ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ಮೇಲೆ ಮಾರಣಾಂತಿಕ ದಾಳಿ ನಡೆದ ಘಟನೆ ಮಧ್ಯರಾತ್ರಿ 2.30 ರ ಸುಮಾರಿಗೆ ನಡೆದಿದೆ.
ಮಹಾರಾಷ್ಟ್ರದ ಬಾಂದ್ರಾದಲ್ಲಿರೋ ನಿವಾಸಕ್ಕೆ ನುಗ್ಗಿದ ಅಪರಿಚಿತ ದರೋಡೆಕೋರರ ತಂಡ ನಟ ಕಳ್ಳತನಕ್ಕೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ದರೋಡೆಕೋರರನ್ನ ಸೈಫ್ ಅಲಿ ಖಾನ್ ತಡೆಯುವ ಪ್ರಯತ್ನಿಸಿದ್ದಾರೆ. ಆಗ ಅವರ ಮೇಲೆ ದಾಳಿ ನಡೆದಿದೆ. ಐದಾರು ಬಾರಿ ನಟನ ಮೇಲೆ ಚಾಕುವಿನಿಂದ ಚುಚ್ಚಿದ್ದಾರೆ. ಎಂಬುದು ಗೊತ್ತಾಗಿದೆ.
ಸೈಪ್ ಅಲಿ ಖಾನ್ ಅವರ ಮನೆ ಮುಂಬಯಿಯ ಬಾಂದ್ರದಲ್ಲಿದ್ದು ಪತ್ನಿ ಕರೀನಾ ಕಪೂರ್ ಮತ್ತು ಮಕ್ಕಳು ಮನೆಯಲ್ಲಿದ್ದರು. ಈ ಸಂದರ್ಭದಲ್ಲಿ ಅವರು ಎಚ್ಚರಗೊಂಡಿದ್ದರೆನ್ನಲಾಗಿದೆ.
ಚಾಕು ಇರಿತಕ್ಕೆ ಒಳಗಾದ ಸೈಫ್ ಅಲಿ ಖಾನ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿಷಯ ತಿಳಿದ ಕೂಡಲೇ ನಟನ ನಿವಾಸಕ್ಕೆ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ತನಿಖೆ ನಡೆಸಿದ್ದಾರೆ.
ಇದನ್ನು ಓದಿ : ವೈಭವದೊಂದಿಗೆ ಸಂಪನ್ನಗೊಂಡ ಮಾರಿಜಾತ್ರಾ ಮಹೋತ್ಸವ. ಲಕ್ಷಕ್ಕೂ ಅಧಿಕ ಸಂಖ್ಯೆಯ ಭಕ್ತರಿಂದ ದೇವಿಯ ದರ್ಶನ.