ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಕಳೆದ ಎರಡು ದಶಕಗಳಿಂದ ಶಿರಸಿ-ಸಿದ್ದಾಪುರ(Sirsi-Siddapur) ಕ್ಷೇತ್ರಕ್ಕೆ ಒಳಪಡುವ ದಲಿತ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೇ ನಾಗರಿಕರು ತೊಂದರೆ ಎದುರಿಸುತ್ತಿದ್ದಾರೆ. ಹೀಗಾಗಿ ಹೀಗಾಗಿ ಶಿರಸಿ-ಸಿದ್ದಾಪುರ ಕ್ಷೇತ್ರವನ್ನ ಈ ಹಿಂದೆ ಇರುವ ಹಾಗೆ ಮೀಸಲು ಕ್ಷೇತ್ರವನ್ನಾಗಿ ಮಾಡಬೇಕೆಂದು ಉತ್ತರಕನ್ನಡ ಭೀಮ ಘರ್ಜನೆ (Bheema Gharjane) ಸಂಘಟನೆ ಆಗ್ರಹಿಸಿದೆ.
ಜಿಲ್ಲಾ ಘಟಕದ ಅಧ್ಯಕ್ಷ ಅರ್ಜುನ ಮಿಂಟಿ ನೇತೃತ್ವದಲ್ಲಿ ಮಂಗಳವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ಅಸಮಧಾನ ತೋಡಿಕೊಂಡರು.
ಶಿರಸಿ-ಸಿದ್ದಾಪುರ(Sirsi-Siddapur) ಕ್ಚೇತ್ರದ ದಲಿತ ಕಾಲೋನಿಗಳಲ್ಲಿ ಬೀದಿ ದೀಪಗಳು ಮತ್ತು ಚರಂಡಿ ವ್ಯವಸ್ಥೆಯ ಕೊರತೆ ತೀವ್ರವಾಗಿದೆ. ತಮ್ಮ ಸಮುದಾಯದ ಅಭಿವೃದ್ಧಿಗೆ ತಮ್ಮ ಸಮುದಾಯದ ಶಾಸಕರೇ ಬರಬೇಕು. ಹೀಗಾಗಿ ಕ್ಷೇತ್ರವನ್ನುಮೀಸಲು ಕ್ಷೇತ್ರವಾಗಿ ಬದಲಿಸಬೇಕು. ಇದರ ಜೊತೆಗೆ ಬನವಾಸಿಯೂ 2004ರ ಮೊದಲು ಶಿರಸಿ ಕ್ಷೇತ್ರದಲ್ಲೇ ಇತ್ತು. ಹೀಗಾಗಿ ಯಲ್ಲಾಪುರದಿಂದ(Yallapur) ಬೇರ್ಪಡಿಸಿ ಶಿರಸಿಯಲ್ಲಿ ಉಳಿಸಬೇಕೆಂದರು.
ತಮ್ಮ ಸಮುದಾಯದ ಅಭಿವೃದ್ಧಿಗೆ ತಮ್ಮ ಸಮುದಾಯದ ಶಾಸಕರೇ ಬರಬೇಕು. ಹೀಗಾಗಿ ಕ್ಷೇತ್ರವನ್ನುಮೀಸಲು ಕ್ಷೇತ್ರವಾಗಿ ಬದಲಿಸಬೇಕು. ಮುಂಬರುವ 2028ರ ವಿಧಾನಸಭಾ ಚುನಾವಣೆಗೆ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರಕ್ಕೆ ಬನವಾಸಿಯನ್ನು(Banavasi) ಸೇರಿಸಬೇಕು ಎಂದು ಆಗ್ರಹಿಸಿದರು.
ಕ್ಷೇತ್ರದಲ್ಲಿ ಸೊಪ್ಪಿನ ಬೆಟ್ಟಗಳನ್ನು ಅರಣ್ಯ ಪ್ರದೇಶಗಳು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಆದರೂ ಕೆಲವರು ತಮ್ಮ ಮೂರ‍್ನಾಲ್ಕು ಎಕರೆ ಬೆಟ್ಟವನ್ನು ಐದರಿಂದ ಆರು ಎಕರೆಯಷ್ಟು ಅಧಿಕೃತವಾಗಿ ಗುರುತಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಅವುಗಳನ್ನು ತೆರವುಗೊಳಿಸಿ ಭೂಮಿ ಇಲ್ಲದ ಅನೇಕ ಸಮುದಾಯದವರಿಗೆ ಭೂಮಿ ಹಂಚಿಕೆ ಮಾಡುವಂತೆ ಒತ್ತಾಯಿಸಿದರು.
ಶಿರಸಿ ನಗರದ “ಐದು ರಸ್ತೆ” ವೃತ್ತಕ್ಕೆ ಹೋರಾಟದ ಮೂಲಕ ಅಂಬೇಡ್ಕರ್ ವೃತ್ತ(Ambedkar Circle) ಎಂದು ಹೆಸರಿಡಲಾಗಿದೆ. ಅಲ್ಲಿ ಅಂಬೇಡ್ಕರ್ ಅವರ ಪುತ್ಥಳಿ ಇಡುವ ಬಗ್ಗೆ ನಮ್ಮ ಸಂಘಟನೆ ಹೋರಾಟ ಮಾಡಿದೆ. ಮುಂದಿನ ದಿನಗಳಲ್ಲಿ ಪುತ್ಥಳಿ ಇಡುವ ಬಗ್ಗೆ ಹೋರಾಟವನ್ನು ತೀವೃಗೊಳಿಸುತ್ತೇವೆ ಎಂದು ಹೇಳಿದರು.
ಸಂಘಟನೆಯ ಅಮಿತ್ ಜೋಗಳೇಕರ ಮಾತನಾಡಿ, ಶಿರಸಿ-ಸಿದ್ದಾಪುರ ಭಾಗದ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ದಲಿತರಿಗೆ ಅತಿ ಹೆಚ್ಚು ಶೋಷಣೆ ಆಗುತ್ತಿದೆ. ಆದರೆ ಘಟನೆಗಳು ಮುಖ್ಯವಾಹಿನಿಗೆ ಬರುತ್ತಿಲ್ಲ. ಅಂತಹ ಸಂದರ್ಭಗಳಲ್ಲಿ ಭೀಮ ಘರ್ಜನೆ ಸಂಘಟನೆಯು ಅವರ ಬೆಂಬಲಕ್ಕೆ ನಿಲ್ಲಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪುನೀತ ಮರಾಠೆ, ಶ್ಯಾಮ ದೇಶಭಾಗ, ರಾಜೇಶ ಬಿ, ಹರ್ಷ, ನವೀನ ಕಾನಡೆ, ಅಕ್ಷಯ ಮಡಗಾಂವ್ಕರ, ಸುನೀಲ ಇದ್ದರು.
ಇದನ್ನು ಓದಿ : ಕಾರವಾರದ ಹೊಟೇಲ್ ಮೇಲಿಂದ ಬಿದ್ದ ರಷ್ಯಾ ಪ್ರಜೆ. ಸ್ಥಳಕ್ಕೆ ಎಸ್ಪಿ ಭೇಟಿ.
ಭಟ್ಕಳ ತಾಲೂಕಿನ ಎರಡು ದೇವಸ್ಥಾನದ ಹುಂಡಿ ಕಳ್ಳತನ. ದಾರಿ ಮಧ್ಯೆ ಸಿಕ್ಕ ಹಂಡೆ ಯಾರದ್ದು?