ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಬೀದರ್ (Bidar): ಹಾಡಹಗಲಲ್ಲೆ ಸಿನಿಮೀಯ ಶೈಲಿಯಲ್ಲಿ ಶೂಟೌಟ್‌(Shootout), ದರೋಡೆ ಘಟನೆ ನಗರದ ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ನ್ಯಾಯಾಲಯ ಮಧ್ಯೆ ಹೊಂದಿಕೊಂಡಿರುವ ಎಸ್ ಬಿಐ ಬ್ಯಾಂಕ್(SBI BANK) ಎದುರು ನಡೆದಿದೆ.

ಬ್ಯಾಂಕ್ ನಿಂದ ಎಟಿಎಂಗಳಿಗೆ(ATM) ಹಣ ಸಾಗಿಸುವ ಸಂಸ್ಥೆಯ ವ್ಯಾನ್ ನಲ್ಲಿ ನಿಯೋಜಿತರಾದ  ಒಬ್ಬರು ಸಿಬ್ಬಂದಿ ಗುಂಡಿನ ದಾಳಿಗೆ ಬಲಿಯಾಗಿದ್ದು, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಸುಮಾರು 93 ಲಕ್ಷ ರೂ. ನಗದು ಹಣದ ಡಬ್ಬಾ ದೋಚಲಾಗಿದೆ.

ಈ ಘಟನೆ ಗಡಿ ಜಿಲ್ಲೆ ಬೀದರ್ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಸಿಎಂಎಸ್‌(CMS) ಸಂಸ್ಥೆಗೆ ಸೇರಿರುವ ವ್ಯಾನ್ ಗೆ ಎಸ್‌ ಬಿಐನಿಂದ ಹಣದ ಡಬ್ಬಾ ತುಂಬಲಾಗಿತ್ತು. ಎಟಿಎಂಗಳಿಗೆ ಹಣ ಹಾಕಲು  ಒಯ್ಯಲಾಗಿತ್ತು. ಈ ವೇಳೆ ಬೈಕ್‌ ಮೇಲೆ ಬಂದ ಇಬ್ಬರು ಆಗಂತುಕರು ವ್ಯಾನ್‌ ಸಿಬ್ಬಂದಿ ಮೇಲೆ ಏಳು ಸುತ್ತು ಹಾರಿಸಿದ್ದಾರೆ. ದಾಳಿಯಲ್ಲಿ ವೆಂಕಟೇಶ ಗಿರಿ ಚಿದ್ರಿ (42) ಸ್ಥಳದಲ್ಲೇ ಮೃತರಾದರೆ ಶಿವಕುಮಾರ ಗುನ್ನಳ್ಳಿ( 27) ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಲಕ ರಾಜಶೇಖರ ಬ್ಯಾಂಕ್‌ ಒಳಗಿದ್ದ ಕಾರಣ ಅದೃಷ್ಟವಶಾತ್ ಪಾರಾಗಿದ್ದಾರೆ.

ಗಂಭೀರ ಗಾಯಗೊಂಡ ವ್ಯಕ್ತಿಗೆ  ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್(Hyadrabad) ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ಘಟನೆ ಬಳಿಕ ಎಚ್ಚೆತ್ತ ಪೊಲೀಸರು  ಕ್ಷಿಪ್ರ ತನಿಖೆ ಆರಂಭಿಸಿದ್ದಾರೆ. ವಿಶೇಷ ತಂಡಗಳು ರಚಿಸಲಾಗಿದೆ. ನಗರದಲ್ಲೆಡೆ ಸೇರಿ ವಿವಿಧೆಡೆ ಸಿಸಿಟಿವಿ(CCTV) ಪರಿಶೀಲನೆ ಮಾಡುವ ಜೊತೆಗೆ ಆಗಂತುಕರ ಶೋಧಕ್ಕೆ ಜಾಲ ಬೀಸಿದ್ದಾರೆ.

ಇದನ್ನು ಓದಿ : ನಟ ಸೈಪ್ ಅಲಿ ಖಾನ್ ಮೇಲೆ ಆಟ್ಯಾಕ್. ಕಳ್ಳತನಕ್ಕೆ ಬಂದವರ ಜೊತೆ ಹೋರಾಡಿದ ನಟ.

ವೈಭವದೊಂದಿಗೆ ಸಂಪನ್ನಗೊಂಡ ಮಾರಿಜಾತ್ರಾ ಮಹೋತ್ಸವ. ಲಕ್ಷಕ್ಕೂ ಅಧಿಕ ಸಂಖ್ಯೆಯ ಭಕ್ತರಿಂದ ದೇವಿಯ ದರ್ಶನ.