ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಕಳೆದ ಎಂಟು ವರ್ಷಗಳಿಂದ ನಿಂತು‌ ಹೋಗಿದ್ದ  ಜಿಲ್ಲೆಯ ಅತೀ ದೊಡ್ಡ ಕರಾವಳಿ ಉತ್ಸವ ಕಾರವಾರದಲ್ಲಿ ಡಿಸೆಂಬರ್ 22 ರಿಂದ 28 ರ ವರೆಗೆ ನಡೆಯಲಿದೆ.

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಅವರು ಶುಕ್ರವಾರ ಗೋಕರ್ಣದಲ್ಲಿ ಕರಾವಳಿ ಉತ್ಸವ-2025 ರ ಲೋಗೋ, ಕಾರ್ಯಕ್ರಮದ ಪ್ರೋಮೋ ವಿಡಿಯೋ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರಾವಳಿ ಉತ್ಸವವನ್ನು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ವಿವಿಧ ಸಚಿವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಾಗೂ ‌ಅಂತರಾಷ್ಟ್ರೀಯ ಮಟ್ಟದ ಕಲಾವಿದರು ಭಾಗವಿಸಲಿದ್ದಾರೆ. ರಾಜ್ಯ ಹಾಗೂ ಹೊರ ರಾಜ್ಯದ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದಿದ್ದಾರೆ‌.

ಕಾರ್ಯಕ್ರಮಕ್ಕಾಗಿ ಸರ್ಕಾರದಿಂದ ರೂ.5 ಕೋಟಿ ಬಿಡುಗಡೆಯಾಗಿದೆ. ಒಟ್ಟು  10 ಕೋಟಿ ರೂ. ಅಂದಾಜಿಸಲಾಗಿದೆ. ಆಡಳಿತ ಸುಧಾರಣ ಆಯೋಗದ ಅಧ್ಯಕ್ಷರು ಹಾಗೂ ಶಾಸಕ ಆರ್.ವಿ ದೇಶಪಾಂಡೆ ಅವರು ಕರಾವಳಿ ಉತ್ಸವ ಕಾರ್ಯಕ್ರಮವನ್ನು ಈ ಹಿಂದೆ ಮಾಡಿರುವದರಿಂದ ಅದನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಕಳೆದೊಂದು  ತಿಂಗಳಿಂದ ಪೂರ್ವ ಸಿದ್ದತೆ ಮಾಡಿಕೊಂಡಿದ್ದು  , ಸಚಿವರು, ಜಿಲ್ಲೆಯ ಎಲ್ಲಾ ಶಾಸಕರು, ಸಂಸದರ ಸಹಕಾರದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮ ಯಶಸ್ವಿಗೊಳಿಸಲು  ಎಲ್ಲಾ ವ್ಯವಸ್ಥೆ ‌ಮಾಡಲಾಗಿದೆ  ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ಪಿ ನಾಯ್ಕ, ತಹಶೀಲ್ದಾರ ಕೃಷ್ಣ ಕಾಮಕರ್ ಮತ್ತಿತರರು ಇದ್ದರು
ಇದನ್ನು ಓದಿ : ವರ್ಷದ ಮೊದಲ ಕಡಲಾಮೆ ಗೂಡು ಪತ್ತೆ. ಅರಣ್ಯ ಇಲಾಖೆಯಿಂದ ಮೀನುಗಾರನಿಗೆ ಬಹುಮಾನ.

ದೇವಿಯ ಮುಂದೆ ತಲೆ ಬಾಗಿದ ಕನಕಪುರ ಬಂಡೆ. ಇನ್ನೊಂದು ತಿಂಗಳಲ್ಲಿ ಬಾರೀ ಕುತೂಹಲ.