ಬೆಂಗಳೂರು(BANGLORE): ಜಗತ್ ಪ್ರಸಿದ್ದ ಧಾರ್ಮಿಕ ಸ್ಥಳ ತಿರುಪತಿ ಶ್ರೀ ವೆಂಕಟೇಶ್ವರ ದೇವಸ್ಥಾನದ (TIRUPATI SHRI VENKATESHWAR TEMPLE)ಪವಿತ್ರ ಲಡ್ಡು ಪ್ರಸಾದದಲ್ಲಿ(LADDU PRASADAM) ಸೇರಿಸಲಾಗುವ ತುಪ್ಪದಲ್ಲಿ ದನ ಹಾಗೂ ಹಂದಿ ಮಾಂಸದ ಕೊಬ್ಬು ಮೀನಿನ ಎಣ್ಣೆ ಸೇರಿದಂತೆ ಇತರ ತೈಲಗಳನ್ನು ಸೇರಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ.

ಸ್ವತಃ ಆಂಧ್ರ ಪ್ರದೇಶ(ANDRAPRADESHA) ಸಿಎಂ ಎನ್ ಚಂದ್ರಬಾಬು ನಾಯ್ಡು ಈ ವಿಷಯ ತಿಳಿಸಿದ್ದಾರೆ. ಇತ್ತೀಚಿಗೆ ಲಡ್ಡುವಿನ ಮಾದರಿಯನ್ನ ಲ್ಯಾಬ್ ನಲ್ಲಿ ಪರೀಕ್ಷಿಸಿದಾಗ ಈ ವಿಷಯ ಗೊತ್ತಾಗಿದೆ. ಅಲ್ಲದೆ ಪಾಮ್ ಆಯಿಲ್, ಸೂರ್ಯಕಾಂತಿ ಮತ್ತು ಸೋಯಾಬೀನ್ ಮುಂತಾದ ಅಂಶಗಳು ಇರುವುದು ಪರೀಕ್ಷೆಯಿಂದ ತಿಳಿದುಬಂದಿದೆ.

ಆಂಧ್ರ ಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ (REDDY)ನೇತೃತ್ವದ ವೈಎಸ್‌ಆರ್‌ಸಿಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತಿರುಪತಿ ದೇವಸ್ಥಾನದ ‘ಶ್ರೀವಾರಿ ಲಡ್ಡು’ ಪ್ರಸಾದದಲ್ಲಿ ನಂದಿನಿ ತುಪ್ಪ ಬಳಕೆಯನ್ನು ನಿಲ್ಲಿಸಿತ್ತು. ಇದರಿಂದ ಲಡ್ಡುವಿನ ರುಚಿ ಮುಂಚಿನಂತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು.

ತಿರುಪತಿ ಕೋಟ್ಯಾಂತರ ಭಕ್ತರ ಶ್ರದ್ಧೆಯ ಧಾರ್ಮಿಕ ಸ್ಥಳ. ಜಗತ್ತಿನ ಭಕ್ತರಿಗೆ ಸಾವಿರಾರು ವರ್ಷಗಳಿಂದ ಬಾಲಾಜಿ ಜೊತೆ ಅವಿನಾಭಾವ ಸಂಬಂಧವಿದೆ. ವಾರಕ್ಕೊಮ್ಮೆ ಬಾಲಾಜಿ ದರ್ಶನಕ್ಕೆ ಹೋಗುವವರು ಇದ್ದಾರೆ. ಅಷ್ಟೇ ಅಲ್ಲದೆ ತಿರುಪತಿ ಲಡ್ಡು ಪ್ರಸಾದಕ್ಕೆ ಇರುವ ಭಾವನೆಯೇ ಬೇರೆ. ಅದು ಕೋಟ್ಯಾಂತರ ಭಕ್ತರಿಗೆ ಕೇವಲ ಸಿಹಿ ಅಲ್ಲ ಭಕ್ತಿಯ ಪ್ರಸಾದವಾಗಿದೆ.

ಈ ಬಗ್ಗೆ ಮಾತನಾಡಿದ ಮಾಜಿ ಸಚಿವ ಸಿ ಟಿ ರವಿ(C T RAVI) ಮಾತನಾಡಿ, ಪ್ರಸಾದ ತಯಾರಿಸುವಾಗ ಧಾರ್ಮಿಕ ಸ್ಯಾಂಟಿಟಿ ಕಾಪಾಡಿಕೊಳ್ಳಬೇಕು. ಕರ್ನಾಟಕದಿಂದಲೇ ನಂದಿನಿ ತುಪ್ಪ ಅಲ್ಲಿಗೆ ಸರಬರಾಜಾಗುತಿತ್ತು. ಆದರೆ ಇದೀಗ ಪ್ರಸಾದಕ್ಕೆ ಪ್ರಾಣಿಯ ಕೊಬ್ಬು ಬಳಕೆ ಮಾಡಲಾಗುತ್ತಿದೆ ಎಂಬ ಮಾತು ಆಶ್ಚರ್ಯ ಮತ್ತು ಆಘಾತ ಎರಡನ್ನೂ ಉಂಟುಮಾಡಿದೆ. ಧಾರ್ಮಿಕ ಶ್ರದ್ಧಾ ಕೇಂದ್ರದಲ್ಲಿ ಈ ರೀತಿ ಮಾಡುವ ಯೋಚನೆಯಾದರೂ ಯಾರಿಗೆ ಬರುತ್ತೆ? ಯಾರಿಗೆ ಗುತ್ತಿಗೆ ನೀಡಿದ್ದರು? ಎಲ್ಲವನ್ನು ಗಂಭೀರವಾಗಿ ತನಿಖೆ ನಡೆಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನು ಓದಿ : ಇಂದಿನಿಂದ ಗಂಗಾವಳಿ ನದಿಯಲ್ಲಿ ಕೊನೆಯ ಪ್ರಯತ್ನ

ಕಾರವಾರದಲ್ಲಿ ಹಾಳಾದ ಹಾಲು ಮಾರಾಟ

ದಾಂಡೇಲಿಯಲ್ಲಿ ಸರಣಿ ಕಳ್ಳತನ