ಬೆಂಗಳೂರು(Bangalore) : ಕನ್ನಡದ ಪ್ರಸಿದ್ಧ ನಟ, ಸಿನೆಮಾ ನಿರ್ದೇಶಕ ಗುರುಪ್ರಸಾದ್(Actor, Director Guruprasad) ಅವರು ಬೆಂಗಳೂರಿನ ಅಪಾರ್ಟ್ ಮೆಂಟ್ ವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ (Sucide) ಶರಣಾಗಿದ್ದಾರೆ.

ಮಾದನಾಯಕನಹಳ್ಳಿಯ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಠ ಸಿನಿಮಾ ಮೂಲಕ ಪಾಪ್ಯುಲರ್ ಆಗಿದ್ದ ಗುರುಪ್ರಸಾದ್ ಅವರು ನಟರೂ ಹೌದು. ಕಳೆದ ಎಂಟು ತಿಂಗಳಿಂದ ಅವರು ಅಪಾರ್ಟ್ ಮೆಂಟ್ ನಲ್ಲಿ  ವಾಸವಾಗಿದ್ದರು.

1972ರಲ್ಲಿ ರಾಮನಗರ ಜಿಲ್ಲೆ (Ramanagar District) ಕನಕಪುರದಲ್ಲಿ (Kanakapura) ಜನಿಸಿದ್ದ ಗುರುಪ್ರಸಾದ್ ಅವರು ಹಲವು ಸಿನೆಮಾಗಳನ್ನ ನಿರ್ದೇಶಿಸಿದ್ದರು. ಮಠ(Matha), ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್, ರಂಗನಾಯಕ ಸೇರಿದಂತೆ ಹಲವು ಸಿನಿಮಾಗಳಿಗೆ (Cinema) ಅವರು ನಿರ್ದೇಶನ ಮಾಡಿದ್ದರು.
ಅವರು ಯಾಕೆ ಆತ್ಮಹತ್ಯೆ ಮಾಡಿಕೊಂಡರೂ ಗೊತ್ತಾಗಿಲ್ಲ.   ಕೌಟುಂಬಿಕ ಕಲಹ ಹಾಗೂ ಆರ್ಥಿಕ ಬಿಕ್ಕಟ್ಟಿನಿಂದ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅಂದಾಜಿಸಲಾಗಿದೆ. ಡೆತ್ ನೋಟ್ ಬರೆದಿಟ್ಟಿದ್ದು, ಏನೆಲ್ಲಾ ಅಂಶಗಳಿವೆ ಎಂಬುದು ಕುತೂಹಲ ಗರಿಗೆದರುವಂತೆ ಮಾಡಿದೆ.
ಗುರುಪ್ರಸಾದ್ ಅವರು ನೇಣಿಗೆ ಶರಣಾಗಿದ್ದು ಯಾರಿಗೂ ಗೊತ್ತಿರಲಿಲ್ಲ. ಅಪಾರ್ಟ್ ಮೆಂಟ್ ನಲ್ಲಿ ವಾಸನೆ ಬಂದ ಬಳಿಕ ಬಾಗಿಲು ತೆರೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಡೆತ್ ನೋಟ್ ವಶಪಡಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಅವರದ್ದು ಆತ್ಮಹತ್ಯೆಯೋ ಇಲ್ಲವೋ ಎಂಬುದು ತಿಳಿಯಲಿದೆ.

ಇದನ್ನು ಓದಿ : ಕೆಂಡ ಹಾಯ್ದು ಭಕ್ತಿ ಸಮರ್ಪಿಸಿದ ಶಾಸಕ

ಮೀನು ಹಿಡಿಯಲು ತೆರಳಿದ್ದ ವ್ಯಕ್ತಿ ಸಾವು

ಮೊಬೈಲ್ ಹಿಡಿದು ಅಡುಗೆ ಮಾಡುವವರೇ ಹುಷಾರ್

ವಕ್ಫ ಗಲಾಟೆ ಉಲ್ಬಣ ಸಾಧ್ಯತೆ, ಸಿಎಂ ಅಲರ್ಟ್