗಿದೆ. ಇವರು ಹಸನ್ಪುರ(Hasanpura) ವಿಧಾನಸಭಾ ಕ್ಷೇತ್ರದ ರೈತನೋರ್ವನ ಪುತ್ರಿಯರು.

ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಕಂಟೆಂಟ್(Social Media Content) ಸೃಷ್ಟಿಸಲು ಶುರು ಮಾಡಿದ್ದ ಈ ಮೂವರು ಸಹೋದರಿಯರು, ಕೆಲವೇ ಡಜನ್ ವಿಡಿಯೊಗಳನ್ನು ಅಪ್ಲೋಡ್ ಮಾಡಿದ್ದರು. ಅವರ ಇನ್ಸ್ಟಾಗ್ರಾಂ(Instagram) ಮತ್ತು ಫೇಸ್ಬುಕ್ನಲ್ಲಿ(Facebook) ಲಕ್ಷಾಂತರ ಫಾಲೋವರ್ಸ್(Followers) ಹೊಂದುವಷ್ಟು ಜನಪ್ರಿಯತೆ ಗಳಿಸಿದ್ದರು. ವರದಿಗಳ ಅಂದಾಜಿನಂತೆ ಅವರಲ್ಲಿ ಇಬ್ಬರು ಸಹೋದರಿಯರು ಮತ್ತು ಮೂರನೆಯವರು ಅವರ ಸೋದರ ಸಂಬಂಧಿ.  ಆದರೂ ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್ ಗಳು ಮೂವರನ್ನೂ ಸಹೋದರಿಯರು ಎಂದು ಹೇಳುತ್ತಿವೆ.

ಮೂವರು ಸಹೋದರಿಯರು ಒಬ್ಬನೇ ವರನೊಂದಿಗೆ ಸಾಂಪ್ರದಾಯಿಕ ಹಿಂದೂ ಪದ್ದತಿಯ ವಿವಾಹದ(Hindu System Marriage) ವಿಧಿವಿಧಾನಗಳಲ್ಲಿ ಪಾಲ್ಗೊಂಡಂತೆ ದೃಶ್ಯಗಳು ಕಂಡುಬಂದಿವೆ. ಈ ವಿಡಿಯೊಗಳಲ್ಲಿ ವರನು ಪ್ರತಿಯೊಬ್ಬ ವಧುವಿನ ಹಣೆಗೆ ಸಿಂಧೂರ ಹಚ್ಚುವುದು, ಮೂವರು ವಧುಗಳೊಂದಿಗೆ ಸಪ್ತಪದಿ ತುಳಿಯುವುದು ಹಾಗೂ ಹಿರಿಯರ ಪಾದಸ್ಪರ್ಶ ಮಾಡಿ ಆಶೀರ್ವಾದ ಪಡೆಯುತ್ತಿದ್ದಾರೆ.

ಮೊದಮೊದಲು ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಈ ವಿಡಿಯೊಗಳನ್ನು ಕೇವಲ ಸ್ಕ್ರಿಪ್ಟ್ ಮಾಡಲಾದ ರೀಲ್ಸ್ ಅಥವಾ ವೈರಲ್(Reels or Viral) ಆಗುವ ಉದ್ದೇಶದಿಂದ ಸೃಷ್ಟಿಸಿದ ವಿಷಯ ಎಂದು ಯಾರು ನಂಬಿರಲಿಲ್ಲ. ಈ ಬಗ್ಗೆ ಮೂವರು ಸಹೋದರಿಯರೇ ಮತ್ತಷ್ಟು ವಿಡಿಯೊಗಳನ್ನು ಹಂಚಿಕೊಂಡು, ಈ ವಿವಾಹ ನಿಜವಾಗಿಯೇ ನಡೆದಿದೆ ಎಂದು ಹೇಳಿಕೊಂಡಿರುವುದರಿಂದ ಇದರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.