ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ನವದೆಹಲಿ (Newdelhi) : ರಾಷ್ಟ್ರಪತಿ ಭವನ ಮದುವೆಯ ಸಮಾರಂಭವೊಂದಕ್ಕೆ ಸಾಕ್ಷಿಯಾಗುತ್ತಿದೆ. ದೇಶದ ಇತಿಹಾಸದಲ್ಲಿ (Country History) ಇದು ಮೊದಲು.
ರಾಷ್ಟ್ರಪತಿ ಭವನದ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿರುವ (PSO) ಸಿಆರ್ಪಿಎಪ್ (CRPF ) ಅಸಿಸ್ಟಂಟ್ ಕಮಾಂಡೆಂಟ್ ಪೂನಂ ಗುಪ್ತಾ ವಿವಾಹವಾಗುತ್ತಿದ್ದಾರೆ.
ರಾಷ್ಟ್ರಪತಿ ದೌಪದಿ ಮುರ್ಮು(Droupadi Murmu) ಅವರು CRPF ಅಸಿಸ್ಟಂಟ್ ಕಮಾಂಡೆಂಟ್ ಪೂನಂ ಗುಪ್ತಾ ಅವರು ರಾಷ್ಟ್ರಪತಿ ಭವನದಲ್ಲಿ (Rastrapati Bhavan) ಮದುವೆಯಾಗಲು ವಿಶೇಷ ಅನುಮತಿ(Special Permission) ನೀಡಿದ್ದಾರೆ. ಇದೇ ಫೆಬ್ರವರಿ 12ರಂದು ಇಲ್ಲಿನ ಮದರ್ ಥೆರೆಸಾ ಕ್ರೌನ್ ಕಾಂಪ್ಲೆಕ್ಸ್ನಲ್ಲಿ (Mother Teresa Crown Complex) ಪೂನಂ ಗುಪ್ತಾ ಅವರ ಮದುವೆ ಫಿಕ್ಸ್ ಆಗಿದೆ.
CRPF ಅಸಿಸ್ಟಂಟ್ ಕಮಾಂಡೆಂಟ್ ಪೂನಂ ಗುಪ್ತಾ ಅವರು ಜಮ್ಮು-ಕಾಶ್ಮೀರದಲ್ಲಿ CRPF ಅಸಿಸ್ಟೆಂಟ್ ಕಮಾಂಡೆಂಟ್ ಅವನೀಶ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಪೂನಂ ಗುಪ್ತಾ, ಅವನೀಶ್ ಮದುವೆಗೆ ಸಂಬಂಧಿಕರು ಕೆಲ ಸ್ನೇಹಿತರಷ್ಟೆ ಪಾಲ್ಗೊಳ್ಳಲಿದ್ದಾರೆ.
74ನೇ ಗಣರಾಜ್ಯೋತ್ಸವ (Republic Day) ಪರೇಡ್ನಲ್ಲಿ ಪೂನಂ ಗುಪ್ತಾ ಅವರು ಸಂಪೂರ್ಣ ಮಹಿಳಾ ತುಕಡಿಯನ್ನು ನಿರ್ವಹಿಸಿದ್ದರು. ಸದ್ಯ ರಾಷ್ಟ್ರಪತಿ ಭವನದಲ್ಲಿ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿ (PSO) ಸೇವೆ ಸಲ್ಲಿಸುತ್ತಿದ್ದಾರೆ.
ಪೂನಂ ಗಣಿತಶಾಸ್ತ್ರ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ(Post Graduate), ಗ್ವಾಲಿಯರನ ಜಿವಾಜಿ ವಿಶ್ವವಿದ್ಯಾಲಯದಿಂದ BEd ಪದವಿ ಪಡೆದುಕೊಂಡಿದ್ದಾರೆ. 2018ರ ಯುಪಿಎಸ್ಸಿ(UPSC) ಸಿಆರ್ಪಿಎಫ್ ಪರೀಕ್ಷೆಯಲ್ಲಿ 81ನೇ Rank ಪಡೆದಿದ್ದಾರೆ. ಬಿಹಾರದ ನಕ್ಸಲ್ ಪೀಡಿತ(Bihar Nakshal Area) ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದ ಪೂನಂ ಆ ಬಳಿಕ ಕಠಿಣ ಪ್ರದೇಶಗಳಲ್ಲೂ ತಮ್ಮ ಕರ್ತವ್ಯ ನಿಷ್ಠೆ ಮೆರೆದು ಸೈ ಎನಿಸಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲೂ(Social Media) ತಮ್ಮದೇ ಅಭಿಮಾನಿ ಬಳಗ ಹೊಂದಿರುವ ಪೂನಂ, ಆಗಾಗ್ಗೆ ಮಹಿಳಾ ಸಬಲೀಕರಣ ಹಾಗೂ ಸ್ಫೂರ್ತಿದಾಯಕ ಸಂದೇಶಗಳನ್ನು ಬಿತ್ತರಿಸುತ್ತಾರೆ.
ಇದನ್ನು ಓದಿ : ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ. ಆತಂಕದ ವಾತಾವರಣ.
ಧರೆಗೆ ಢಿಕ್ಕಿ ಹೊಡೆದ ಮಿನಿ ಬಸ್. 9 ಜನರಿಗೆ ಗಾಯ