ಅಂಕೋಲಾ : ಶಿರೂರು ದುರ್ಘಟನೆ ವಿಚಾರದಲ್ಲಿ ರಾಜ್ಯ ಸರ್ಕಾರ ಏನು ಕೆಲಸ ಮಾಡಿಲ್ಲ ಎಂದು ಆಪಾದನೆ ಮಾಡಿರುವುದಕ್ಕೆ ಶಾಸಕ ಸೈಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಳಸೆ ಗ್ರಾಮದಲ್ಲಿ ಮಾತನಾಡಿದ ಅವರು, ನಾವೇನೂ ಕೆಲಸ ಮಾಡಿಲ್ಲ ಎಂದು ರಾಜ್ಯಸಭಾ ಸದನದಲ್ಲಿ ಆರೋಪ ಮಾಡಲಾಗಿದೆ. ನನ್ನ ಚುನಾವಣೆಗೂ ಇಷ್ಟು ಕೆಲಸ ಮಾಡಿಲ್ಲ, ಅಷ್ಟು ಇಲ್ಲಿ ಮಾಡಿದ್ದೇನೆ. ಕೇಂದ್ರ ಸಚಿವ ಕುಮಾರಸ್ವಾಮಿ ಬಂದ ಮೇಲೆಯೇ ಕೆಲಸ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇಲ್ಲಿ ಪರಿಸ್ಥಿತಿ ಹೇಗಿತ್ತು ಎನ್ನುವದನ್ನು ಕುಮಾರಸ್ವಾಮಿ ಅವರೇ ನೋಡಿದ್ದಾರೆ. ಅವರು ಬರುವ ಮೊದಲೇ ಕೆಲಸ ಆರಂಭಿಸಲಾಗಿತ್ತು.

ಕಳೆದ 10 ದಿನದಿಂದ ಇಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಪೊಲೀಸರು, ಅಗ್ನಿಶಾಮಕ ದಳ, ಎಸ್ಡಿಆರ್ ಎಪ್, ಎನ್ ಡಿ ಆರ್ ಎಪ್, ಆರ್ಮಿ, ನೇವಿ ಎಲ್ಲರೂ ಕೆಲಸ ಮಾಡ್ತಿದ್ದಾರೆ. ನಾನು ಕೂಡ ಕ್ಷೇತ್ರ ಬಿಡದೇ ಇಲ್ಲಿಯೇ ಇದ್ದೇನೆ.  ಆದರೆ ಸತ್ಯ ವಿಚಾರವನ್ನು ಮಾಧ್ಯಮವೇ ಮಾಡಬೇಕಾಗಿದೆ. ಶಿರೂರು ದುರ್ಘಟನೆ ವಿಚಾರದಲ್ಲಿ ರಾಜಕೀಯ ಮಾಡಲಾಗ್ತಿದೆ. ಒಂದು ವೇಳೆ ನಾನು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಸಾಬೀತಾದರೆ ರಾಜೀನಾಮೆ ನೀಡಲೂ ಸಿದ್ದನಿದ್ದೇನೆ ಎಂದು ಸತೀಶ್ ಸೈಲ್ ಸವಾಲು ಹಾಕಿದ್ದಾರೆ.

ಹೌದು ಶಾಸಕ ಸತೀಶ್ ಸೈಲ್ ತಮ್ಮದೇ ಖರ್ಚಿನಲ್ಲಿ ಎರಡು ಅತ್ಯಾಧುನಿಕ ಬೂಮರ್ ಯಂತ್ರ ತರಿಸಿ ಕಾರ್ಯಾಚರಣೆ ಚುರುಕುಗೊಳ್ಳುವಂತೆ ಮಾಡಿದ್ದಾರೆ. ಇದು ಹಲವು ಟಿವಿ ಮಾಧ್ಯಮಗಳಲ್ಲಿ ಬಂದಿದೆ. ತಮ್ಮ ಕೈಯಿಂದ ಏನೆಲ್ಲಾ ಸಾಧ್ಯವಿದೆಯೋ ಅಷ್ಟು ವ್ಯಯಿಸಿ ಕಾರ್ಯಾಚರಣೆಗೆ ಸಹಕರಿಸುತ್ತಿದ್ದಾರೆ. ಆದರೆ ಅವರ ಜನಪರ ಕಾರ್ಯಕ್ಕೆ ಅಡ್ಡಿಪಡಿಸುತ್ತಿರುವವರು ರಾಜಕೀಯ ಮಾಡುತ್ತಿರುವುದು ಸತ್ಯವೆನಿಸುತ್ತಿದೆ.