ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಮಂಗಳೂರು(Mangalore) : ಬಂಟ್ವಾಳ ಗ್ರಾಮಾಂತರ(Bantwal Rural) ಪೋಲೀಸ್ ಠಾಣೆಯ ಪಿಎಸ್ಐ(PSI) ತಮ್ಮ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಉತ್ತರಕನ್ನಡ ಜಿಲ್ಲೆ ಹಳಿಯಾಳ ಮೂಲದ(Haliyal Native) ಕೀರಪ್ಪ ಘಟಕಾಂಬಳೆ(54) ಆತ್ಮಹತ್ಯೆ ಮಾಡಿಕೊಂಡ ಪಿಎಸ್ಐ. ಶಿರಸಿ(Sirsi) ಠಾಣೆಯಿಂದ ಐದು ತಿಂಗಳ ಹಿಂದೆ ಇವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಬಂದಿದ್ದರು. ತನಿಖಾ ವಿಭಾಗದ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಕುಟುಂಬದವರು ಉತ್ತರಕನ್ನಡದಲ್ಲೇ ಇದ್ದರು. ಇವರು ಒಬ್ಬರೇ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಭಾನುವಾರ ಬೆಳಗ್ಗೆಯಿಂದ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಕರೆ ಮಾಡಿದರೆ ಕರೆಯನ್ನೂ ಸ್ವೀಕರಿಸುತ್ತಿರಲಿಲ್ಲ. ಸಂಶಯಗೊಂಡ ಪೊಲೀಸರು ಸಂಜೆ ವೇಳೆ ಅವರು ವಾಸಿಸುವ ಬಾಡಿಗೆ ಮನೆಗೆ ಹೋಗಿ ನೋಡಿದಾಗ ಬಾಗಿಲು ಹಾಕಿತ್ತು. ಕರೆದಾಗ ಯಾವುದೇ ಸ್ಪಂದನೆ ನೀಡದೆ ಇದ್ದಾಗ ಕಿಟಕಿಯಲ್ಲಿ ನೋಡಿದಾಗ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.
ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ : ಕಾರವಾರದಲ್ಲಿ ದೊಪ್ಪನೆ ಬಿದ್ದ ಮರ. ಕಾರು ಜಖಂ. ಮಹಿಳೆ ಬಲಿ.
ಸೆಕ್ಯೂರಿಟಿ ಸಮಯಪ್ರಜ್ಞೆಯಿಂದ ಅರೆಶಿರೂರಿನಲ್ಲಿ ತಪ್ಪಿದ ಬಾರೀ ಕಳ್ಳತನ ಯತ್ನ.